top of page

ನೋವಾಗಿದೆ

ನನ್ನ ಓರೆಗಣ್ಣಲ್ಲೂ ನೋಡದೇ ಎದ್ದು ಹೋದಾಗ ಮನ ಭಾರವಾಗಿದೆ ನಾ ಮಾಡದ ತಪ್ಪಿಗೆ ಒಪ್ಪಿಗೆ ಕೊಟ್ಟು ಕ್ಷಮಿಸು ಎನ್ನುವಾಗ ಮುಖ ಮುಚ್ಚಿಹೋಗಿದೆ ನನ್ನಿರುವು ನಿನ್ನ ಭಿಕ್ಷೆಯೆಂಬ ಭಾವದಲಿ ತೆವಳುವ ಮನಕೆ ಸ್ವಂತ ಪ್ರೀತಿಯ ಗುಟುಕು ಸಾಲದೇ ತೀರದ ದಾಹವಾಗಿದೆ ನನಗೆ ಗೊತ್ತಾಗಿದೆ ನಾನೆಂದರೆ ನೀನು ನೀನೆಂದರೆ ನನ್ನ ವೈಕಲ್ಯವ ಎತ್ತಿ ಸಾರುವ ಊರುಗೋಲು ಅನುಕ್ಷಣವೂ ಬೆಳೆಯುತ್ತಿರುವ ನಿನ್ನ ನೆರಳು ಆ ನೆರಳಲ್ಲೂ ಒಳಗಿಂದ ಪುಟಿದೇಳುವ ಸೆಕೆ ಈ ಪರಪುಟ್ಟನ ಭಯಂಕರ ಒಂಟಿತನಕೆ ನನ್ನೊಳಗಿನ ನನ್ನೊಡನೆ ಗೆಳೆತನ ನೀನಿದ್ದು ನಾನಿಲ್ಲ ನಾನಿದ್ದು ಏನಿಲ್ಲ ನನಗೆ ರೂಢಿಯಾಯ್ತು ನಿನ್ನ ಖಾಲಿ ಜಾಗವ ತುಂಬಲು ನನ್ನ ಕವಿತೆಗಳು ನನ್ನ ಕಣ್ಣೀರಿಗೆ ಹೆಗಲು ಕೊಡುವ ನಿನ್ನ ದಿಂಬುಗಳು ನನಗೆ ಗೊತ್ತಿತ್ತು ನಾನು ನಾನಾಗಿ ತೆರೆಯದೇ ಸುರಿಯದೇ ಹರಿಯದೇ ಕೊಡುವದೇನು ಕೊಂಬುದೇನು...? - ಸುಚಿತ್ರಾ ಹೆಗಡೆ

ನೋವಾಗಿದೆ
bottom of page