ಹೊಸ ವರ್ಷ
*💐🙏ಹೊಸವರ್ಷ💐🙏* ಹೊಸ ವರ್ಷ ಹೊಸ ನಾವು, ಆರಂಭಿಸೋಣ ಹರುಷದಲಿ ಬದುಕಿನ ಹೊಸ ಅಧ್ಯಾಯ. ಮುಂಬರುವ ದಿನಗಳೆಲ್ಲವು ಮೊಹರು ಹಾಕಿ ಮುಚ್ಚಿಟ್ಟ ಲಕೋಟೆಗಳು. ಅಲ್ಲಿ ಏನಂಟು,ಏನಿಲ್ಲ ಭವಿಷ್ಯದ ಸ್ವಾರಸ್ಯ ಭೇದಿಸಲಾಗದ ರಹಸ್ಯ. ಅದಕೆ,... ಇಂದೇ ಹುಟ್ಟು-ಇಂದೇ ಸಾವು ಎಂಬ ಭಾವದಲಿ ಚಲಿಸು. ನಿನ್ನೆ ನಾಳೆಗಳ ಗೊಡವೆ ಯಾಕೆ? ಅನುದಿನವು-ಅನುಕ್ಷಣವು ಹೊಸಗನಸು ಹೊಸ ಯೋಚನೆ ಹೊಸ ಯೋಜನೆಯ ಆತ್ಮವಿಶ್ವಾಸದ ದೋಣಿ ಆಯಿಸು.! ನಿನ್ನೆಯಿಂದ ಕಲಿತು ಇಂದು ಬಾಳಿ, ನಾಳಿನ ಭರವಸೆಯೊಂದಿಗೆ ಹೋಸ ಬುದುಕ ಕಟ್ಟು ನಿಗದಿಸು ನಿತ್ಯ, ಕರ್ಮದ ಚೌಕಟ್ಟು.! ಹಿಂದೆ ಕಳೆದ ದಿನಗಳೆಲ್ಲ ನಿದ್ದೆಯಲಿ ಬಿದ್ದ ಕನಸುಗಳಂತೆ, ಸೋಲು-ಗೆಲುವು ಸುಖ:ದುಃಖ ಸಾವು-ನೋವು ಲಾಭ-ನಷ್ಟದ ರಾಶಿ-ರಾಶಿ ಬವಣೆಗಳು. ಮರೆತು ಮತ್ತೆ ಕಣ್ತೆರದು ಏಳು ಎದ್ದೇಳು, ಆಶಾವಾದಿಯಾಗಿ ಬಾಳು.! ಹೋತ್ತು ಹೋಗದ ಮುನ್ನ ಕಾಲನ ಗರ್ಭಕೆ ಸೇರುವ ಮುನ್ನ ಸಾಧಿಸಿಬಿಡು ಓ ಚಿನ್ನ. ಸಮಯ ಸಾಧಕನ ಸ್ವತ್ತು ಅವರಿಗಷ್ಟೇ ಇದು ಗೊತ್ತು, ಅದರ ಮಹತ್ತು. ಅದಕೆ ಕೊಡೋಣ ಕಿಮ್ಮತ್ತು ತರುವುದು ಹೋಸ ಬಾಳಿಗೆ ಗಮ್ಮತ್ತು..! *💐💐ಹೊಸವರ್ಷದ ಹಾರ್ದಿಕ ಶುಭಾಶಯಗಳು.💐💐* *ಸೋಮನಾಥ.ಡಿ.* *ಪ್ರಾಂಶುಪಾಲರು✍️* ಶ್ರೀ ಸೋಮನಾಥ ಡಿ. ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಅವರು ಬರೆದ " ಹೊಸ ವರ್ಷ" ಕವನ ನಿಮ್ಮ ಪ್ರತಿಸ್ಪಂದನಕ್ಕಾಗಿ. ಸಂಪಾದಕ ಆಲೋಚನೆ.ಕಾಂ