top of page
ಚುಟಕಗಳು
ಅಕ್ಷರಗಳು """"""""""''''''" ತುಂಟ ಅಕ್ಷರಗಳಿವು ಹಿಡಿದು ಪದಗಳಲ್ಲಿ ಬಂಧಿಸುವ ತನಕ ಅರ್ಥವೇ ಆಗುವುದಿಲ್ಲ! ಕವಿತೆಯ ಕಥೆ """""""""""""""""" ಯಾರಿಗೂ ಕಾಣಬಾರದೆಂದು ಅಕ್ಷರಗಳ ರಾಶಿಯಲ್ಲಿ ಅಡಗಿ ಕುಳಿತ ಓ ಕವಿತೆ ಕವಿ ಹುಡುಕಿ ಹೊರಟರೆ ಮುಗಿದಂತೆ ನಿನ್ನ ಕಥೆ ಬೇಸರ """""""""" ಅಣೆಕಟ್ಟೆಯಲ್ಲಿ ತುಂಬಿ ನಿಂತ ನೀರು ಪಕ್ಕದಲ್ಲಿ ಹರಿಯುವ ಕಿರುತೊರೆಯ ನೋಡಿ ತನಗಿಲ್ಲದ ಸ್ವಾತಂತ್ರ್ಯಕ್ಕೆ ಬೇಸರಿಸಿಕೊಂಡಿತು ಬಳ್ಳಿ """"""" ಬೇಲಿಯ ಹಗೆತನದ ಅರಿವಿರದ ಬಳ್ಳಿ ಅಲ್ಲಿಯೇ ಹಬ್ಬಿ ಸುಂದರ ಹೂವ ಅರಳಿಸಿತು ಇಲ್ಲದ ಅರಿವು """"""""""""""""""" ಬತ್ತಿಯಾಗುವ ಮುನ್ನ ಹತ್ತಿಗೂ ಅರಿವಿರಲಿಲ್ಲ ಹೊತ್ತಿ ಉರಿಯುವೆನೆಂದು! ವೆಂಕಟೇಶ ಬೈಲೂರು ಕವಿ ವೆಂಕಟೇಶ ಬೈಲೂರು ಅವರು ಸರಸ್ವತಿಯ ನಿಜದ ನೆಲೆಯ ಭಕ್ತರು. ಅವರ ಅಕ್ಷರ ವ್ಯವಸಾಯ ನಿತ್ಯ ನಿರಂತರ. ಅವರ ಚುಟುಕುಗಳು ನಿಮ್ಮ ಓದಿಗಾಗಿ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
bottom of page