top of page

ಬದುಕೆoಬ ದಾರಿ

ಬದುಕೆoಬ ದಾರಿಯಲಿ ದೇಹವೆಂಬ ಗಾಡಿಯಲಿ ಎಲ್ಲರದು ಮಿಂಚಿನ ಓಟ ಆಚೀಚೆ ಹಸನುಂಟು ಮುಂದೊಂದು ಗುರಿಯುಂಟು ಚಲಿಸುವೇವು ಕಲಿಯುತ ಪಾಠ ಮುಂದೊಂದು ತಿರುವಿದೆ ಸಾಧ್ಯತೆಗಳು ನೂರಿವೆ ಹಿಡಿ ನಿನ್ನ ನೆಚ್ಚಿನ ದಾರಿ ಆತ್ಮವೇ ಚಾಲಕ ನಿನ್ನ ಆಸೆಗಳ ಮಾಲಕ ಮುಟ್ಟಿಸುವನು ಬಯಸಿದ ಗುರಿ ನಿನ್ನಂತೆಯೆ ನೂರಾರು ಜನ ಪಯಣಿಸುವರು ಅನುದಿನಾ ಹುಡುಕುತ ಬಾಳಿನ ಅರ್ಥ ಎಲ್ಲರ ಜೊತೆ ಗೂಡಿ ಸವಿಯುತ ದೇವರ ಮೋಡಿ ಮರೆಯೋಣ ದಿನ ದಿನದ ಸ್ವಾರ್ಥ ನಿಂತಾಗ ಘನವಾಗಿ ನಿಲ್ಲು ನಿಲುಕುವುದು ಕಾಮನಬಿಲ್ಲು ನಡಿಯುವುದೊಂದೆ ನಿನ್ನ ಕೆಲಸ ನಡೆದಷ್ಟೂ ದಾರಿ ಇದೆ ದಾರಿಯಲ್ಲಿ ಉತ್ತರವಿದೆ ಸವಿಯೋಣ ಬಾಳಿನ ಸೊಗಸ. ನಿಶಾಂತ್ ಎಸ್.

ಬದುಕೆoಬ ದಾರಿ

©Alochane.com 

bottom of page