top of page
ಮಂತ್ರವಾಗಲಿ ಮಾತು
ಸಮುದ್ರದ ದಂಡೆಗೆ ಹೋಗಿ ನಿಂತೆ ಮಾತು ಹೊರಡಲಿಲ್ಲ ತುಂಬಿ ಹರಿವ ನದೀದಂಡೆಗೆ ಹೋಗಿ ನಿಂತೆ ಮಾತಾಡಬೇಕೆಂದು ಅನಿಸಲಿಲ್ಲ ಪರ್ವತದ ಬುಡದಲ್ಲಿ ನಿಂತೆ ಬಾಯಿ ಕಟ್ಟಿತು ಮಾತು ಆಕಾಶದತ್ತ ನೋಡುತ್ತ ನಿಂತೆ ಮೂಕವಾಯಿತು ಮಾತು ಅರ್ಥವೇ ಅರ್ಥ ಕಳೆದುಕೊಳ್ಳುವ ಇಲ್ಲಿ ಮಾತಾಡುವುದು ಹೇಗೆ? ಮಾತು ಕೇವಲ ಶಬ್ದ ತುಂಬಿದಂತೆ ಅರ್ಥ ತುಂಬುತ್ತ ತುಂಬುತ್ತ ಮಂತ್ರವಾಗಬೇಕು ಸಮುದ್ರ ನದಿ ಪರ್ವತ ಆಕಾಶ ಅವಕಾಶಗಳೆಲ್ಲ ತುಂಬಿ ಧ್ಯಾನವಾಗಬೇಕು. -ಡಾ. ವಸಂತಕುಮಾರ ಪೆರ್ಲ.
bottom of page