top of page

ರೂಲ್ಸ್ ಫಾಲೋ ಮಾಡೋ ಬಿಕ್ಕಟ್ಟು.

ನಿನಗೆ ರೂಲ್ಸ್ ಮಾಡೋಕೆ ಅಷ್ಟೇ ಬರೋದು. ಅದನ್ನು ಪಾಲಿಸಲು ಅಲ್ಲ.ಹೇಳಿದಂತೆ ನಡೆಯೊಲ್ಲ ಅಂದ ಮೇಲೆ ಯಾಕ ಮಾಡಬೇಕು..ಅಕ್ಕ ಜೋರಾಗಿ ತಂಗಿಗೆ ಬಯ್ಯು ತ್ತಿದ್ದಳು...ಅತ್ತ ತಂಗಿ ಅಕ್ಕ ಬೈಯ್ಯುವ ಯಾವ ಮಾತನ್ನು ತಲೆಗೆ ಹಾಕಿಕೊಳ್ಳದೆ ಅವಳ ಪಾಡಿಗೆ ಅವಳು ಬರೆಯುತ್ತಾ ಕೂತಿದ್ದಳು.ಇವರಿಬ್ಬರ ಜಗಳ ಕೇಳಿ ಕೇಳಿ ಸಾಕಾಗಿ ಎದ್ದು ಬಂದು ಸಿಂಕ್ ತುಂಬವಿರುವ ಪಾತ್ರೆಗಳನ್ನು ಒಂದೊಂದಾ ಗಿ ತಿಕ್ಕತೊಡಗಿದೆ ಅಷ್ಟೇ.


ಅಮ್ಮಾ...ನೀನು ಪಾತ್ರೆ ತಿಕ್ಕಬೇಡ ಬಿಡು.ಅವಳೇ ಬಂದು ತಿಕ್ಕಲಿ.ಒಂದವಾರ ನಂದು ಒಂದವಾರ ನಿಂದು ಅಂತ ರೂಲ್ಸ್ ಮಾಡಿ ಹಂಚಿಕೊಂಡ ಕೆಲಸವನ್ನು ಸರಿಯಾಗಿ ಮಾಡೋದಿಲ್ಲ. ಅದರಲ್ಲೂ ನನ್ನ ಪಾಳಿ ಇದ್ದಾಗಂತೂ ಇದ್ದ ಬಿದ್ದ ಪಾತ್ರೆ, ಅದರಲ್ಲೂ ನೀರ ಕುಡಿದ ಲೋಟವನ್ನು ಹಾಕೋದೇನು? ಅಬ್ಬಾ.. ಈಗ ತನ್ನ ಪಾಳಿಬಂದಾಗ ಅಭ್ಯಾಸದ ನೆಪ.ಸುಳ್ಳೇ ಓದೋ ನೆವಾ? ಬರಿ ಪೋನ್ ತಗೊಂಡು ಕುಂತಿರತಾಳ.ನೀನು ಬಿಡು ನನ್ನ ಪಾಳಿ ಇದ್ದಾಗ ಒಮ್ಮೆಯಾದರೂ ಹಿಂಗ ಬಂದಿಯಾ? ಒಬ್ಬರಿಗೊಂದು, ಒಬ್ಬರಿಗೊಂದು ಪಾರ್ಸಿಲಿಟಿ ಮಾಡಬಾರದು. ಯಾವಾ ಗಲೂ ಅವಳು ಹೀಗೆ..ಎಂದು ಜೋರಾಗಿ ಮಾತನಾಡುವ ಮಗಳ ಕಂಡು ಒಂದು ಕ್ಷಣ ಮೌನವಾದೆ.


