top of page

ಅರ್ಧ ಸತ್ಯ

ಕಾಳ ರಾತ್ರಿಯಲ್ಲಿ ಕಿರುಬೆರಳನ್ನು ಹಿಡಿದು ನುಣ್ಣಗೆ ನಡೆಯಬಾರದಿಲ್ಲಿ ಕತ್ತಲೆ ನೆತ್ತಿಗೇರುವ ಸರಿಹೊತ್ತಿನಲ್ಲಿ ಅಂಗೈಯೇ ಕತ್ತಲೆಗೆ ನೆರಳಾಗುವ ತಿಳಿಹೊತ್ತಲ್ಲಿ ಹಚ್ಚಿಟ್ಟ ದೀಪದ ದೇದೀಪ್ಯಮಾನ ಬೆಳಕಲ್ಲಿ ತುಂಡು ರಾತ್ರಿಯೊಂದು ಬೆಳಕಿನ ಕನ್ನಡಿಯಲ್ಲಿ ಮುಖ ಸಿಂಡರಿಸಿಕೊಂಡು ಮತ್ತೆ ಮತ್ತೆ ಹಾದ ಬಿರುಗಾಳಿಗೆ ಮೈಯೊಡ್ಡಿ ದೀಪದೆದೆಯಲ್ಲಿ ಅಗ್ನಿ ಗೂಡುಕಟ್ಟಿ ದೀಪದ ಮುಖ ಕರ್ರಗಾಗಿ ಕತ್ತಲು ನೆರೆಯುತ್ತದೆ ಅನಂತ ಆಕಾಶವೂ ಮೌನ ತಬ್ಬುತ್ತದೆ ಎದೆ ಎದೆಯಲಿ ಚಿಗುರಿದ ಪ್ರೀತಿಯ ಪೃಣತೆಯ ಕವಲು ದಾರಿಯಲಿ ಒಬ್ಬಂಟಿ ಬಿಟ್ಟುಹೋಗಬಾರದಿಲ್ಲಿ ಕಾದು ಕುಳಿತ ಕಾಳ್ಗಿಚ್ಚಿನ ಕಾಡ ಸಂಚಿನಲ್ಲಿ ಕರಾಳತೆಯ ಮುಖವಾಡದ ಕತ್ತಲಿನಲ್ಲಿ ಬೆಳಕಿನ ಹಾದಿ ಸುಗಮವಲ್ಲ ಅದಕ್ಕೆ ರಾತ್ರಿ ಸೂರ್ಯನಿಲ್ಲಇರುಳು ನಕ್ಕಂತೆ ಕಂಡರೂ ನಂಬಬಾರದು ಹಸೀ ರಾತ್ರಿಯಲ್ಲಿ ಕಂಡದ್ದೆಲ್ಲವೂ ಸತ್ಯವಲ್ಲ ಕಗ್ಗತ್ತಲ ಕ್ರೂರತೆಗೆ ಬೆಚ್ಚಿಬಿದ್ದ ಆರ್ದ್ರತೆಯ ತುಟಿಗಳು ಅಮರ ಗೀತೆಯ ಗುನುಗುವುದಿಲ್ಲ ಕಪ್ಪಿಟ್ಟಿರುವ ಅನಂತ ಆಕಾಶಕ್ಕೆ ನಕ್ಷತ್ರದ ಹಾದಿ ಕಾಣುವುದಿಲ್ಲ ನಿಂತಂತೆ ಭ್ರಮಿಸಿರುವ ಮಲಗಿರುವ ಮರ ನೆರಳು ಬೀಳದೆ ಮೈಯೊರಗಿದ ಕತ್ತಲೆಯ ಗರ್ಭದಲ್ಲಿ ಬೀಜಾಂಕುರ ಬೆಳಕಿನ ಮುಖ ಅದಿನ್ನೂ ದೂರ ಮರಣದ ತೊಟ್ಟಿಲಲ್ಲಿ ಮಿಸುಕಾಡುವ ಸಂಜೆ ಬೈಗು ನುಂಗಿದ ಇರುಳ ರಾತ್ರಿಯಲ್ಲಿ ಅರ್ಧ ಚಂದ್ರನ ದರ್ಶನ ಸತ್ತಂತೆ ನಟಿಸುವ ಬೆಳಕು ಹಾಯುವವರೆಗೂ ನಿಶಾಚರ ರಾತ್ರಿಯ ಕಾರುಬಾರು ಅರ್ಧ ಸತ್ಯ ಮಾತ್ರ ಮಂಜುನಾಥ ನಾಯ್ಕ ಯಲ್ವಡಿಕವೂರ

ಅರ್ಧ ಸತ್ಯ
bottom of page