top of page

ನೂರೆಂಟು ಜನುಮಗಳಿರಲಿ

ಭೂತಕಾಲದ ಬೆರಗು ವರ್ತಮಾನದ ಲಾವಣ್ಯ ಭವಿಷ್ಯದ ಕಾತರದಲ್ಲಿ ಜನ್ಮಗಳ ಜಾರುಬಂಡಿ ಮರೆವೆಯಲ್ಲೂ ಕನಸ ನಕ್ಷತ್ರ ಕರ್ಮಯೋಗವೇ ಮಹಾಯೋಗ ! ಉಪದೇಶ ಪಾರ್ಥನಿಗಷ್ಟೆ ? ಆಡುಂಬೋಲದ ಸೂತ್ರಿಣಿಯ ಅರಿಕೆ ನಿಜವಾಗಲಿ ಜನ್ಮಗಳ ಕಲ್ಪನೆ ದೇವ ದೇವನೇ ಬೆರಗಾಗಿ ಮಣಿದು ನಿಲ್ಲುವ ಸಹನೆಯಾಗಲು ಹೆಣ್ಣಾಗಿ, ತಾಯಾಗಿ ಜಗದ ಬೆರಗಾಗಿ ಬೆಳಕಾಗಿ ಬಾಳಲು ಒಂದೇನು ಹತ್ತೇನು ನೂರೆಂಟು ಜನುಮವಿರಲಿ. *** ನೂತನ ದೋಶೆಟ್ಟಿ

ನೂರೆಂಟು ಜನುಮಗಳಿರಲಿ

©Alochane.com 

bottom of page