top of page

ಬೀರೂವಿನ ಸ್ವಗತ

ಮುಟ್ಟಬೇಡಿ ನನ್ನ, ಸೆರಗಲ್ಲಿ ಸುಡುವಂತದ್ದೇನನೋ ಕಟ್ಟಿಕೊಂಡಿರುವೆ,ಮುಟ್ಟಿದರೆ ಸುಟ್ಟುಹೋದೀರಿ ಎಚ್ಚರಿಕೆ, ಬೇಕಿದ್ದರೆ ಈ ನನಗೆ ನೇತು ಹಾಕಿದ ಚೀಟಿಯ ಮೇಲೆ ಬರೆದಿಟ್ಟು ಹೋಗಿ ನೀವು ಹೇಳಬೇಕಿರುವುದೆಲ್ಲವನ್ನು ಚಾಚೂ ತಪ್ಪದೆ ಅಪೀಲು ಮಾಡಿ, ನೀವು ಬರೆದಿರುವುದಕ್ಕೆ ನಿಮ್ಮ ರುಜುವಾತು ಮಾಡಿ, ಬರುವ ಮುಂದಿನ ದಿನವನ್ನ ಈಗಲೇ ತಿಳಿದುಕೊಂಡುಹೋಗಿ ತಪ್ಪದೆ,ತಪ್ಪಿದಿರೋ ಅಲೆದಾಡುವ ಶಿಕ್ಷೆ ಖಾಯಂ! ಬನ್ನಿ ಮತ್ತೆ ಒಳ್ಳೆಯ ಸುದ್ದಿಯನ್ನೊ ವಿಷಯವನ್ನೋ ಹಿಡಿದುಕೊಂಡು ಮಾತನಾಡಿಕೊಂಡು ಹೋಗಲು, ಅಪ್ಪಿತಪ್ಪಿ ಕೂಡ ಈ ಕಡೆ ಸುಳಿಯಬೇಡಿ ಇನ್ನ್ಯಾವುದನ್ನೋ ಈ ಹೊರತಾಗಿ ಹಿಡಿದು ತಂದು ನಿಲ್ಲಬೇಡಿ ಹೊರಗೆ ಸೀಲು ಹೊಡೆದುಕೊಂಡು ಕೂತಿದ್ದೀರಿ ಎನ್ನುವ ಹಾಗೆ, ಗೊತ್ತಲ್ಲ ನಾನ್ಯಾರು ಅಂತ, ನನ್ನ ಕವಾಟದೊಳಗೆ ನಿಮ್ಮಂತ ನೂರಾರು ಅಮಾಯಕರ ಬದುಕಿದೆ, ನಷ್ಟವಿದೆ,ಮಾನವಿದೆ, ಘನತೆಯಿದೆ,ದುರಾದೃಷ್ಟವಿದೆ. ಅವನೊಬ್ಬ,ಅವನು ಒಳಗೆ ಘೋಷದಲ್ಲೆ ಕೂತು ಬೀರುವಿನ ಜನರ ಕುರಿತಾಗಿ ಮಹತ್ತಾದುದನು ಮಾಡಿದ ಹಾಗೆ ಅವಳು ಹೊರಗೆ ಅವನ ಮಹತ್ತಾದುದನ್ನ ನೆಚ್ಚಿಕೊಂಡು ಶತಪತ ತಿರುಗಿದ ಹಾಗೆ, ಜನರಿಗೆ ನ್ಯಾಯ ಕೊಡಿಸಲು. - ಲಕ್ಷ್ಮಿ ಎಚ್ , ದಾವಣಗೆರೆ. ಲಕ್ಷ್ಮಿ ಎಚ್. ಕವಯತ್ರಿಯಾಗಿ ಭರವಸೆ ಮೂಡಿಸುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಇವರು ದಾವಣಗೆರೆಯವರು.ಪ್ರಸ್ತುತ ರಾಣೆಬೆನ್ನೂರ ಕೋರ್ಟನಲ್ಲಿ ಉದ್ಯೋಗಿಯಾಗಿರುವ ಇವರುಓ ಕುವೆಂಪುರವರ ಸಾಹಿತ್ಯದ ಓದಿನ ಬಗ್ಗೆ ಹೆಚ್ಚು ಒಲವುಳ್ಳವರಾಗಿದ್ದು,ಫೋಟೋಗ್ರಫಿ, ಚಿತ್ರಕಲೆ, ಲಹರಿ ಲೇಖನಗಳನ್ನು ಬರೆಯುವುದು ಇವರ ಹವ್ಯಾಸವಾಗಿದೆ.ಅವರ ಕವನ ನಿಮ್ಮ ಓದಿಗಾಗಿ. ಸಂಪಾದಕ.

ಬೀರೂವಿನ ಸ್ವಗತ

©Alochane.com 

bottom of page