top of page

ಹೊಸ ವರ್ಷ

*💐🙏ಹೊಸವರ್ಷ💐🙏*

ಹೊಸ ವರ್ಷ

ಹೊಸ ನಾವು,

ಆರಂಭಿಸೋಣ

ಹರುಷದಲಿ

ಬದುಕಿನ

ಹೊಸ ಅಧ್ಯಾಯ.

ಮುಂಬರುವ ದಿನಗಳೆಲ್ಲವು

ಮೊಹರು ಹಾಕಿ ಮುಚ್ಚಿಟ್ಟ

ಲಕೋಟೆಗಳು.

ಅಲ್ಲಿ ಏನಂಟು,ಏನಿಲ್ಲ

ಭವಿಷ್ಯದ ಸ್ವಾರಸ್ಯ

ಭೇದಿಸಲಾಗದ ರಹಸ್ಯ.

ಅದಕೆ,...

ಇಂದೇ ಹುಟ್ಟು-ಇಂದೇ ಸಾವು ಎಂಬ ಭಾವದಲಿ ಚಲಿಸು.

ನಿನ್ನೆ ನಾಳೆಗಳ ಗೊಡವೆ ಯಾಕೆ?

ಅನುದಿನವು-ಅನುಕ್ಷಣವು

ಹೊಸಗನಸು

ಹೊಸ ಯೋಚನೆ

ಹೊಸ ಯೋಜನೆಯ

ಆತ್ಮವಿಶ್ವಾಸದ ದೋಣಿ

ಆಯಿಸು.!

ನಿನ್ನೆಯಿಂದ ಕಲಿತು

ಇಂದು ಬಾಳಿ,

ನಾಳಿನ ಭರವಸೆಯೊಂದಿಗೆ

ಹೋಸ ಬುದುಕ ಕಟ್ಟು

ನಿಗದಿಸು ನಿತ್ಯ,

ಕರ್ಮದ ಚೌಕಟ್ಟು.!

ಹಿಂದೆ ಕಳೆದ ದಿನಗಳೆಲ್ಲ

ನಿದ್ದೆಯಲಿ ಬಿದ್ದ

ಕನಸುಗಳಂತೆ,

ಸೋಲು-ಗೆಲುವು

ಸುಖ:ದುಃಖ

ಸಾವು-ನೋವು

ಲಾಭ-ನಷ್ಟದ

ರಾಶಿ-ರಾಶಿ

ಬವಣೆಗಳು.

ಮರೆತು ಮತ್ತೆ

ಕಣ್ತೆರದು ಏಳು ಎದ್ದೇಳು,

ಆಶಾವಾದಿಯಾಗಿ ಬಾಳು.!

ಹೋತ್ತು ಹೋಗದ ಮುನ್ನ

ಕಾಲನ ಗರ್ಭಕೆ ಸೇರುವ ಮುನ್ನ

ಸಾಧಿಸಿಬಿಡು ಓ ಚಿನ್ನ.

ಸಮಯ ಸಾಧಕನ ಸ್ವತ್ತು

ಅವರಿಗಷ್ಟೇ ಇದು ಗೊತ್ತು, ಅದರ ಮಹತ್ತು.

ಅದಕೆ ಕೊಡೋಣ ಕಿಮ್ಮತ್ತು

ತರುವುದು ಹೋಸ ಬಾಳಿಗೆ ಗಮ್ಮತ್ತು..!

*💐💐ಹೊಸವರ್ಷದ ಹಾರ್ದಿಕ ಶುಭಾಶಯಗಳು.💐💐*

*ಸೋಮನಾಥ.ಡಿ.*

*ಪ್ರಾಂಶುಪಾಲರು✍️*

ಶ್ರೀ ಸೋಮನಾಥ ಡಿ. ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಅವರು ಬರೆದ " ಹೊಸ ವರ್ಷ" ಕವನ ನಿಮ್ಮ ಪ್ರತಿಸ್ಪಂದನಕ್ಕಾಗಿ. ಸಂಪಾದಕ ಆಲೋಚನೆ.ಕಾಂ

49 views0 comments
bottom of page