top of page

ತೆರವಾದ ಬಲಿಪೀಠ

ಓ,,,,ಬಾರತಾಂಬೆಯ ವೀರ ಪುತ್ರ...... ನೀ ಉಗ್ರರ ಗುಂಡಿಗೆ ಗುಂಡಿಗೆಯೊಡ್ಡಿದ್ದು ವ್ಯರ್ಥವಾಗುವದಿಲ್ಲ ಎಂದಿಗೂ. ನೀ ಸತ್ತರೂ ಬದುಕಿ ಬದುಕಿಬರುತ್ತೀಯ ವರ್ಷದಲ್ಲಿ ಕೆಲವುಸಲ-- ರಾಷ್ಟ್ರೀಯ ಹಬ್ಬಗಳಲ್ಲಿ... ಅಗಷ್ಟ ೧೫,ಜನವರಿ೨೬ ಇತ್ಯಾದಿಗಳಲ್ಲಿ..... ಚುನಾವಣೆ ಸಮಯದಲ್ಲಿ... ರಾಜಕೀಯ ಬದಲಾವಣೆಗಳಲ್ಲಿ.... 'ಪರಮವೀರಚಕ್ರ'ಪೋಟೊ ರಾಜಕೀಯ ನಾಯಕರ ಘೋಷಣೆ,ಬಾಷಣಗಳಲ್ಲಿ...! ಬೇಸರಿಸ ಬೇಡ ಗೆಳೆಯ.. ಇದು,,,ಸಹಜ, ಆಟದ- ಮೈ'ದಾನ'ದಲ್ಲಿ ಆಟಗಾರ ಸತ್ತರೂ,ಸೋತರೂ 'ಕ್ಯಾಪ್ಟನ್'ಗಳ ಮುಗುಳ್ನಗು, ಕೈ ಕುಲುಕುವಿಕೆ, ಸಹಜ ನಡೆ ,ನಡೆಯುತ್ತದೆ-- ಇನ್ನೊಂದು 'ಆಟ'ದವರೆಗೆ. ನಾವು ಭಾರತೀಯರು, ನಮ್ಮ ಹಿಂದೆ ನಿನ್ನಂತ- ಸಹಸ್ರಾರು ಬಲಿದಾನಿಗಳ ಇತಿ 'ಹಾಸ' ಇದೆ.ಗೆಳೆಯಾ.... ತೆರವಾಗಿದೆ ಬಲಿಪೀಠ. ರಕ್ತದ ಕಲೆಗಳನ್ನೆಲ್ಲಾ ಕಣ್ಣೀರಿನಿಂದ ಉಜ್ಜಿ ಸ್ವಸ್ಛಗೊಳಿಸಾಗಿದೆ. ಕಣ್ಣಕಟ್ಟಿದ ಬಲಿಪಶು ಮುಂದೊಂದುದಿನ, ಬರಲೇಬೇಕು.ನಮ್ಮೆಲ್ಲರ ಒಳಿತಿಗಾಗಿ ಬರಲೇಬೇಕು ತೆರವಾದ ಬಲಿಪೀಠಕ್ಕೆ. ಆವೇಶದಿಂದ ಕೂಗಾಡುತ್ತೇವೆ, ತ್ರಿವರ್ಣ ಧ್ವಜಹಿಡಿದು....-- "ಭಾರತ ಮಾತಾಕಿ ಜೈ" ಎನ್ನುತ್ತೇವೆ. ಎಂದಿನ ಪರಿಪಾಠದಂತೆ ಎಲ್ಲ ಸುಸೂತ್ರವಾಗಿ ನಡೆಯುತ್ತದೆ,,,ಇಂದೂ ಎಂದೆಂದೂ. ಗೆಳೆಯಾ,,ನೀ ಕಾಣದೂರಿನಲ್ಲಿ ಕುಳಿತು ,ಮುಗುಳ್ನಗುತ್ತಾ ನೋಡುತ್ತಿರು,ನಿನ್ನ,ನಿನ್ನಂಥವರ ಸಾವಿನ ಸಾರ್ಥಕತೆಯ 'ಭಾರತೀಯತೆ'ಯ. --ಅಬ್ಳಿ,ಹೆಗಡೆ.*

ತೆರವಾದ ಬಲಿಪೀಠ

©Alochane.com 

bottom of page