top of page

(ಪುಸ್ತಕ ಸಂಪದ)ಜೀವನ ಪಥ-ನೆನಪಿನ ರಥ

ನನ್ನ ವಿದ್ಯಾರ್ಥಿಯಾದ ಜಿ.ಎಸ್.ಹೆಗಡೆ (ಬಿ.ಎಸ್ಸಿ.,ಹೊನ್ನಾವರದ ಎಸ್.ಡಿ.ಎಂ.ಕಾಲೇಜ್ )ಅವರು ಬರೆದು ಪ್ರಕಟಿಸಿದ ಪುಸ್ತಕ(ಜೀವನ ಪಥ-ನೆನಪಿನ ರಥ) ೨೦೨೧,ನವೆಂಬರ ೨೨ ರಂದು ನನ್ನ ಕೈ ಸೇರಿತು.ತಿಳಿಗೊಳದಲ್ಲಿ ಗೋಚರಿಸಿದ ಮುತ್ತುಗಳಂತೆ ನನ್ ಶಿಶ್ಯ ವರ್ಗ ಒಬ್ಬೊಬ್ಬರಾಗಿ ಗೋಚರಿಸತೊಡಗಿದ್ದಾರೆ. (ನಾನೂ ನಿವೃತ್ತ ,ಅವರೂ ನಿವೃತ್ತರು ) .ಕಿರಣ ಭಟ್ಟ,ಹೊನ್ನಾವರ (ರಂಗ ಕೈರಳಿ) ,ಸುರೇಶ ಹೆಗಡೆ,ಹುಬ್ಬಳ್ಳಿ(ಇನಾಸ ರಾಮನ ಟಪಾಲು ಚೀಲ).,ಎನ್.ಆರ್.ಗಜು,ಕುಮಟಾ(ಗಜ ವದನ) ಈ ಮೂರೂ ಮುತ್ತುಗಳೊಂದಿಗೆ ಜಿ.ಎಸ್.ಹೆಗಡೆಯವರು ಇದೀಗ ನಾಲ್ಕನೇಯವರಾಗಿ ಸೇರಿಕೊಂಡಿದ್ದಾರೆ.ಇವರೆಲ್ಲರೂ ನನ್ನ ಹೆಮ್ಮೆ ಹಾಗೂ ಸಂತೌಷಕ್ಕೆ ಕಾರಣರು.ಇದೆಲ್ಲವೂ ಫೇಸ್ ಬುಕ್ ಮಹಿಮೆ.ಮರೆತು ಹೋದವರೆಲ್ಲ ಮತ್ತೆ ಒಂದಾಗುತ್ತಿರುವುದು ವಿಶೇಷ.


ಜೀವನ ಪಥದಲ್ಲಿ ಹೆಗಡೆಯವರ ನೆನಪಿನ ರಥ ಸಾಗುತ್ತಿದ್ದಂತೆ ಕಂಡುಂಡ ಅನುಭವದ ಸುರುಳಿ ಬಿಚ್ಚತೊಡಗುತ್ತದೆ.ರಥ ಸಾಗುವಾಗ(ಜಾತ್ರೆ) ಬೆಂಡು,ಬೆತ್ತಾಸು,ಬಾಳೆ ಹಣ್ಣು,ಉತ್ತತ್ತಿ,ಮುಂತಾಗಿ ಬಂದು ಬೀಳುತ್ತವೆ.ಅಂಥವುಗಳಲ್ಲಿ ನಮ್ಮ ಕೈಗೆ ಸಿಕ್ಕಿದ್ದನ್ನು ಪ್ರಸಾದವೆಂದು ಸ್ವೀಕರಿಸುತ್ತೇವೆ.ಹಾಗೆಯೇ ಹೆಗಡೆಯವರು ಬಾಲ್ಯದ ಅನುಭವಗಳೊಂದಿಗೆ ಪ್ರಾಥಮಿಕ,ಮಾಧ್ಯಮಿಕ,ಹಾಗೂ ಕಾಲೇಜು ಶಿಕ್ಷಣ ಪಡೆಯುವಾಗಿನ ಅನುಭವಗಳೊಂದಿಗೆ ಜೀವನಾನುಭವಗಳನ್ನೂ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಗೊಣಗಾಟವಿದೆ,ಹುಡುಗಾಟವಿದೆ,ಹುಡುಕಾಟವಿದೆ,ಪರಿಶ್ರಮವಿದೆ.ಅವರ ಅನುಭವಗಳೊಂದಿಗೆ ನನ್ನದೂ ಒಂದಿಷ್ಟು ಪಾಲಿರುವುದರಿಂದ ಲೇಖನಗಳು ನನಗೆ ಮತ್ತಿಷ್ಟು ಆತ್ಮೀಯ ವೆ ನಿ ಸುತ್ತ ವೆ.


