top of page

ಪ್ರಶ್ನೆ ಉತ್ತರ ಹುಡುಕಾಟ

ಪ್ರಶ್ನೆ... ಉತ್ತರ...ಹುಡುಕಾಟ  "ದೇವರು ಹಾಗೂ ಪಾಪ-ಪ್ರಜ್ಞೆ- ವಿಷ್ಯ ನನಗೆ ಗೊತ್ತಿಲ್ದೆ ಹೋದರೆ- ನಾನು ನರಕಕ್ಕೆ ಹೋಗ್ತೀನೆಯೆ-?"  "ಇಲ್ಲ ! ವಿಷ್ಯ ನಿನ್ಗೆ ತಿಳಿಯದಿದ್ದರೆ ನೀನು ನರಕಕ್ಕೆಂದೂ ಹೋಗಲಾರೆ.."  "ಅಯ್ಯೋ ! ನೀನ್ಯಾಕೆ ನನ್ಗೆ ಹೇಳಿದೆ- ನನಗ್ಗೊತ್ತಾಯ್ತೀಗ-ನನ್ನಲ್ಲಿ ಕಳಿಸಲೇ- -ನೀ ನನಗಾ ವಿಷಯ ಅರುಹಿದೆ !!!" **** ಈ...ಇದು...ಹೀಗೇ... ನಡೆದಿದೆ- ಶತ ಶತ ಶತ ಶತ ಶತಮಾನಗಳೇ! ದೇವನೆಂಬೋನು ನಮಗೆ ಕಾಣದೆ ದಿಟ್ವಾಗಿ ಅಂತೋನೊಬ್ಬ ಇದ್ದಾನ್ಯೆ ? ಎಷ್ಟು ಬೇಡ್ತಾರೆ ಕೆಲವರು-ಅವ್ನನ್ನೇ- ಅತ್ರೂ-ಕರೆದ್ರೂ ಆ-ಅವ್ನು ಬಾರನೇ ! ಅದೆಷ್ಟು ಪರ್ವ-ಕಾಲ ಸವೆದ್ರೂನೂವೆ ಆ...ಅವನು ಇವ್ರಿಗೆ  ಸಿಗಲೇಯಿಲ್ವೆ ! ಆದರಿವರು  ಹುಡುಕಾಟ ನಿಲ್ಸಿಲ್ಲಾ- ಸಿಗೋತನಕ ಈ ಆಟ ನಿಲ್ಸಾಂಗಿಲ್ಲಾ!! we seek that UNKNOWN- till HE loses & makes known !  ಬಹುಶಃ ಇದೇ ದೊಡ್ಡ ಕಣ್ಣು-ಮುಚ್ಚಾಲೆ- ಪ್ರಶ್ನೆಗಳೆಲ್ಲಾ ಕರಗುಳಿದ ಏಕೈಕ ಪ್ರಶ್ನೆ !!!  'ಸೃಜಿಸಿದವ'-ಒಮ್ಮೆ ನಮ್ಗೆ ಕಾಣಿಸನೆ ? ಅಥ್ವಾ ಒಂದ್ಸಾರಿ ಬಂದ್ಹೋಗಿದ್ದಾನೆಯೆ- ಅವನಿದ್ದಿದ್ರೆ ಬಂದು ಹೋಗಿರೋನ್ರಿ- ಮಾತೊಂದು:"ಅವ್ನಿಲ್ಲಿಯವನೇರಿ !!!" ಕೂಡಲೇ ಅವ್ನನ್ ಕಾಣ್ಲೇಬೇಕಲ್ರಿ-- ಎಲ್ಲದರಲೂ ಅವ್ನಿದ್ದಾನಂತಲ್ಲರೀ- ನೀವ್ನನಗೆ ನಾನ್ನಿಮಗೆ ಅವ ನಮ್ಮೊಳಗೆ ಇಡೀ ಇಳೆಯೊಳಗೆ ಎಳೆ ಎಳೆಯೊಳಗೆ ಸಿಕ್ತಾನೆಯೆ ಹುಡುಕಿದರೆ ನಮ್ಮ-ಒಳಗೆ ಬೇರೆಡೆ ಹುಡುಕದಿರಿ ಈ ಗಳಿಗೆಯಿಂದಲೆ !               -ಶ್ರೇಯಸ್ ಪರಿಚರಣ್...

ಪ್ರಶ್ನೆ ಉತ್ತರ ಹುಡುಕಾಟ

©Alochane.com 

bottom of page