top of page

ಹುಚ್ಚು ಹಿಡಿದಿದೆ

ಬೆಂಕಿಯನ್ನು ಸೃಷ್ಟಿಸಿ ಮನುಜ ಬೆಳಕನ್ನೇ ನಿಯಂತ್ರಿಸಿದ

ಎಲ್ಲವನ್ನು ಬದಲಿಸುವೆ ಎಂದು ಗರ್ವದಿಂದ ಬೀಗಿದ

ಪೃಕೃತಿಯ ನಿರ್ಮಾಣದ ನಿಯಮಗಳ ಮೀರಿ..

ಕಂಡಕಂಡಲ್ಲಿ ಕಡಿದರೆ ಆಗುವುದೇ ದಾರಿ?


ಎತ್ತ ನೋಡಿದರತ್ತ ಲೈಟು

ಕತ್ತಲೆಯ ಸುಖವನ್ನೇ ಮರೆಯಿಸಿತು

ಕೈಯಲ್ಲಿ ಹಿಡಿದ ಮೊಬೈಲು ಯೋಚನಾಶಕ್ತಿಯನ್ನೇ ಕದಡಿತು

ನಿಜ ಸೌಂದರ್ಯದ ಪರಿಯ ಮರೆತೇಬಿಟ್ಟೆವು

ಕಣ್ಣ ಕುಕ್ಕುವ ಲೈಟಿನಲ್ಲಿ ಜೀವನವನ್ನೇ ಅಡವಿಟ್ಟೆವು


ಎತ್ತ ಕೇಳಿದರತ್ತ ಅಬ್ಬರಿಸುವ ಸದ್ದು

ಹಾರ್ನು ಮೈಕುಗಳ ಕಾರುಬಾರಿಗೆ ಎಲ್ಲಿದೆ ಸರಹದ್ದು

ಹಕ್ಕಿಗಳ ನಿನಾದ ಭೋರ್ಗರೆವ ಸಮುದ್ರದ ಕೊರೆತ ಯಾರಿಗೆ ತಾನೇ ಬೇಕು

ಯೌಟ್ಯೂಬ್ ಫೇಸ್ಬುಕ್ನಲ್ಲಿ ಲೈಕು ಮಾಡಿದರೆ ಸಾಕು


ಎಲ್ಲ ಕೆಲಸಕ್ಕೂ ಮಷಿನುಗಳೇ ಬೇಕು

ತಾನು ಕುಂತಲ್ಲಿ ಜಗತ್ತೇ ಬರಬೇಕು

ಪೃಕೃತಿಯ ಪಳಗಿಸಲು ಹೋಗಿ ತಾನು ಸೆರೆಯಾದ

ನೈಜ್ಯತೆಯ ಮರೆತು ಮಿಥ್ಯವಾಸ್ತವದಲ್ಲಿ ಮರೆಯಾದ


ಕೊರೊನ ಭಯೋತ್ಪಾದನೆಯಂತಹ ಮಹಾಮಾರಿಗಳು ಬಂದಿಹವು

ವಿಶ್ಲೇಷಣೆಯ ಸಮಯವಿದು ಎಂದು ಸಾರಿ ಸಾರಿ ಹೇಳುತಿಹವು

ಇನ್ನಾದರೂ ಎಚ್ಚೆತ್ತುಕೊ ಮನುಜ ಪೃಕೃತಿ ಸಂದೇಶ ಕೊಡುತ್ತಿದೆ

ಇಲ್ಲವಾದಲ್ಲಿ ನಂಬು ನನ್ನ

ಮಾನವಜಾತಿಗೇ ಹುಚ್ಚು ಹಿಡಿದಿದೆ


- ನಿಶಾಂತ್ ಶ್ರೀಪಾದ

125 views1 comment
bottom of page