top of page

ಕಣಿ ಮತ್ತು ಉತ್ತರ

ಕಣಿ ಹೇಳಬಲ್ಲರು ಇವರು ಉತ್ತರವನೂ. ಅವರೇ ಕಟ್ಟಿದ್ದೇನಲ್ಲವಾದರೂ ಕೇಳಿದ್ದು ಬಲ್ಲರಷ್ಟೇ-ಕಣಿ, ಹೇಳಬಲ್ಲವರು. ಒಂದಕೊಂದೇ ಉತ್ತರ ಹೇಳಿಕೊಟ್ಟರು:ಕಣಿ ಅಂದವರು, ಅದರಾಚೆ ಕೇಳಿದವರು ಮತ್ತೊಂದು ಉತ್ತರಕೆ ಹುಡುಕಲೇ ಇಲ್ಲ! ಹುಡುಕಲೇ ಇಲ್ಲ ಉತ್ತರವ, ಬಾಳಿನ ಕಣಿಗೆ, ಬದಲಾಗಬೇಕೆಂಬ ಬಯಕೆ ಹೊತ್ತೇ ಇಹರಿನ್ನು ಶೋಧಿಸುತ್ತಲೇ ಇಹರಿನ್ನೂ ಕಣಿಗೆಂಟು ಪರಿಹಾರ ಹೊಳೆವುದೆಂದು! ಯಾರ ಮೆದುಳಿನಲವಿತು ಕುಳಿತಿಹುದೊ ಏನೋ? ಉತ್ತರ,ಅದರದೇ ಕಾತರ!! *ಗಣಪತಿ ಗೌಡ, ಹೊನ್ನಳ್ಳಿ ಅಂಕೋಲಾ ಕವಿ ಗಣಪತಿ ಗೌಡ ಹೊನ್ನಳ್ಳಿ ಅವರ 'ಕಣಿ ಮತ್ತು ಉತ್ತರ' ಕವನ ನಿಮ್ಮ ಓದಿಗಾಗಿ. ಸಂಪಾದಕ

ಕಣಿ ಮತ್ತು ಉತ್ತರ

©Alochane.com 

bottom of page