top of page

ಸಾವಿತ್ರಿಬಾಯಿ ಪುಲೆ




*💐🙏ಮಹಾತಾಯಿ*

*ಸಾವಿತ್ರಿಬಾಯಿ ಫುಲೆ💐🙏*



*ಫುಲೆ,*

'ಹೂ'ಮಾರುವ

ಹೂವಾಡಿಗರು.

ದ್ವೇಷವೆಂಬ

ಮುಳ್ಳುಗಳಲಿ

ಅರಳಿದ

ಪ್ರೀತಿಯ 'ಹೂ'ಗಳು.

ಪತಿಗೆ ತಕ್ಕ ಸತಿ

ಸಾವಿತ್ರಿಬಾಯಿ

ಮನುಕುಲಕ್ಕೆಲ್ಲ

ನೀ ಮಹಾತಾಯಿ.!

ಕೆಸರು,ಸಗಣಿ

ತೂರಿದ ಕಲ್ಲುಗಳೆಲ್ಲವ

ಹೂಗಳೆಂದು ಭಾವಿಸಿ

ಹೂಗಳಿಂತಿರುವ ಮಕ್ಕಳಿಗೆ

ವಿದ್ಯೆಯನುಣಿಸದವಳು

ಕಷ್ಟ-ಕಾರ್ಪಣ್ಯ ಬದಿಗೊತ್ತಿ

ಶಿಕ್ಷಣಕ್ರಾಂತಿಗೆ ಮುನ್ನುಡಿ

ಬರೆದವಳು.

ಮಹಾ ಶಿಕ್ಷಕಿ,

ಶಿಕ್ಷಣದ ಸಂಚಾಲಕಿ,

ದಣಿವರಿಯದ

ಸಮಾಜದ ಸತ್ಯಶೋಧಕಿ.

'ಕಾವ್ಯಫೂಲೆ'ಯಲಿ

ನೊಂದು-ಬೆಂದವರ

ಬದುಕು ಚಿತ್ರಿಸಿದ

ಕಾವ್ಯ ಪ್ರವರ್ತಕಿ.

ಸ್ವತಃ ತಾನು

ಬಾಲ್ಯಮದವೆಯ

ಕಹಿಫಲಗಳನುಂಡು

ಬಾಲ್ಯವಿವಾಹ,

ಸತಿ ಸಹಗಮನ,

ಕೇಶಮುಂಡನಗಳಿಗೆಲ್ಲ

ಶಾಂತದಲಿ

ಕ್ರಾಂತಿಗೈದವಳು.

ಮಕ್ಕಳಿಗೆ

ಶಾಲೆ,ಶಿಶುಕೇಂದ್ರ.

ಮಹಿಳೆಯರಿಗೆ

ಅಬಲಾಶ್ರಮ ತೆರೆದು

ಸ್ತ್ರೀ ಸಂಕುಲಕೆ

ರಹದಾರಿ ತೋರಿದವಳು.

ವೈದಿಕ ಪುರೋಹಿತರು

ನಿಂದಿಸಿ,

ಅವಮಾನಸಿ ಕೊಟ್ಟಿದ್ದರು

ಬರಿ ಚಿತ್ರಹಿಂಸೆ.

ಆದರೆ....

ಬ್ರೀಟಿಷರು

ಈ ತಾಯಿಯ ತ್ಯಾಗವ

ಗುರುತಿಸಿ

ಗೌರವಿಸಿ ಸಂದಿಸಿದರು

ಬಿರುದು

*'ಇಂಡಿಯನ್*

*ಫರ್ಸ್ಟ್ ಲೇಡಿ ಟೀಚರ್'* ಎಂಬ

ಭಾರಿ ಪ್ರಶಂಸೆ.!!


*ಸೋಮನಾಥ.ಡಿ.*

*ಪ್ರಾಂಶುಪಾಲರು..✍️*

ಶ್ರೀ ಸೋಮನಾಥ ಡಿ. ಪ್ರಾಂಶುಪಾಲರು ಎಂ.ಡಿ.ಆರ್.ಎಸ್. ಇವರು ಮಹಾತ್ಮಾ ಪುಲೆ‌ ಅವರ ಸಹಧರ್ಮಿಣಿ ಸಾವಿತ್ರಿಬಾಯಿ ಪುಲೆ ಅವರ ಬಗ್ಗೆ ಬರೆದ ಕವನ ನಿಮ್ಮ ಓದು ಮತ್ತು ಪ್ರತಿಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ

15 views0 comments
bottom of page