top of page

ಕಾನೂನು ಸೇವಾ ಪ್ರಾಧಿಕಾರ

ಕಾನೂನು ಕುಸುಮ ಕಾನೂನು ಹಾಗೂ ಕಾನೂನಿನ ಅರಿವು ಎನ್ನುವುದು ವಿಶಾಲವಾದ ಸಮುದ್ರದಹಾಗೆ. ತಿಳಿದವರು ಹೇಳುವಂತೆ ನಾನೇನಾದರೂ ಕಾನೂನಿನ ಅರಿವನ್ನು ಹೊಂದಿದೆನೆಂದರೆ, ಅದು ಸಮುದ್ರದ ದಡದಲ್ಲಿ ರುವ ಮರಳಿನ ಕಣದಷ್ಟು ಮಾತ್ರ. ಪ್ರತಿಯೊಬ್ಬರು ಸಮಾಜಮುಖಿ ಯಾಗಿ ಬದುಕುವುದು ಎಷ್ಟು ಸಹಜವೊ, ಹಾಗೇನೇ ಕಾನೂನಿಂದ ವಿಮುಖರಾಗಿ ಬದುಕುವುದು ಕೂಡ ಅಷ್ಟೇ ಅಸಹಜ. ಧರ್ಮೋ ರಕ್ಷತಿ ರಕ್ಷಿತಃ ಯಾರು ಧರ್ಮ ವನ್ನು ರಕ್ಷಣೆ ಮಾಡುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ ಅದೇರೀತಿ ಯಾರು ಕಾನೂನಿನಪಾಲನೆ ಮಾಡುತ್ತಾರೋ,ಕಾನೂನಿಗೆ ಗೌರವ ಕೊಡುತ್ತಾರೋ ಮತ್ತು ಸದುಪಯೋಗ ಪಡಿಸಿಕೊಳ್ಳು ತ್ತಾರೋ ಅವರು ಕಾನೂನಿನ ರಕ್ಷಣೆ ಪಡೆಯಲು ಸಾಧ್ಯ.  ಅಂಕಣ 1 :- ಜನಸಾಮಾನ್ಯ ರಿಗಾಗಿ ಕಾನೂನು.   ಭಾರತ ದೇಶದಲ್ಲಿ ಕಾನೂನು ಸರ್ವಶ್ರೇಷ್ಠವಾದ  ಅಂಗವಾಗಿದೆ. ಇಲ್ಲಿ ಮದುವೆ, ವಿಚ್ಚೆದನ, ಉದ್ಯೋಗ, ವ್ಯವಹಾರ, ದತ್ತಕ, ವ್ಯವಸಾಯ, ಕೈಗಾರಿಕೆ ಹೀಗೆ ಎಲ್ಲವು ಕೂಡ ಕಾನೂನು ಸಮ್ಮತವಾಗಿರ ಬೇಕು.ವಿಪರ್ಯಾಸವೆಂದರೆ ಕಾನೂನಿನ ಸಮರ್ಪಕವಾದ ತಿಳುವಳಿಕೆ ಇಲ್ಲದೇ, ಹಲವರು ಅನೇಕ ಹಕ್ಕು ಸೌಲಭ್ಯಲಿಂದ ವಂಚಿತರಾಗುತ್ತಾರೆ ಮತ್ತು ಸಮಸ್ಯೆಗಳಿಗೆ, ಶೋಷಣೆಗೆ, ದೌರ್ಜನ್ಯಕ್ಕೆ, ಅನ್ಯಾಯಕ್ಕೆ ಒಳಗಾಗಿ ನ್ಯಾಯ ಸಿಗದೇ ಕಷ್ಟಪಡುತ್ತಾರೆ. ಹೀಗಾಗಿ ಜನಸಾಮಾನ್ಯರೂ ಕೂಡ ಕಾನೂನಿನ ಅರಿವನ್ನು ಹೊಂದಬೇಕು ಎನ್ನುವ ದೂರ ದ್ರಷ್ಟಿಯಿಂದ ನಮ್ಮ ದೇಶದಲ್ಲಿ "ಕಾನೂನು ಸೇವೆಗಳ ಫ್ರಾಧಿ ಕಾರಗಳ ಅಧಿನಿಯಮ 1987" ಕೇಂದ್ರೀಯ ಶಾಸನವಾದ ಈ ಅಧಿನಿಯಮ ರಾಷ್ಟ್ರದ್ಯಾಂತ ದಿನಾಂಕ :9/11/1995 ರಂದು ಜಾರಿಗೆ ಬಂದಿರುತ್ತದೆ. ಇದರಡಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ  ಫ್ರಾದಿಕಾರ 1997 ನೇ ವರ್ಷದ ಏಪ್ರಿಲ್ ತಿಂಗಳಲ್ಲಿ ಅಸ್ತಿತ್ವಕ್ಕೆ ಜಾರಿಗೆ ಬಂದಿದ್ದು, ತದನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವೆಗಳ ಫ್ರಾಧಿಕಾರ ಮತ್ತು ತಾಲ್ಲೂಕು ಮಟ್ಟದಲ್ಲಿ ತಾಲೂಕು ಕಾನೂನು ಸೇವಾಸಮಿತಿಗಳು ಅಸ್ತಿತ್ವಕ್ಕೆ ಬಂದಿರುತ್ತದೆ.  