ದೊಡ್ಡವರಾಗಿ ಹುಟ್ಟಬಾರದು.ಯಾವಾಗಲೂ ನಾನೇ ಎಲ್ಲಾ ಕೆಲಸಾ ಮಾಡತಿನಿ.ಅವಳಿಗೆ ಒಂದೇ ಒಂದು ಕೆಲಸಾ ಅದು ನೆಟ್ಟಗೆ ಮಾಡಲ್ಲಾ..ಯಾಕಾದರೂ ರಜೆ ಇದೆಯೋ ಕಾಲೇಜ್ ಶುರುವಾದರೆ ಸಾಕು.ಅನ್ಸತ್ತೆ ಪಾತ್ರೆ ತೊಳೆಯುವ ನನ್ನ ಬಿಡಿಸಿ ತಾನು ತೊಳೆಯ ತೊಡಗಿದಳು

ಇಷ್ಟು ಬೇಸರ ಮಾಡಬಾರದೇ ಪುಟ್ಟಾ.ಎಂದೆ ಅಮ್ಮಾ.. ನಿನಗೆ ಹೇಳಿ ಪ್ರಯೋಜನವಿಲ್ಲ.ನಾನೇ ಮಾಡತಿನಿ.ಅವಳಿ ಗೆ ನೀನು ಎನು ಮಾಡೋದಿಲ್ಲ.ನಿನ್ನ ಮುದ್ದಿನ ಮಗಳು ನೋಡು.ನಾನು ಹೇಳತಿನಿ ಬಾರೋ ಅಂದ್ರು ನೋಡಮ್ಮಾ ನಮ್ಮಿಬ್ಬರ ನಡುವೆ ಬರಬೇಡ..ಸುಮ್ಮನಿರು.


ಮೊನ್ನೆನು ಹೀಗೆ ಮಾಡಿದಳು.ಪಪ್ಪಾ..ಪಾತ್ರೆ ತೊಳೆಯುತ್ತಿ ದ್ದರು ಅವಳೇನು ಎದ್ದು ಬರಲಿಲ್ಲ,ನಾನೇ ಬಿಡಿಸಿ ತೊಳೆದೆ. ಅವಳಿಗೆ ಸ್ವಲ್ಪನೂ ಎನೂ ಅನ್ನಿಸೊದಿಲ್ಲ. ತನಗೇನು ಸಂ ಬಂಧ ಇಲ್ಲ ಅನ್ನೋತರ ನಡಕೊತಾಳ.ನನಗ ಸಿಟ್ಟು ಬಾಳ ಬರತದ ಹೊಡದರ ನೀವು ಕೇಳಬೇಕಲ್ಲ.ಸಣ್ಣವಳು ಪಾಪ ಅಂತಿರಿ. ನೀನು ಅವಳ ಅಕ್ಕಾ ದೊಡ್ಡವಳು ಅನುಸರಿಸಿ ಕೊಂಡು ಹೋಗು ಅಂತ ಉಲ್ಟಾ ನನಗೆ ಬೈತಿರಾ. ಯಾರಿಗೆ ಬೇಕು ನಾನೇ ಮಾಡತಿನಿ,ಯಾರಿಗೂ ಹೇಳಲ್ಲ ಅಂತ ಬರಬರ ಪಾತ್ರೆ ತೊಳೆದು.ಊಟ ಅರ್ಧಮರ್ಧ ಮಾಡಿ ಒಳನಡೆದ ಮಗಳು ನನಗೆ ಹಿರಿಯಜ್ಜಿಯ ಹಾಗೆ ಕಂಡಳು.


