top of page

ಪುಸ್ತಕ

ಪುಸ್ತಕಗಳೆಂದರೆ ದೇವಿ ಸರಸ್ವತಿ!! ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕಾದ ರೀತಿ! ಓದಿನಲ್ಲಿ ಇರಿಸಿ ಶ್ರದ್ಧೆ - ಭಕ್ತಿ -ಪ್ರೀತಿ!! ಪಡೆಯಬಹುದು ವಿಷಯ ಪರಿಣಿತಿ!! ವಿದ್ಯಾರ್ಜನೆಗೆ ವಾಚನಾಲಯ -ಶಾಲೆ! ಜೊತೆಗೆ ಮಾರ್ಗದರ್ಶಿ ಗುರುಗಳು! ಸಾಹಿತ್ಯ ಪ್ರೇಮಿ -ಸಾಹಿತ್ಯಾಸಕ್ತ - ಸಾಹಿತಿಗಳ! ಮನೆಗಳಾಗಿವೆ ಪುಸ್ತಕ ದೇಗುಲಗಳು!! ಜಂಗಮವಾಣಿ - ಈ ಬುಕ್ ಯುಗದಲ್ಲಿ! ಕಡಿಮೆಯಾಗುತ್ತಿದೆ ಪುಸ್ತಕ ಓದು! ಮುಂದಿನ ಪೀಳಿಗೆ ಪ್ರಶ್ನಿಸಬಹುದು ಪುಸ್ತಕವೆಂದರೆ ಏನು.....? ಸಾವಿತ್ರಿ ಶಾಸ್ತ್ರಿ, ಶಿರಸಿ

ಪುಸ್ತಕ

©Alochane.com 

bottom of page