top of page

ಬೇಲಿಯಾಚೆಗೆ

ಮನೆಯೆದುರು ಅಂಗಳ- ದಲ್ಲಿ,ಸುತ್ತ ಬೇಲಿಹಾಕಿ, ಹೂಗಿಡವೊಂದ ನೆಟ್ಟು, ಗೊಬ್ಬರ ಹಾಕಿ,ನೀರೆರೆದು, ಕಾಳಜಿಯಿಂದ, ಪೋಷಿಸಿದಾಗ ಗಿಡ- ಚಿಗುರಿ ಪಲ್ಲವಿಸುತ್ತದೆ. ಹೂ,,,ಅರಳುವದೇ- ಇಲ್ಲ.ಯಾವ ಕಾಲಕ್ಕೂ,,,. ಗಮ-ಗಮಿಸುವದೇ ಇಲ್ಲ. ಆದರೆ,,,ಕಾಡೆ ಅರಿಯದ, ಎಲೆಯುದುರಿದ, ಸಣಕಲು ಗಿಡವೊಂದು, ಬೇಲಿಯಾಚೆಗೆ ಕಾಡಲ್ಲಿ, ಹೂ,,,ಅರಳಿ,ಪರಿಮಳಿಸಿ, ಮೋಹಕ ನಗು ಬೀರಿ, 'ಕಾಡು'ತ್ತಿದೆಯಲ್ಲ ನನ್ನ.,,! ನನ್ನತ್ತ ನೋಡಿ,ಕೈಮಾಡಿ, ಕರೆಯುತ್ತಿದೆಯಲ್ಲ,,ನನ್ನ,,,! ನನ್ನೊಳಗಿನ ಎಷ್ಟೋ- ಹುಟ್ಟುಗಳು,ಗುಟ್ಟುಗಳು ಹುಟ್ಟಿದಾಗಲೆ ಸಾಯುತ್ತವೆ ಬೇಲಿಯೊಳಗೆ. ಎಷ್ಟೊ ಹುಟ್ಟುಗಳು ಗುಟ್ಟಾಗಿಯೇ ಬದುಕುತ್ತವೆ ಸತ್ತ ಮೇಲೂ,,,, ಬೇಲಿಯಾಚೆಗೂ,,,! --ಅಬ್ಳಿ,ಹೆಗಡೆ.**

ಬೇಲಿಯಾಚೆಗೆ

©Alochane.com 

bottom of page