ಹಾಂಗಲ್ಲವೇ....ಬಾರೆ ಮಗಾ..ಅನ್ನೊದರಲ್ಲಿ ಕಿರಿಯವಳು

ಅಮ್ಮಾ..ನಾನು ಎಸ್.ಎಸ್.ಎಲ್.ಸಿ.ಚೆನ್ನಾಗಿ ಓದಬೇಕು. ಮನೆಕಲಸ ಮಾಡಲು ಟೈಂ ಇಲ್ಲ.ಸಿಕ್ಕಾಪಟ್ಟೆ ಹೋಮ್ವರ್ಕ ಕೊಡತಾರೆ.ಎಲ್ಲವನ್ನು ಬರಿಬೇಕು.ನನಗೂ ಸುಸ್ತಾಗುತ್ತೆ. ಅಲ್ಲದೆ ಆ ದೇವಸ್ಥಾನ,ಈಮಠ, ರಂಗಮಂದಿರ,ಅಲ್ಲಲ್ಲಿ ಕುಳಿತು ಕಲಿತು ಬರೋದ್ರೊಳಗೆ ಸಾಕಾಗುತ್ತೆ.ಇನ್ನು ಕೆಲಸಾ ಮಾಡೋಕೆ ಆಗಲ್ಲ.ಅಲ್ಲಮ್ಮಾ.ನೀನು ನಿನ್ನ ತಮ್ಮನ ಮಗ ಳಿಗೆ ಎಸ್.ಎಸ್.ಎಲ್.ಸಿ ಇದ್ದಾಗ ಎನ್ ಹೇಳಿದ್ದಿ ನೆನಪಿಸ ಕೋ ಅವಳು ಓದಬೇಕು.ಅವಳಿಗೆ ಕೆಲಸಾ ಹಚ್ಚಬೇಡಾ ಅಂತ ಅವರ ಅಮ್ಮನಿಗೆ ಹೇಳಿದ್ದೆ.ಹಾಗೆ ನಾನು ಈಗ ಹತ್ತ ನೇ ತರಗತಿ ನನಗೂ ಯಾವ ಕೆಲಸಾ ಹಚ್ಚಬಾರದು.ಸೊಸೆ ಗೊಂದು ತರಾ,ನನಗೊಂದು ತರಾ ಮಾಡೋದು ಸರಿನಾ ನೀನೆ ಹೇಳು?...ನಾನು ಓದಬಾರದಾ? ಓದೊದು ಬೇಡಾ ಅಂದ್ರೆ ಹೇಳು ಕೆಲಸಾನೆ ಮಾಡತಿನಿ ಸರಿಯಾ?ನಾಳೆ ಅಂಕ ಕಡಿಮೆ ಬಂತು ಅಂದರೆ ನನಗೆ ಸಂಬಂಧಿಲ್ಲ. ಸೊಸೆಗೆ ನೀಡಿದ ಸವಲತ್ತು ನನಗೂ ಬೇಕು,ಅದೇ ರೂಲ್ಸ್ ನನಗೂ ಅಪ್ಲೈ ಆಗಬೇಕು ತಾನೆ? ಒಂದೇ ಸಮನೆ ಮಾತಿನ ಮಳೆ ಅದು ಆಣೆಕಲ್ಲಿನದು..ಹೇಗೆ ತಡೆದುಕೊಳ್ಳುದು? ನನಗೆ ಮಾತೆ ಹೊರಡದೆ ಸಮಾಧಾನ ಮಾಡುತ್ತ...


ಆಯಿತು ಬಾರೆ ಊಟ ಮಾಡು ಅಂದೆ.ಇಲ್ಲ ನನಗೆ ಹಸಿ ವಿಲ್ಲ.ನನಗೆ ಉತ್ತರ ಬೇಕು ಎಂಬ ಹಠ.ಯಾರಿಗೆ ಎನಂತ ಹೇಳಲಿ..ಅಷ್ಟರಲ್ಲಿ ಹಿರಿಯವಳು ಅಮ್ಮಾ..ನೀ ಉತ್ತರ ಕೊಡು ಬಿಡು ನನಗಂತೂ ಗೊತ್ತಾತು ಅವಳು ಹೇಳಿದಂತೆ ಮಾಡಲ್ಲ.ಹಸಿವಿದ್ದರೆ ತಾನೆ ಊಟ ಮಾಡತಾಳ ಬಿಡು ಕರಿ ಬೇಡ ಅನ್ನುತ್ತಿದ್ದ ಹಾಗೆ.ಕಿರಿಯವಳು ನನಗೆ ಹಸಿವಿಲ್ಲ ಊಟ ಮಾಡಲ್ಲ ಎಂದು ಮುಸುಕೆಳೆದುಕೊಂಡು ಮಲಗಿದಳು.ಇಬ್ಬರು ಹಠಮಾರಿಗಳು.


