ಅವನು ಮತ್ತು ರಾಧೆ !
ಅವನು ಮಧುರೆಯ ಕೃಷ್ಣವೀದಿಯ ಹುಲ್ಲಿನ ಮೆತ್ತನೆಯ ಹಾಸಿನ ಮೇಲೆ ನಡೆದಾಡುತ್ತ.. ರಾಧೆ! ರಾಧೆ ಇನ್ನೆಲ್ಲೊ ಅವನ ನಿರೀಕ್ಷೆಯಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಕಾಣದೆ ಹೋದರು..ದೂರಸಂವೇದನೆಯಲ್ಲೇ ಉಳಿದರು.. ಅವಳು ಸ್ಥಬ್ಧವಾಗಿದ್ದಾಳೆ ಅವನು ಭಗ್ನವಾಗಿದ್ದಾನೆ ಅವನ ಧೈರ್ಯ ಅವಳು ಅವಳ ಸ್ಥೈರ್ಯ ಅವನು ಸುಖವೂ - ದುಃಖವೂ.. ಅವಳ ಮಾಸದ ಚೆಲುವುವಿದೆ ಎದೆಯೊಳಗೆ ಬೆಳದಿಂಗಳಂತೆ ಅವನ ಹೃದಯ ಮಂದಿರದಲ್ಲಿ.. ಗಂಧರ್ವದರಮನೆಗೊರಡುವನು ನಿರಾಶೆಯನು ಸಹಿಸದೆ ಹೆಜ್ಜೆ ಕಿತ್ತಿಡಲು ತೀವ್ರ ಬೇಸರ ಅವಳ ನೆನಕೆಯಲಿ ಅವಳಿಷ್ಟದ ಮುರಳಿಯನೊಮ್ಮೆ ನುಡಿಸಲೊರಡುವನು ಉಸಿರನೂದಲು ಮತ್ತದೇ ಭಿನ್ನಷಡ್ಜ ಝೇಂಕರಿಸುವುದು ಅಲ್ಲೂ ನಿರಾಶೆ.. ನಾದದಂತ ಅವಳ ಕಾಣದಿರುವಿಕೆಗೆ ಅವನ ಕೊಳಲುಲಿ ರಾಗ ಹೊಮ್ಮಿಸುವುದ ಮರೆತಿದೆ ಅವನನ್ನು ಸ್ವರದಲ್ಲೇ ಕಾಣಬೇಕು ಉತ್ತರವಿಲ್ಲ ಬೇರೆ ಮನದಲ್ಲೇ ರೂಪಿಸಿಕೊಳ್ಳಲನುವಾಗುವಳು ಅಲ್ಲೆ ಅವನ ಕಾಣದೆ..ನಿರಾಸೆ ಅವಳಿಗೂ ಕಾಡಿದೆ ಅವನಂತೆ ಬಹುಶಃ ಗೊತ್ತಿಲ್ಲ ಶಾಮನಿಗೆ ಅಲ್ಲಿನ ಅವಳಿರುವುದೂ ಅಲ್ಲೇ..ಅದೇ ಬೀದಿಯಲಿ ಆದರಿಬ್ಬರಿಗೂ ಮುಖಭೇಟಿ ಆಗಲಾರದೇಕೊ.. ಎಲ್ಲವೂ ಅವನಿಚ್ಛೆಯೆಂದು ನಡೆಯುವಳು.. ಲಕ್ಷ್ಮಿ ದಾವಣಗೆರೆ ಆಲೋಚನೆ.ಕಾಂ ಬಳಗದ ಕ್ರಿಯಾಶೀಲ ಕವಯತ್ರಿ. ಬಹು ಬಗೆಯ ಭಾವಗಳನ್ನು ತಾತ್ವಿಕ ನೆಲೆಯಲ್ಲಿ ಕಟ್ಟಿಕೊಡುವ ಚಿಂತಕಿ ಲಕ್ಷ್ಮೀ ದಾವಣಗೆರೆ ಅವರ " ಅವನು ಮತ್ತು ರಾಧೆ" ಕವಿತೆ ನಿಮ್ಮ ಓದು ಮತ್ತು ಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