ಕಾನೂನು ಸೇವೆಗಳ ಫ್ರಾಧಿಕಾರ ಹಾಗೂ ಸಮಿತಿಗಳ ಮೂರು ಮುಖ್ಯ ದ್ಯೇಯೋ ದ್ದೇಶಗಳೆಂದರೇ :- ಕಾನೂನು ವಿದ್ಯಾ ಪ್ರಸಾರದ ಮೂಲಕ ಜನರಲ್ಲಿ ಕಾನೂನಿನ ಬಗ್ಗೆ ಅರಿವನ್ನು ಉಂಟು ಮಾಡಿ ಆ ಮೂಲಕ ಅವರು ಕಾನೂನು ತಮಗೆ ಕೊಡಮಾಡಿದ ಹಕ್ಕುಗಳನ್ನು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡುವುದು.  ಉಚಿತ ಕಾನೂನು ನೆರವನ್ನು ಪಡೆಯಲು ಅರ್ಹರಾದಂತ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಉಚಿತ ಕಾನೂನು ನೇರವನ್ನು ಒದಗಿಸುವದು.  ಜನತಾ ನ್ಯಾಯಾಲಯ (ಲೋಕ ಅದಾಲತ್)ಗಳನ್ನು ರಚಿಸಿ ಅವುಗಳ ಮೂಲಕ ನ್ಯಾಯಾಲಯಗಳಲ್ಲಿ ಅಥವಾ ಇತರೇ ಕಚೇರಿಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಹಾಗೂ ನ್ಯಾಯಾಲಯದಲ್ಲಿ ಇನ್ನೂ ದಾಖಲಾಗದ ಪ್ರಕರಣಗಳಲ್ಲಿಯ ಉಭಯ ಪಕ್ಷಗಳವರಲ್ಲಿ  ರಾಜಿ ಸಂಧಾನ ಏರ್ಪಡಿಸಿ ಆಪ್ರಕರಣಗಳನ್ನು ಇತ್ಯರ್ಥಗೊಳಿಸುವದು. ಆ ಮೂಲಕ ಜನರಿಗೆ ನೇರವಾಗು ವುದು ಇದರ ಬಹುಮುಖ್ಯ ಗುರಿಯಾಗಿರುತ್ತದೆ.  - ಉಮಾ ಡಿ.ನಾಯ್ಕ ವಕೀಲರು ಉಮಾ ದಾಮೋದರ ನಾಯ್ಕ ಎಂ.ಎ.ಎಲ್.ಎಲ್.ಬಿ ಪದವೀಧರರಾಗಿರುವ ಅಪಾರವಾದ ಜೀವನ ಪ್ರೀತಿಯ ಇವರು ಹೊನ್ನಾವರ ತಾಲೂಕಿನ ಮಾವಿನಕುರ್ವೆ ಊರಿನವರು. ವೃತ್ತಿಯಲ್ಲಿ ವಕೀಲರಾಗಿರುವ ಇವರು ತಮ್ಮ ಪ್ರಾಥಮಿಕ ಶಿಕ್ಷಣ ಬೆಳ್ಳಿ ಕುರ್ವೆ  ಹಾಗೂ ಮಾವಿನಕುರ್ವೆ ಯಲ್ಲಿ ಮಾಧ್ಯಮಿಕ ಶಿಕ್ಷಣ ಶರಾವತಿ ಹೈಸ್ಕೂಲ್ ಹೊಸಾಡನಲ್ಲಿ ಮತ್ತು ಎಸ್. ಡಿ ಎಮ್ ಕಾಲೇಜು ಹೊನ್ನಾವರ ದಲ್ಲಿ ಬಿ.ಎ ಪದವಿ ಯನ್ನು ಎಂ.ಇ.ಎಸ್.ಲಾ ಕಾಲೇಜು ಸಿರ್ಸಿಯಲ್ಲಿ ಕಾನೂನು ಪದವಿ ಯನ್ನು ಕರ್ನಾಟಕ ಮುಕ್ತ ವಿಶ್ವ ವಿದ್ಯಾ  ಲಯ ದಲ್ಲಿರಾಜ್ಯಶಾಸ್ತ್ರವಿಷಯದಲ್ಲಿ ಎಂ.ಎ..ಪದವಿ ಯನ್ನು ಪಡೆದಿದ್ದು ಹದಿನೈದು ವರ್ಷಗಳಿಂದ ಹೊನ್ನಾವರದ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ನಡೆಸುತ್ತಿರುವುದರ ಜೊತೆಗೆ ಕಾನೂನು ಸೇವಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಹಲವಾರು ಕಾನೂನು ಶಿಬಿರ ಗಳಲ್ಲಿ ಕಾನೂನು ಉಪನ್ಯಾಸ ನೀಡಿರುತ್ತಾರೆ ಬರವಣಿಗೆ ಇವರ ಬಾಲ್ಯದ ಹವ್ಯಾಸಗಳಲ್ಲಿ ಒಂದು.ಅವರ ಬರಹಗಳು ನಿಮ್ಮ ಓದಿಗಾಗಿ. ಸಂಪಾದಕ

ಕಾನೂನು ಸೇವಾ ಪ್ರಾಧಿಕಾರ

©Alochane.com 

bottom of page