top of page

ಬಂಧನ ಮುಕ್ತಿ

ಮತ್ತೆ ಎಷ್ಟು ದಿನ
ಕಾಯಬೇಕು
ಬಂಧನ ಮುಕ್ತಿಗೆ
ರೀತಿ ರಿವಾಜುಗಳ
ಲಕ್ಷ್ಮಣರೇಖೆಯ
ಒಳಗಡೆ ಬಂಧಿಯಾಗಿದ್ದೇನೆ
ಮೈ ಸುಟ್ಟು ಕೊಂಡಿದ್ದೇನೆ ನೆತ್ತರಕ್ಕೆ ಸುತ್ತುವ
ಧರೆಯೂ ತೊಯ್ದು
ಸ್ತಬ್ದವಾಗಿದೆ ಚಾಕರಿಯ ಮಾಡುತ್ತ
ಕಾಲು ಸವೆದು
ಬೊಬ್ಬೆ ಎದ್ದಿದೆ
ಕಾಮದಾಹದ ತ್ರಷೆಯನ್ನು
ತಿರಿಸಿದ್ದೇನೆ
ಪಿಂಡ ಬೆಳೆಯುತ್ತಲೆ
ಇದೆ ಉದರದಲಿ
ಬಂಧನ ಮುಕ್ತವಾಗಲು
ಕಾಯುತ್ತಾ ಇದ್ದೇನೆ
ಅಹಲ್ಯೆಗೆ ಶಾಪ ವಿಮೋಚನೆ
ಯಾದಂತೆ ಬಂಧನ ಮುಕ್ತಿಗೆ...............! -ಅನಿಲ ಕಾಮತ, ಸಿದ್ದೇಶ್ವರ ಅನಿಲ್ ಕಾಮತ ಸಿದ್ದೇಶ್ವರ: ಇವರು ಮೂಲತಃ ಗೋಕರ್ಣದ ಸಿದ್ದೇಶ್ವರದವರು.ವ್ಯಾಪಾರಿ ವೃತ್ತಿಯ ಜೊತೆಗೆ ಸಾಹಿತ್ಯದಲ್ಲೂ ಕೃಷಿಮಾಡುತ್ತಿದ್ದಾರೆ. ಇವರ ಚುಟುಕು, ಕವನ ಮತ್ತು ಮಕ್ಕಳ ಕಥೆಗಳು ಈಗಾಗಲೇ ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಅವರು ಉತ್ತಮ ವ್ಯಂಗ್ಯ ಚಿತ್ರಕಾರರೂ ಹೌದು-ಸಂಪಾದಕ

ಬಂಧನ ಮುಕ್ತಿ
bottom of page