top of page

ಸೈಡ್ ವಿಂಗ್ ನಲ್ಲಿದ್ದಾರೆ ರಕ್ಕಸರು

ಸೈಡ್ ವಿಂಗ್ ನಲ್ಲಿದ್ದಾರೆ ರಕ್ಕಸರು ಝಳಪಿಸುತ್ತ ಕತ್ತಿ ಗುರಾಣಿ ಯಾವಾಗ ಧುಮುಕುತ್ತಾರೆ ರಂಗಸ್ಥಳಕ್ಕೆ ಗೊತ್ತಿಲ್ಲ! ಈಗ ದೇವತೆಗಳ ಸರದಿ ತಕ್ಕ ಸಮಯಕ್ಕೆ ಕಾಯುತ್ತಿದ್ದಾರೆ ಎಡವಿ ಬೀಳುವುದನ್ನು ನಿರಂತರ ಎಚ್ಚರಿರಬೇಕು ಕೆಲಸವಿಲ್ಲದಿದ್ದರೂ ಶಸ್ತ್ರ ಸಿದ್ಧವಾಗಿರಬೇಕು ಯುದ್ಧವೆಂದರೆ ಹಾಗೆಯೇ ಅಲ್ಲವೆ ಶತ್ರುಗಳ ದೌರ್ಬಲ್ಯವನ್ನು ಹಿಡಿಯುವುದು ತನ್ನ ಸಾಮರ್ಥ್ಯಕ್ಕಿಂತಲೂ ವಿಷಕ್ಕೂ ಅಮೃತಕ್ಕೂ ಯುದ್ಧ ಯಾವಾಗಲೂ ಅಮೃತ ಮೇಲೆದ್ದು ಬರುವುದಿಲ್ಲ ಮಥನದ ಫಲಿತ ಅನುಭವಿಸಬೇಕಾದವರು ಪ್ರೇಕ್ಷಕರು ಹಾಗೆ ನೋಡಿದರೆ ವಿಷವೂ ಅಮೃತವೂ ಒಂದೇ ನಾಣ್ಯದ ಎರಡು ಮುಖಗಳು ಒಂದಿಲ್ಲದಿದ್ದರೆ ಇನ್ನೊಂದಕ್ಕೆ ಅರ್ಥವಿಲ್ಲ! -ಡಾ. ವಸಂತಕುಮಾರ ಪೆರ್ಲ

ಸೈಡ್ ವಿಂಗ್ ನಲ್ಲಿದ್ದಾರೆ ರಕ್ಕಸರು
bottom of page