top of page

ಬಾಲ್ಯದ ನೆನಪು

ಮುಸ್ಸಂಜೆಯಲ್ಲೊಂದು ಬಾಲ್ಯದ ಮಧುರ ನೆನಪು... ಅಂಗಳದ ಮೂಲೆಯಲ್ಲೊಂದು ಮೊಗ್ಗುತುಂಬಿದ, ಪಾರಿಜಾತದ ಮರ- ದಡಿಯ ನೆಲವ ಗುಡಿಸಿ, ಸಾರಿಸಿ,ಸ್ವಚ್ಛವಾಗಿಟ್ಟು ಮುಸ್ಸಂಜೆಗೇ... . ನಸುಕಿನಲ್ಲೆದ್ದು ಉದುರಿದ ರಾಶಿ,ರಾಶಿ ಘಮ,ಘಮಿಸುವ, ಪುಟ್ಟ,ಪುಟ್ಟ ಬಿಳಿ,ಸುಂದರ ಹೂಗಳ ಜತನದಿಂದ ಹೆಕ್ಕುವ ಅಮ್ಮನ, ನೆನಪಾದಾಗಲೆಲ್ಲಾ... ರಾತ್ರಿಯಾಗಸದಲ್ಲಿ, ಅರಳಿ ನಗುವ ಅಸಂಖ್ಯಾತ, ತಾರೆಗಳ ದಿಟ್ಟಿಸುತ್ತೇನೆ ಆಸೆಗಣ್ಣಿಂದ.... . ಮುಂಜಾನೆಯಲ್ಲಿ ಉದುರಿದರೆ.. ಹೆಕ್ಕಬಹುದೆಂದು. --ಅಬ್ಳಿ,ಹೆಗಡೆ.

ಬಾಲ್ಯದ ನೆನಪು
bottom of page