ಈ ಸಂಜೆ ಯಾಕೊ ತಣ್ಣಗಿತ್ತು
ಈ ಸಂಜೆ ಯಾಕೊ ತಣ್ಣಗಿತ್ತು ಬಿಸಿ ಚಹದ ಹಬೆಯಲಿ ಬಿಸಿಲು ಕರಗಿ ಇಳಿಯುತ್ತಿತ್ತು ಗಾಳಿಗೊಡೆದ ತರಗೆಲೆಗಳು ತಂಗಾಳಿಯಲಿ ಅಲೆಯುತ್ತಿತ್ತು ಸುಳಿಯುತಿತ್ತು ತೇಲುತ್ತಿತ್ತು ಭಾವದೆದೆ ಹರಿದ ಬಾನಾಗಿತ್ತು ಹರಿವ ನದಿ ಹೊಸ ಹಾಡೊಂದ ಹೊಸೆದು ಗುನುಗುತ್ತಿತ್ತು ಹೊಳೆಸಾಲ ಬದಿಗೆ ಇಣುಕಿ ರವಿಕಿರಣ ಮಿಂಚುತ್ತಿತ್ತು ಗಾಯನದ ತರಂಗಲೀಲೆಗೆ ಕೊಳಲು ಖುಷಿಯಲಿ ಕುಣಿಯುತ್ತಿತ್ತು ನಾದಾಮೃತದ ಹಾಯಿದೋಣಿಗೆ ಎದೆ ಹಾಡ ಹರಿಗೋಲಾಗಿತ್ತು ನಾಟ್ಯ ಚತುರ ನಟರಾಜನ ಗೆಜ್ಜೆಗೆ ಕಲ್ಲುಗಳೆದ್ದು ಕುಣಿಯುತ್ತಿತ್ತು ಗೀತಸಾರದ ಮುರಾರಿಯ ಕೊಳಲಿಗೆ ಶ್ರೋತೃಗಳ ಕಿವಿ ಮಿಡಿಯುತ್ತಿತ್ತು ದುಷ್ಯಂತನಾಗಮನಕೆ ಸಂಜೆಯ ದನಿ ಶಕುಂತಲೆಯ ನಡಿಗೆಗೆ