ನನಗೆ ಎನು ಉತ್ತರ ಕೊಡಬೇಕು ಅನ್ನೊದೇ ಯಕ್ಷ ಪ್ರಶ್ನೆ?ಹೌದೆನ್ನಲೇ‌..ಬೇಡವೆನ್ನೆಲೆ? ಗೊಂದಲ.ಮಕ್ಕಳ ಜಟಾಪಟಿ ಒಬ್ಬರಿಗೆ ಹೆಚ್ಚು ಕೆಲಸ, ಒಬ್ಬರಿಗೆ ಎನೂ ಇಲ್ಲವೆಂದ ಮೇಲೆ ಸಿಟ್ಟು ಉಕ್ಕುವುದು ಸಹಜ.ಪುಟ್ಟ ಮನಸ್ಸುಗಳು. ಅವರಿ ಬ್ಬರೂ ಅವರವರ ಸ್ಥಾನದಲ್ಲಿ ಸರಿಯಾಗಿದ್ದರು. ಇಬ್ಬರ ದೂ ಒಂದೆ ಹಠ ರೂಲ್ಸ್ ಫಾಲೋ ಮಾಡೋ ಬಿಕ್ಕಟ್ಟು. ನ್ಯಾಯ ನೀಡುವುದು ನನ್ನ ಪಾಲಿಗೆ ಸಂಕಷ್ಟದ ಸನ್ನಿವೇಶ.


ಅವರಪ್ಪನ ಗುಣ ಥೇಟ್ ಜೆರಾಕ್ಸ್ ಕಾಫಿ. ಅವರು ಹಾಗೆ ಆಗಬೇಕು ಅಂದರೆ ಅದು ಸರಿಯಾಗಿಯೇ ಆಗಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೆ ಬಿಪಿ ಹೆಚ್ಚಾದಂತೆ. ಆದರೂ ಆ ಬಿಪಿ ನ ಕಂಟ್ರೋಲ್ ಮಾಡಕೊಂಡು ಇಷ್ಟು ವರ್ಷ ಕಳೆದಿ ಲ್ವಾ. ಮೌನಕ್ಕೆ ಸಾವಿರ ಉತ್ತರ.ಈ ಮೌನ ಅವರಪ್ಪ ಕೊಂಚ ಶಾಂತವಾಗಲು ಅಸ್ತ್ರದಂತೆ ಬಳಸಿದ್ದು ನೆನಪಾಗಿ ಅದೇ ಸರಿ ಅನ್ನಿಸಿತು.ನಾನು ಎನು ಹೇಳದೆ ಮೌನವಾದೆ.


ಜಗಳ ಸ್ವಲ್ಪ ಶಾಂತವಾದಂತೆ ಕಾಣುತ್ತಿತ್ತು.ಪಾತ್ರೆಯ ಸಪ್ಪಳ ಯಾರೆಂದು ನಿಧಾನವಾಗಿ ನೋಡಿದೆ ಹಸಿವಿಲ್ಲ ಅನ್ನೋ ಕಿ ರಿಮಗಳು ಊಟ ಮಾಡುತ್ತಿದ್ದಳು.ಪಕ್ಕದಲ್ಲಿ ಹಿರಿಮಗಳು ಬಡಿಸುತಿದ್ದಳು.ನಗು ಬಂತು, ಆಶ್ಚರ್ಯವಾಯಿತು.ಕರುಳಿ ಗೆ ಎಂಥಹ ತಾಕತ್ತು.ನೋಡು ನಮ್ಮಿಂದಾಗಿ ಅಮ್ಮನೊಂ ದು ಕೊಂಡಳು.ನಾನು ನಿನಗೆ ಸಪೋರ್ಟ್ ಮಾಡಬೇಕಿತ್ತು. ನನಗೂ ಓದುವಾಗ ಅಮ್ಮ ಯಾವ ಕೆಲಸ ಹಚ್ಚಿರಲಿಲ್ಲ ಎಂಬುದು ಮರೆತಿದ್ದೆ.ಈಗ ನಾನು ಕೆಲಸ ಮಾಡತಿನಿ ನೀ ಓದು.ಹಾಗಂತ ಸಣ್ಣ ಪುಟ್ಟ ಕೆಲಸಾ ಮಾಡು,ಅಭ್ಯಾಸಕ್ಕೆ ಸಹಾಯವಾಗುತ್ತೆ.ಅಂದಾಗ ಕಿರಿಯವಳು ಸಾರಿ ಅಕ್ಕ.. ನಾನು ನಿನಗೆ ಹೆಲ್ಪ್ ಮಾಡತಿನಿ.ಅನ್ನುವಾಗ ನನಗೆ ಮಾತೆ ಬರಲಿಲ್ಲ.ಉತ್ತರ ಕೊಡದೆ ಮೌನವಾಗಿದ್ದಕ್ಕೆ ಸಿಕ್ಕ ಪ್ರತಿಫಲ


