top of page
ನಾನು ಸತ್ತರೆ ನೀವು ಅಳುವಿರಿ
ನಾನು ಸತ್ತರೆ ನೀವು ಅಳುವಿರಿ ನಿಮ್ಮ ಕೂಗು ನನಗೆ ಕೇಳಿಸದು ನನ್ನ ನೋವಿಗೆ ಈಗಲೇ ಮರುಗಲಾಗದೇ ನೀವು ಹೂಮಾಲೆ ಹೊದಿಸುವಿರಿ ನೋಡಲಾದೀತೇನು ನನಗೆ ಚೆಂದನೆಯ ಹೂವೊಂದ ಈಗಲೇ ನೀಡಲಾಗದೇ ನನ್ನ ಗುಣಗಾನ ಮಾಡುವಿರಿ ನನಗೆ ಕೇಳೀತೇ ಹೇಳಿ ಒಂದೆರಡು ಹೊಗಳಿಕೆಯ ಮಾತು ಈಗಲೇ ಆಡಲಾರಿರೇ .. ನನ್ನ ತಪ್ಪುಗಳನ್ನು ಮನ್ನಿಸುವಿರಿ ನನಗರಿವಾಗುವುದೇ ಇಲ್ಲ ಜೀವ ಇರುತ್ತಾ ಕ್ಷಮಿಸಲಾಗದೇ ... ನನ್ನ ಅನುಪಸ್ಥಿತಿಗೆ ಕೊರಗುವಿರಿ ನನಗೆ ತಿಳಿಯುವುದೇ ಇಲ್ಲ ಈಗಲೇ ಭೇಟಿ ಮಾಡಲೇನು .. ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ ಮನೆಯತ್ತ ಧಾವಿಸುವಿರಿ ಶ್ರದ್ಧಾಂಜಲಿ ಹೇಳೋ ಬದಲು ಈವಾಗಲೇ ಸುಖ ದುಃಖ ಹಂಚಿಕೊಳ್ಳಲಾಗದೇನು . ಮಿಂಚಿ ಹೋಗುವ ಮುನ್ನ ಹಂಚಿ ಬಾಳುವ ಬದುಕು ಸಹ್ಯವಲ್ಲವೇನು ..... ✒️ ಡಾ.ಸಿದ್ಧಲಿಂಗಯ್ಯನವರ ಭಾವನಾತ್ಮಕ ಕವಿತೆ.
bottom of page