top of page

ಅಡಿಕೆ ತೋಟದ ಸವಕಳಿಗೆ ಹೊಸ ಆವಿಷ್ಕಾರ ‘ಮಲ್ಚಿಂಗ್’ ಪದ್ಧತಿ.

ನೂತನ ಪ್ರಯೋಗಗಳು, ಹೊಸ ತಂತ್ರಜ್ನಾನ, ನೂತನ ಆವಿಷ್ಕಾರಗಳು ಕೃಷಿಯಲ್ಲಿ ಅವಶ್ಯಕ ಮತ್ತು ಅನಿವಾರ್ಯ ಕೂಡ. ಅದಕ್ಕೆ ಕೃಷಿ ರಂಗದಲ್ಲಿ ಮುಕ್ತಾಯ ಎಂಬುದೆ ಇಲ್ಲ. ಅಡಿಕೆ ತೋಟಿಗರಿಗೆ ಭೂಸವಕಳಿ ಎಂಬುದು ಅನಾದಿಕಾಲದಿಂದಲು ಬಳುವಳಿಯಾಗಿ ಬಂದ ಸಮಸ್ಯೆ. ಮಳೆಗಾಲದಲಿ ್ಲ ಮಳೆ ನೀರು ತೋಟದ ಮಣ್ಣನ್ನು ಕೊಚ್ಚಿಕೊಂಡು ಹೋಗುವದರ ಜೊತೆಗೆ ಹಾಕಿದ ಗೊಬ್ಬರವನ್ನು ಇಲ್ಲದಂತೆ ಮಾಡುತ್ತದೆ. ಅದಕ್ಕೆ ರೈತ ಅನೇಕ ಪರಿಹಾರಗಳನ್ನು ಕಂಡು ಕೊಂಡರು ಈ ಸವಕಳಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಅದಕ್ಕೆ ಅಡಿಕೆ ಬೆಳೆಗಾರ ಕಂಡುಕೊಂಡ ಹೊಸ ಆವಿಷ್ಕಾರ ‘ಮಲ್ಚಿಂಗ್’ ಪದ್ಧತಿ. ಈ ಪದ್ಧತಿ ದಿನದಿಂದ ದಿನಕ್ಕೆ ಅಡಿಕೆ ಬೆಳೆಗಾರನಿಗೆ ಹತ್ತಿರವಾಗುತ್ತಿದೆ. ಅಡಕೆ ಬೆಳೆಯುವ ಪ್ರದೇಶಗಳ ಕೃಷಿ ಸಹಕಾರ ಸಂಘಗಳಲ್ಲಿ ಸಾಮಾನ್ಯವಾಗಿ ದೊರೆಯುವ ಮೂರು ಅಡಿ ಅಗಲದಲ್ಲಿ ನಮ್ಮ ಅನುಕೂಲತೆಗೆ ತಕ್ಕಹಾಗೆ ಉದ್ದನೆಯ ಮಲ್ಚಿಂಗ್ ಶೀಟನ್ನು ಭರಣದ ಕಾಲುವೆ ಗುಂಟ ಹಾಸುತ್ತ ಹೋದರೆ ‘ಮಲ್ಚಿಂಗ್’ ಪದ್ಧತಿ ಅಳವಡಿಸಿದಂತಾಗುತ್ತದೆ. ಹೊದಿಕೆ ಸರಿಯದಂತೆ ತೋಟದಲ್ಲಿ ಅನಾಯಾಸವಾಗಿ ಸಿಗುವ ಭಾರವನ್ನು ಹೇರಿದರೆ ‘ಮಲ್ಚಿಂಗ್’ ಪದ್ಧತಿ ಮುಗಿದಂತೆ. ಹೆಚ್ಚು ಮಳೆ ಬೀಳುವ ಪ್ರದೇಶಗಳಿಗೆ ಈ ಮಲ್ಚಿಂಗ್ ವರದಾನ ಎನ್ನುತ್ತಾರೆ ವಿನೋದ ಭಟ್ಟರು. ಕಳೆದ ಎರಡು ವರುಷಗಳಿಂದ ಈ ಪದ್ಧತಿಗೆ ಮೊರೆ ಹೋಗಿರುವ ಆಧುನಿಕ ಕೃಷಿಕ/ಶಿಕ್ಷಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶೇವ್ಕಾರಿನ ವಿನೋದ ಭಟ್ಟರು ‘ ತೋಟದ ಮೂಲ ಮಣ್ಣು, ನಾವು ನೀಡಿದ ಮಣ್ಣು ಹಾಗೂ ಗೊಬ್ಬರ ಈ ಮಲ್ಚಿಂಗ್ ಪದ್ಧತಿಯ ಮೂಲಕ ರಕ್ಷಿಸಿ ಕೊಳ್ಳ ಬಹುದಲ್ಲದೆ ಸಂಪೂರ್ಣ ಕಳೆಯನ್ನು ನಿಯಂತ್ರಿಸ ಬಹುದು’ ಎನ್ನುತ್ತಾರೆ. ವಿನೋದ ಭಟ್ಟರ ಪ್ರಕಾರ ‘ಈ ಮಲ್ಚಿಂಗ್ ಹೊದಿಕೆ ಕಿಲೊ ಒಂದಕ್ಕೆ 70 ರೂ. ಇದ್ದು ಎಕರೆಗೆ ಸಾಮಾನ್ಯವಾಗಿ 30 ಕಿಲೊ ಬೇಕಾಗುತ್ತದೆ. ಈ ಪದ್ಧತಿಯಲ್ಲಿ ಕೂಲಿ ಹಾಗೂ ಸಮಯದ ಉಳಿತಾಯ ವಾಗುತ್ತದೆ. ಮಳೆಗಾಲದ ನಂತರ ಈ ಹೊದಿಕೆಯನ್ನು ರಕ್ಷಣಾತ್ಮಕವಾಗಿ ತೆಗೆದಿಟ್ಟರೆ ಐದು ವರುಷಗಳವರೆಗೆ ಉಪಯೋಗಿಸ ಬಹುದು’ ಎಂದು ಅಭಿಪ್ರಾಯ ಪಡುತ್ತಾರೆ. ಮಾಹಿತಿಗಾಗಿ: ವಿನೋದ ಭಟ್ಟ-9480507944 - ಬೀರಣ್ಣ ನಾಯಕ ಮೊಗಟಾ. ಸ್ವಾತಂತ್ರ್ಯ ಯೋಧರ ನೆಲೆವೀಡಾದ,ಕರ್ನಾಟಕದ ಬಾರ್ಡೋಲಿ ಎಂದು ಹೆಸರಾದ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮದ ಸ್ವಾತಂತ್ರ್ಯ ಯೋಧ ಸಣ್ತಮ್ಮ ಯಾನೆ ದೇವಣ್ಣ ನಾಯಕ ಅವರ ಕಿರಿಯ ಮಗ ಬೀರಣ್ಣ ನಾಯಕ ಮೊಗಟಾ ಅವರು ತಮ್ಮ ಸೃಜನಶೀಲ ಚಟುವಟಿಕೆಗಳಿಂದ ಮೊಗಟಾ ಊರಿನ ಹೆಸರು ಜನ ಮನದಲ್ಲಿ ಶಾಶ್ವತವಾಗಿ ನೆಲೆನಿಲ್ಲುವಂತೆ ಮಾಡಿದ ಮಾಡಿದ ಬೀರಣ್ಣ ನಾಯಕ ಮೊಗಟಾ ಅವರು ತಮ್ಮ ಅಪರೂಪವೆನಿಸುವಂತಹ ಪತ್ರಿಕಾ ಬರವಣಿಗೆಗಳಿಂದ, ನುಡಿ ಚಿತ್ರಗಳಿಂದ, ನಾಡಿನಾದ್ಯಂತ ಚಿರ ಪರಿಚಿತರು. ಪದವಿ ಪೂರ್ವ ಶಿಕ್ಷಣ ಮಂಡಳಿಯ ಬೆಸ್ಟ ಉಪನ್ಯಾಸಕ,ಬೆಸ್ಟ ಎನ್.ಎಸ್.ಎಸ್.ಆಫೀಸರ, ಬೆಸ್ಟ ಪ್ರಿನ್ಸಿಪಾಲ್ ಪ್ರಶಸ್ತಿಯನ್ನು ತಮ್ಮ ದಣಿವರಿಯದ  ಕಾರ್ಯ ಕೌಶಲ್ಯಕಾಗಿ ಪಡೆದುಕೊಂಡವರು.ಜನಾನುರಾಗಿಯಾದ ಬೀರಣ್ಣ ನಾಯಕ ತಮ್ಮ ಜನಪರ ಚಟುವಟಿಕೆಗಳ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತು ಯಲ್ಲಾಪುರದ ಪರಿಸರದಲ್ಲಿ ಮನೆ ಮಾತಾಗಿರುವ  ಸ್ನೇಹ ಜೀವಿ .- ಸಂಪಾದಕರು

ಅಡಿಕೆ ತೋಟದ ಸವಕಳಿಗೆ ಹೊಸ ಆವಿಷ್ಕಾರ ‘ಮಲ್ಚಿಂಗ್’ ಪದ್ಧತಿ.

©Alochane.com 

bottom of page