top of page

ಪ್ರಕಟಣೆ

*ಪ್ರಕಟಣೆಯ ಕೃಪೆಗಾಗಿ* *ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೨ನೆಯ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ* *ಪುಸ್ತಕಗಳ ಆಹ್ವಾನ* ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪುಸ್ತಕಗಳಿಗೆ ನೀಡಲಾಗುವ ವಿವಿಧ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗಾಗಿ ಪುಸ್ತಕಗಳ ಆಹ್ವಾನ ಮಾಡಲಾಗಿದೆ.*೨೦೨೨ ಜನವರಿ ೧ ರಿಂದ ಡಿಸೆಂಬರ್ ೩೧ ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ* ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ೨೦೨೨ನೆಯ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು ೫೧ ಪ್ರಕಾರಗಳ ಪುಸ್ತಕಗಳಿಗೆ ವಿವಿಧ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ಅದಕ್ಕಾಗಿ ಬೇರೆ ಬೇರೆ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು, ಇದಕ್ಕಾಗಿ ೫೧ ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರತಿ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು ‘*ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-560 018*’ ಅವರಿಗೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದೆ. *ಹೆಚ್ಚಿನ ಮಾಹಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ತಾಣ www.kasapa.in ಅಥವಾ ದೂರವಾಣಿ ಸಂಖ್ಯೆ – ೦೮೦-೨೬೬೧೨೯೯೧/೨೬೬೨೩೫೮೪ ಮೂಲಕವೂ ಮಾಹಿತಿಯನ್ನು* ಪಡೆಯಬಹುದಾಗಿದೆ. ಈಗಾಗಲೇ ನಿರ್ದಿಷ್ಟ ದತ್ತಿ ಪ್ರಶಸ್ತಿಯಲ್ಲಿ ಒಂದು ಬಾರಿ ಪ್ರಶಸ್ತಿ ಪುರಸ್ಕೃತರಾಗಿದ್ದರೆ ಅದೇ ವಿಭಾಗಕ್ಕೆ ಮತ್ತೆ ಭಾಗವಹಿಸುವಂತಿಲ್ಲ. ಆದರೆ ಬೇರೆ ದತ್ತಿ ವಿಭಾಗಕ್ಕೆ ಪುಸ್ತಕಗಳನ್ನು ಕಳುಹಿಸಲು ಅವಕಾಶವಿರುತ್ತದೆ. ಒಬ್ಬರು ಎಷ್ಟು ಪ್ರಕಾರದ ದತ್ತಿ ವಿಭಾಗಕ್ಕಾದರೂ ಪುಸ್ತಕಗಳನ್ನು ಕಳುಹಿಸಬಹುದು, ಆದರೆ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಮೂರು ಪುಸ್ತಗಳನ್ನು ಸಲ್ಲಿಸಬೇಕು. ಪ್ರಶಸ್ತಿಯ ಪರಿಶೀಲನೆಗೆ ಕಳುಹಿಸಿರುವ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ತಡವಾಗಿ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ. ದತ್ತಿ ಪ್ರಶಸ್ತಿಯಲ್ಲಿ ಭಾಗವಹಿಸುವವರು ಪುಸ್ತಕದ ಮೊದಲ ಪುಟದಲ್ಲಿ ದತ್ತಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವದ ಸಂಖ್ಯೆಯನ್ನು ಸ್ಪಷ್ಟವಾಗಿ ಸೂಚಿಸಬೇಕು. ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ *ಸಂಸ್ಥೆಯಾದ ʻಕನ್ನಡ ಸಾಹಿತ್ಯ ಪರಿಷತ್ತಿನʼ ಆಜೀವ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು*. ಒಂದು ವೇಳೆ ಇನ್ನೂ ಸದಸ್ಯರಾಗಿರದಿದ್ದರೆ ತಕ್ಷಣದಲ್ಲಿ ಆಜೀವ ಸದಸ್ಯತ್ವವನ್ನು ಪಡೆದು ದತ್ತಿ ಪ್ರಶಸ್ತಿಗಳ ಸ್ಪರ್ಧೆಗೆ ಪ್ರವೇಶ ಪಡೆಯಬಹುದು ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿಯವರು* ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುಸ್ತಕಗಳನ್ನು ಕಳುಹಿಸಲು ಜೂನ್ ೨೪ ಕೊನೆಯ ದಿನವಾಗಿರುತ್ತದೆ. *ವಿವಿಧ ೫೧ ದತ್ತಿ ಪ್ರಶಸ್ತಿಗಳು ೧೦,೦೦೦ ರೂ. ಮೊತ್ತದಿಂದ ೨೫೦ ರೂ. ವರೆಗೆ ನಗದು ಬಹುಮಾನಗಳನ್ನು ಒಳಗೊಂಡಿರುತ್ತದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು* ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ಕನ್ನಡ ಸಾಹಿತ್ಯ ಪರಿಷತ್ತಿನ ೨೦೨೨ನೆಯ ಸಾಲಿನ ವಿವಿಧ ದತ್ತಿ ಪ್ರಶಸ್ತಿ ಪಟ್ಟಿ ಇಂತಿದೆ.* ಅ. ಸಂ ದತ್ತಿ ಹೆಸರು ಪ್ರಶಸ್ತಿ ನಗದು ರೂ. ೦೧ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ೧೦,೦೦೦/- ೦೨ ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ ೧೦,೦೦೦/- ೦೩ ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ `ಅನುವಾದ ಸಾಹಿತ್ಯಕ್ಕಾಗಿ' ೧೦.೦೦೦/- ೦೪ ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ ೧೦,೦೦೦/- ೦೫ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ ೧೦,೦೦೦/- ೦೬ ವಸುದೇವ ಭೂಪಾಲಂ ದತ್ತಿ ೧)ಕಾಂದಬರಿ ೨)ಸಣ್ಣ ಕಥಾ ಸಂಕಲನ ೩)ಮಕ್ಕಳ ಸಾಹಿತ್ಯ ಕೃತಿ ೪)ವೈಚಾರಿಕ ಲೇಖನ / ಅನುವಾದಿತ ಕೃತಿ ೫೦೦೦/- ೩೦೦೦/- ೨೦೦೦/- ೨೦೦೦/- ೦೭ ದಿ|| ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ೫೦೦೦/- ೦೮ ದಿ|| ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ ೫೦೦೦/- ೦೯ ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ ೫೦೦೦/- ೧೦ ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ ೫೦೦೦/- ೧೧ ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ ೫೦೦೦/- ೧೨ ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ (ಎಲ್. ಬಸವರಾಜು ದತ್ತಿ) ೫೦೦೦/- ೧೩ ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ ೫೦೦೦/- ೧೪ ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ ೫೦೦೦/- ೧೫ ಶ್ರೀಮತಿ ಗೌರುಭಟ್ ದತ್ತಿ ಪ್ರಶಸ್ತಿ ೫೦೦೦/- ೧೬ ಶ್ರೀಮತಿ ಗಂಗಮ್ಮ ಶ್ರೀ ಟಿ. ಶಿವಣ್ಣ ದತ್ತಿ ೫೦೦೦/- ೧೭ ಡಾ. ಹಾ.ಮಾ. ನಾಯಕ ಸ್ಮಾರಕ ದತ್ತಿ ಪ್ರಶಸ್ತಿ ೫೦೦೦/- ೧೮ ಡಾ. ವೀಣಾ ಶಾಂತೇಶ್ವರ ದತ್ತಿ ೫೦೦೦/- ೧೯ ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ ೨೦೦೦/- ೨೦ ಪಳಕಳ ಸೀತಾರಾಮಭಟ್ಟ ದತ್ತಿ ೨೦೦೦/- ೨೧ ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀ ಬಾಪು ರಾಮಣ್ಣ ದತ್ತಿ ಪ್ರಶಸ್ತಿ ೨೦೦೦/- ೨೨ ದಿ|| ಗೌರಮ್ಮ ಹಾರ್ನ್ಹಳ್ಳಿ ಕೆ. ಮಂಜಪ್ಪ ದತ್ತಿ ೧೦೦೦/- ೨೩ ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ ೧೦೦೦/- ೨೪ ಜಿ.ಆರ್. ರೇವಯ್ಯ ದತ್ತಿ ೧೦೦೦/- ೨೫ ಡಾ|| ಆರ್.ಜೆ. ಗಲಗಲಿ ದತ್ತಿ ೧೦೦೦/- ೨೬ ದಿ|| ಕಾಕೋಳು ಸರೋಜಮ್ಮ ದತ್ತಿ ೧೦೦೦/- ೨೭ ನಾ.ಕು. ಗಣೇಶ್ ದತ್ತಿ ೧೦೦೦/- ೨೮ ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ ೧೦೦೦/- ೨೯ ಶ್ರೀ ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ ಪ್ರಶಸ್ತಿ ೧೦೦೦/- ೩೦ ಮಲ್ಲಿಕಾ ಪ್ರಶಸ್ತಿ ದತ್ತಿ ೫೦೦/- ೩೧ ಅಂತರರಾಷ್ಟ್ರೀಯ ಮಹಿಳಾ ವರ್ಷದ `ಮಹಿಳಾ ದತ್ತಿ' ೫೦೦/- ೩೨ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ೫೦೦/- ೩೩ ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ ೫೦೦/- ೩೪ ಶ್ರೀಮತಿ ನೀಲಗಂಗಾ ದತ್ತಿ ೫೦೦/- ೩೫ ಶ್ರೀಮತಿ ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ೫೦೦/- ೩೬ ಶ್ರೀಮತಿ ಶಾರದಾ ಆರ್. ರಾವ್ ದತ್ತಿ ೫೦೦/- ೩೭ ದಿ|| ಎಚ್. ಕರಿಯಣ್ಣ ದತ್ತಿ ೫೦೦/- ೩೮ ಡಾ|| ಎಚ್. ನರಸಿಂಹಯ್ಯ ದತ್ತಿ ೫೦೦/- ೩೯ ದಿವಂಗತ ಶ್ರೀಮತಿ ಕೆ.ವಿ. ರತ್ನಮ್ಮ ದತ್ತಿ ೫೦೦/- ೪೦ ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿ ೧) ಗದ್ಯಕೃತಿ ೨) ಪಧ್ಯ ಕೃತಿ ೫೦೦/- ೫೦೦/- ೪೧ ಪಿ. ಶಾಂತಿಲಾಲ್ ದತ್ತಿ ೫೦೦/- ೪೨ ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ೫೦೦/- ೪೩ ಕುಂಬಾಸ ಪ್ರಶಸ್ತಿ ದತ್ತ್ತಿ ೫೦೦/- ೪೪ ಪ್ರೊ|| ಡಿ.ಸಿ. ಅನಂತಸ್ವಾಮಿ ದತ್ತಿ ೫೦೦/- ೪೫ `ಸಿಸು' ಸಂಗಮೇಶ ದತ್ತಿ ೫೦೦/- ೪೬ ಶ್ರೀಮತಿ ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ ೫೦೦/- ೪೭ ಶ್ರೀ ಕೆ. ವಾಸುದೇವಾಚಾರ್ ದತ್ತಿ ೫೦೦/- ೪೮ ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿ ೨೫೦/- ೪೯ ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ: (ಮಕ್ಕಳ ಪುಸ್ತಕ ಬಹುಮಾನ ಸ್ಪರ್ಧೆ - ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬರಹಗಾರರಿಗೆ ಮಾತ್ರ ಅವಕಾಶ) ೨೫೦/- ೫೦ ಡಾ|| ಜಿ. ಚಂದ್ರಮೌಳೇಶ್ವರ ದತ್ತಿ ೨೦೦೦/- ೫೧ ಶ್ರೀಮತಿ ಬೋರಮ್ಮ ಗೋವಿಂದಪ್ಪ ದತ್ತಿ ೨೦೦೦/- *ಶ್ರೀನಾಥ್ ಜೆ*. ಮಾಧ್ಯಮ ಸಲಹೆಗಾರರು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು

ಪ್ರಕಟಣೆ

©Alochane.com 

bottom of page