ಜಿ.ಎಸ್.ಅವರಿಗೆ ಸಂಗೀತದ ಹುಚ್ಚು.ಬಿ.ಎಸ್ಸಿ.ಓದುವಾಗಲೇ ಅವರು ಸಂಗೀತವನ್ನು ಒಂದು ವಿಷಯವನ್ನಾಗಿ (ತಬಲಾ)ಆರಿಸಿಕೊಂಡಿದ್ದರಂತೆ(ನನಗೂ ಈಗಲೇ ಗೊತ್ತಾಗಿದ್ದು).ಸಂಗೀತಕ್ಕಾಗಿಯೇ ಅವರು ಬ್ಯಾಂಕಿನ ಪ್ರಮೋಶನ್ ಬಿಡುತ್ತಾರೆ.ಅಷ್ಟೇ ಅಲ್ಲ,"ಸಪ್ತಕ"ಎಂಬ ಸಂಘಟನೆಯನ್ನೇ ಪ್ರಾರಂಭಿಸುತ್ತಾರೆ.ಇದರಿಂದ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಹಿರಿ-ಕಿರಿ ಸಂಗೀತಗಾರರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ.ಇವರ ಮಗ ಧನಂಜಯನೂ ಅಷ್ಟೇ,ಸಂಗೀತಕ್ಕಾಗಿ ಬ್ಯಾಂಕ್ ನೌಕರಿಯನ್ನೇ ತ್ಯಜಿಸಿ ಬಂದವರು.ಇವರ "ಸಪ್ತಕ"ರಾಷ್ಟ್ರ ಮಟ್ಟದಲ್ಲಷ್ಟೇ ಅಲ್ಲ,ವಿದೇಶಗಳಲ್ಲೂ ಹೆಸರು ಗಳಿಸಿದೆ.ಬ್ಯಾಂಕಾಕ್,ಕತಾರ್,ದೋಹಾ,ಮಸ್ಕತ್ ಮುಂತಾದ ದೇಶಗಳಲ್ಲಿ ಇವರು ಸಂಗೀತ ಕಾರ್ಯಕ್ರಮ ನೀಡಿದ್ದಾರೆ.


ಹೆಗಡೆಯವರ ಮನೆಯ ಹೆಸರು,ಸುಶ್ರ್ಯಾವ್ಯ,ಸಂಸ್ಥೆಯ ಹೆಸರು,ಸಪ್ತಕ,ಮಗ,ಧನಂಜಯ,ಮೊಮ್ಮಗ,ಸುಯೋಗ.


ಅರಸಿ,ಆರಿಸಿ,ಒಲಿಸಿ,ವರಿಸಿದ ಪತ್ನಿ,ಗೀತಾ,ಮಗ ಧನಂಜಯ,ಮೊಮ್ಮಗ ಸುಯೋಗ ಇವರೊಂದಿಗೆ ಹೆಗಡೆಯವರ ಜೀವನ ರಥ ಮತ್ತೂ ಮುಂದೆ ಸಾಗಲೆಂಬುದೇ ಈ ಗುರುವಿನ ಆಶಯ.


QR.ಕೋಡ್ ಅಳವಡಿಸಿದ್ದು ಪುಸ್ತಕದ ವಿಶಿಷ್ಟತೆ ಮತ್ತು ವಿಶೇಷತೆ.(ಹೊಸ ಪ್ರಯೋಗ).


~ಹುಣಸಿಕಟ್ಟಿ ವೆಂಕಟೇಶ್ (ಕವಿಗಳು.. ಸಾಹಿತಿಗಳು, ಹಲಗತ್ತಿ. ತಾ: ರಾಮದುರ್ಗ.




13 views0 comments
bottom of page