top of page

ಅಲೆಯ ಚರಿತೆ

ದಂಡೆ ಮುಟ್ಟಲೆಂದೇ ತೆರೆಗಳ ಓಟ ನಡೆದೇ ಇದೆ: ಪಕ್ಕದ ಕಿರು ಅಲೆಗಳ ಮೆಟ್ಟದೇ ಮುಟ್ಟಿ ಕೂಡುತ್ತ ಬೃಹದಲೆಯಾಗಿ ಅವತಾರ ತಾಳಿ ಕಾಲದ ಮೇರೆಗಳ ಮೀಟಿ ದಾಟಿ. ‌‌‌‌ *** ಮೊದಲ ಅಲೆಯ ಮೊದಲ ಓಟದ ಆರಂಭಕೆ ಎಷ್ಟು ವರ್ಷಗಳ ಇತಿಹಾಸ!? ಬರೆದ ದಾಖಲೆಯೆಲ್ಲ ತಿಂದ ಒರಲೆಯ ಚರಿತೆ, ಮತ್ತಾವ ಒರಲೆಗೆ ಊಟವಾಯ್ತೋ!? *** ಆದರೂ ಅಲೆಯ ಸಂತಾನ ಆಂತ್ಯವಾಗದು ಎಂದೂ ಅಲೆ ಹಿರಿ ಅಲೆ ಕಿರು ಅಲೆ ಅಲೆ ಅಲೆ ಅಲೆಯ ಪೀಳಿಗೆ ಚಿರಾಯು ಕುಲ ಬೆಳೆದು ತೂಗುವ ಕಡಲ ಅಮ್ಮನ ಮಡಿಲು ಇರುವವರೆಗೆ! ಗಣಪತಿ ಗೌಡ,ಹೊನ್ನಳ್ಳಿ

ಅಲೆಯ ಚರಿತೆ

©Alochane.com 

bottom of page