top of page

ಬದುಕಿನ ಪಠ್ಯ

ಪೈಪೋಟಿಗೆಂಬಂತೆ ಬದುಕಲು ಹವಣಿಸಿದೆವು, ಪ್ರತಿಷ್ಠೆ ಎಂಬುದು ಮೂಲಮಾನವಾಗಿತ್ತು, ಇದೆ ಬದುಕು ಎಂದು ಓಟಕ್ಕಿತ್ತೆವು, ಹಣದೊಂದಿಗೆ ಬದುಕು ರುಚಿಸಿತ್ತು! ಎಲ್ಲೆಗಳನ್ನು ಸೃಷ್ಟಿಸಿಕೊಂಡು ಸೆಣಸಾಡಿದೆವು, ಮಾನವೀಯತೆಯ ಮರೆತ ಈರ್ಷೆಗಳಿತ್ತು, ಕಜ್ಜಾಯ ಕೊಡ್'ಬಳೆ ಕೊಂಡೆವು, ಆದರೆ ಬದುಕಿನ ರುಚಿ ಕೊಳ್ಳಲಾಗಲಿಲ್ಲ! ಏನು ಗೊತ್ತಾ? ಹಣದೊಂದಿಗೆ ಬದುಕು ರುಚಿಸಿತ್ತು!! ಎದುರು ಬಂದುನಿಂತಿಹುದು ಬದುಕಿನ ಪಠ್ಯ!! ಪಠ್ಯವ ಅರಿತು ನಡೆದರೆ ಉಳಿಗಾಲವಿದ್ದಿತು, ಇಲ್ಲವಾದರೆ ಅಳಿಗಾಲವೆ ಸರಿ!! ಜಾತಿ-ಮತಗಳ ಎಲ್ಲೆಯಿಂದಾಗಿ, ರಸ್ತೆಗಳು ರಕ್ತದ ಓಕುಳಿಗಳಾದವು ದ್ವೇಷ-ಅಸೂಯೆಗಳಿಂದಾಗಿ, ಬದುಕು ತೀರ ಬರಡಾಗಿತ್ತು! ಅಂಧಮೌಢ್ಯವು ಇಂದು ಜೊತೆಗಿರದೆ, ವಿವೇಚನೆ ಬೆನ್ನೆಲುಬಾಯಿತು. ವೈರಾಣುವಿನ ಬಗೆಗಿನ ಭವಿಷ್ಯ ನುಡಿಗಳಿದ್ದರು, ವಿಜ್ಞಾನ, ತಂತ್ರಜ್ಞಾನದ ಹೊರತು, ಏನೊಂದು ಸಹಾಯಕ್ಕಿಲ್ಲ ಎಂಬುದು ಸಾಬೀತಾಯಿತು! ಪೈಪೋಟಿಗೆಂಬಂತೆ ಬದುಕಲು ಹವಣಿಸಿದೆವು, ಎಲ್ಲೆಗಳನ್ನು ಮೀರಿ, ಪ್ರತಿಷ್ಠೆಯನ್ನು ಬದಿಗಿರಿಸಿ, ಹಣವನ್ನು ಕ್ಷೀಣವಾಗಿಸಿ, ಎದುರು ಬಂದುನಿಂತಿಹುದು ಬದುಕಿನ ಪಠ್ಯ!! ಪಠ್ಯವ ಅರಿತು ನಡೆದರೆ ಉಳಿಗಾಲವಿದ್ದಿತು, ಇಲ್ಲವಾದರೆ ಅಳಿಗಾಲವೆ ಸರಿ!! ಸಾಕುಮಾಡು ನಿನ್ನ ಮೊಂಡುತನವ, ಹಳೆಯ ಕಾಲಘಟ್ಟದ ಚಿಂತನೆಗಳೆಡೆಗೆ ಹೊರಳುವಂತಾಗಿಸು ನಿನ್ನ ಮನವ! ಪ್ಲೇಗು,ಕಾಲರ,ಕೋರೋನ್ ತಮಾಷೆಯಲ್ಲ, ನಿನ್ನ ಮೊಂಡುತನಕ್ಕೆ ತಕ್ಕ ಪಠ್ಯಗಳೆಂಬುದನ್ನು ಅರಿತು ಬದುಕು ಮಾನವ! - ನಾಗರಾಜ ಕುರ ಬೇಟ ನಾಗರಾಜ ಕುರ ಬೇಟ ಹೊಸ ತಲೆಮಾರಿನ ಭರವಸೆಯ ಕವಿ.ತಮ್ಮ ಕವಿತೆಗಳ ಮೂಲಕ ಕಾವ್ಯ ಪ್ರಪಂಚದಲ್ಲಿ ದಟ್ಟಡಿಯಿಡುತ್ತಿರುವ ನಾಗರಾಜ ಅವರು ಬೆಳಗಾವಿಯವರು, ವಿಜ್ಞಾನ ವಿಷಯದಲ್ಲಿ ಪದವಿಧರರು .ವೃತ್ತಿಯಲ್ಲಿ ಶಿಕ್ಷಕರಾಗಿರುವ ಅವರು ಪ್ರವೃತ್ತಿಯಲ್ಲಿ ಕವಿಗಳು.ಅವರ ಕವಿತೆ ನಿಮ್ಮ ಓದು ಮತ್ತು ಪ್ರತಿಕ್ರಿಯೆಗಾಗಿ. ಸಂಪಾದಕ

ಬದುಕಿನ ಪಠ್ಯ

©Alochane.com 

bottom of page