top of page

ಮಂತ್ರದ ಶೃತಿ ಮತ್ತು ದೈವ

ವಿಶಾಲ ಹರವಿನ ಮಂದಿರದ   ಮುಖ್ಯ ದೈವದ ಗರ್ಭಗುಡಿಯ  ವಿಶಿಷ್ಟ ಹೊಳಪಿನ ಕಪ್ಪು  ಶಿಲಾಮೂರ್ತಿಯು ನೀನು.  ದೈವದ ಮುಂದೆ ಬೆಳಗಿದ  ಸಲಿಲ ನೀಲಾಂಜನಗಳು  ನಿನ್ನೆರಡು ಕಣ್ಣುಗಳು, ಮಂದಿರವ  ಬೆಳಗಲು ಇರುವಷ್ಟ ಹೊತ್ತು  ಮುಾರ್ತಿಗಲಂಕರಿಸಿದ ಬಿಳಿ  ಹೂಗಳ ನಗುವು ನಿನ್ನದು.  ಅದರ ಹಬ್ಬುವ ಪರಿಮಳವೂ  ಧೂಪ ಪಾತ್ರೆಯ ಶಿಷ್ಟ ಇಷ್ಟ ಗಂಧ  ನಿನಗಾಗಿ ಪಚ್ಚೆ ಕರ್ಪೂರವಾಗಿ ಉರಿದು.  ಆರತಿಯು ಗಂಧಾಕ್ಷತೆಯು  ನಿನಗೆ ಬೆಳಗಿದ ನನ್ನ  ಶ್ರೇಯಸ್ಸಿಗೆ, ಆಲಯದ ಶಂಖನಾದ  ಮಂತರದ ಉದ್ಛೋಷಣೆಯು  ನಿನ್ನ ಅಸ್ತಿತ್ವವ  ತಿಳಿಸಲು.  ಕಲ್ಯಾಣಿಯ ಪವಿತ್ರ ತೀರ್ಥ  ನಿನ್ನಭಿಷೇಕಕ್ಕೆ, ಮೃದುವಾಗಿ,  ಹಿಡಿದ ಹಿತವಾದ ಶೃತಿ ಹೊರಡಿಸುವ  ತಂಬೂರ ನಿನ್ನ ಸಕಾರತ್ಮಕ ಮಂತ್ರಕ್ಕಾಗಿ.    - ಲಕ್ಷ್ಮೀ ದಾವಣಗೆರೆ

ಮಂತ್ರದ ಶೃತಿ ಮತ್ತು ದೈವ

©Alochane.com 

bottom of page