ಮನಸ್ಸಿಗೆ ಬರುವ ಭಾವನೆಗಳು ಸರಿಯಾದ ನೆಲೆಗಟ್ಟಿನಲ್ಲಿ ಶಾಶ್ವತವಾಗಿ ನೆಲೆನಿಲ್ಲುವಲ್ಲಿ ಪೀಠಿಕೆ ಹಾಕಿದಂತೆ ತೊರುತ್ತಿ ತ್ತು. ಹಿರಿಯತನವೆಂಬುದು ಬರಿ ಬಾಯಿ ಮಾತಲ್ಲ ಅದನ್ನು ಕಾರ್ಯರೂಪಕ್ಕೆ ತಂದು ಅನುಭವಿಸುವುದಿದೆಯಲ್ಲ ಅದು ನೈಜವಾದ ಹಿರಿತನ.ಅದಕ್ಕೆ ಮುಕ್ತ ಅವಕಾಶ ನೀಡಬೇಕು.


ಮಕ್ಕಳ ಮನಸ್ಸನ್ನು ಮೌಲ್ಯಗಳ ಚೌಕಟ್ಟಿನಲ್ಲಿ ಇಳಿಸುವ ಪ್ರಾಮಾಣಿಕ ಕೆಲಸ ಮಾಡಬೇಕಾದ್ದು ಪಾಲಕರ ಜವಾಬ್ದಾ ರಿ.ಹೊಸದನ್ನು ಬಿತ್ತಬೇಕಿಲ್ಲ ,ಮೌಡ್ಯ ಬಿತ್ತದಿದ್ದರೆ ಸಾಕು. ಸ್ವಾನುಭವಕ್ಕೆ ಹೆಚ್ಚಿನ ಆದ್ಯತೆಗಳನ್ನು ಕಲ್ಪಸಿಕೊಡಬೇಕು. ಸ್ವಲ್ಪ ಎಡವಟ್ಟಾದರೂ ಅದರ ಪರಿಣಾಮ ಪಾಲಕರು ಎದುರಿಸಬೇಕು.ಒಂದು ಸಮಾಜ ಸ್ವಾಸ್ಥ್ಯದಿಂದ ಮುನ್ನೆಡೆ ಯಲು ಕುಟುಂಬ ಪ್ರಮುಖ ಪಾತ್ರ ವಹಿಸುತ್ತದೆ. ಎಂಬುದ ನ್ನು ಮನಗಾಣಬೇಕು.


ಅನಾಥಾಶ್ರಮಗಳು,ವೃದ್ದಾಶ್ರಮಗಳು ಬಾಗಿಲು ಮುಚ್ಚ ಬೇಕೆಂದರೆ ಮನೆಯಿಂದಲೇ ಸಂಸ್ಕೃತಿಯ ಅನಾವರಣ ವಾಗಬೇಕು.....ಅದಕ್ಕೆ ಬಹು ಮೌಲ್ಯದ ಮಾತೊಂದಿದೆ 'ಮನೆಯೆ ಮೊದಲ ಪಾಠ ಶಾಲೆ' ಜನನನಿ ತಾನೆ ಮೊದಲ ಗುರು.' ಮಕ್ಕಳ ಮನಸ್ಸಿಗೆ ಕೊಂಡಿಯಾಗಿ ಬೆಸೆಯುವ ಕಾರ್ಯ ನಮ್ಮದಾದರೆ....ಅದರ ಸತ್ಪಲ್ ಸಮಾಜದ ಬೆಳವಣಿಗೆಗೆ ನಾಂದಿಯಾದಿತು...


ಶಿವಲೀಲಾ ಹುಣಸಗಿ

48 views1 comment
bottom of page