top of page

ಬಿ. ಎ. ಸನದಿಯವರ "ಮನದಾಳದ ಅಲೆಗಳು"













ಇದನ್ನು ಸನದಿಯವರು ಸ್ಮೃತಿಚಿತ್ರಗಳು ಎಂದು ಕರೆದಿದ್ದಾರೆ. ಇದು ಒಂದು ರೀತಿ ಅವರ ಆತ್ಮಕಥನವೂ ಹೌದು. ಇದರಲ್ಲಿ ೪೩ ಬಿಡಿ ಬಿಡಿಯಾದ ಲೇಖನಗಳಿದ್ದಂತೆ ಕಂಡರೂ ಅವರ ಬಾಲ್ಯದಿಂದಾರಂಭಿಸಿ  ೮೫ ನೇ ಹುಟ್ಟುಹಬ್ಬದತನಕದ ಅವರ ಬಾಳ ಪಯಣದ ಎಲ್ಲ ಚಿತ್ರಣ ಇದರಲ್ಲಿ ಒಂದು ಮಾಲೆಯಂತೆ ಪೋಣಿಸಲ್ಪಟ್ಟಿವೆ. ಅವರೇ ಹೇಳಿಕೊಂಡಂತೆ ಆತ್ಮವೃತ್ತಾಂತ ಬರೆಯುವ ಬದಲು ಅವರು ಈ ರೀತಿ ತಮ್ಮ ನೆನಪುಗಳನ್ನು ಬಹಳ ಮಟ್ಟಿಗೆ ಕ್ರಮವತ್ತಾಗಿಯೇ ಬರೆಯುತ್ತ ಹೋಗಿದ್ದಾರೆ. 

       ಅವರು ಓರ್ವ ಸರಕಾರಿ ಅಧಿಕಾರಿಯಾಗಿ ಮುಂಬಯಿ  ಕಲಬುರ್ಗಿ, ಬೆಳಗಾವಿ, ಕುಮಟಾ ಮತ್ತಿತರ ಕಡೆಗೆ ಉಳಿಯುವ ಸಂದರ್ಭ ಬಂದಿದ್ದರಿಂದ ಅವೆಲ್ಲ ಅನುಭವಗಳನ್ನೂ ಅವರು ಇದರಲ್ಲಿ ಸೇರಿಸಿದ್ದಾರೆ. ತಾವು ಹುಟ್ಟಿದ ಸನ್ನಿವೇಶ, ಬೆಳೆದ ಬಗೆ, ಶಿಕ್ಷಣ ಪಡೆದದ್ದು, ನೌಕರಿಯ ಜೀವನ , ತಮ್ಮ ಸ್ನೇಹ ವಲಯ, ಸಾಂಸಾರಿಕ , ಸಾಹಿತ್ಯಿಕ, ಸಾಂಸ್ಕೃತಿಕ ಬದುಕಿನ ಹಲವು ಚಟುವಟಿಕೆಗಳ ವಿವರಣೆ ಇವೆಲ್ಲವೂ  ಇದರಲ್ಲಿ ಬಹಳ ಆಪ್ತವಾದ ಶೈಲಿಯಲ್ಲಿ ಬರೆದಿದ್ದಾರೆ. 

        ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದನ್ನು " ತಬ್ಬಲಿಯು ನೀನಾದೆ ಮಗನೆ" ಎಂಬ ಮೊದಲ ಲೇಖನದಲ್ಲಿ ಬರೆದು ನಂತರ ತಮ್ಮ ಶಿಕ್ಷಣ  ಮತ್ತು ನೌಕರಿ ಕಾಲದ ಸ್ವಾರಸ್ಯಕರ ಅನುಭವಗಳನ್ನು ಹಲವು ಲೇಖನಗಳಲ್ಲಿ  ಬಣ್ಣಿಸಿದ್ದಾರೆ. ಹಲವು ಸಿಹಿ ಕಹಿ ಅನುಭವಗಳು ತುಂಬ ಖುಷಿಯಿಂದ ಓದಿಸಿಕೊಂಡುಹೋಗುತ್ತವೆ. ಅನೇಕ ಜಿಲ್ಲೆ , ಹೊರರಾಜ್ಯಗಳಲ್ಲೂ ಕೆಲಸ ಮಾಡಿದ ಸನದಿಯವರ ಅನುಭವಗಳ ವ್ಯಾಪ್ತಿ ವಿಸ್ತಾರಗಳೂ ಬಹಳ ದೊಡ್ಡವು. ಅವೆಲ್ಲ ಈ ಕೃತಿಯಲ್ಲಿ ದಾಖಲಾಗಿವೆ.

        ಕವಿಗಳಾಗಿಯೇ ಖ್ಯಾತರಾಗಿರುವ ಸನದಿಯವರ ಗದ್ಯ ಶೈಲಿಯೂ ಅಷ್ಟೇ ಸುಂದರ ಮತ್ತು ಸರಳ. ಅವರ ಈ ಮನದಾಳದ ಅಲೆಗಳು ಅವರ ಆತ್ಮೀಯ ಸಾಹಿತ್ಯಿಕಬಳಗದ ಮಿತ್ರರ ಓದಿಗೆ ಸಿಕ್ಕಿರುವದು ಸಂತಸದ ಸಂಗತಿ.                     

   


   - ಎಲ್. ಎಸ್. ಶಾಸ್ತ್ರಿ

25 views0 comments
bottom of page