top of page

ಪ್ರಸ್ತುತ


ಸಂಪುಮಾಡಿ ಶಾಂತಿಮಂತ್ರ

ಜಪಿಸಿದರೂ ಅಸ್ಪ್ರಶ್ಯತೆ ಧರೆಯಿಂದ

ಮಾಯವಾಗಲೇಇಲ್ಲ

ತಂದೆ ಮಗಳ ಮೇಲೆ

ಅಣ್ಣ ತಂಗಿಯ ಮೇಲೆ

ಕಾಮಾಂಧರ ಅಟ್ಟಹಾಸಕೆ

ಮಾನವೀಯತೆಯೇ ಮಣ್ಣುಪಾಲಾಗಿದೆ

ಕೋಮುಕೋಮುಗಳಲ್ಲಿ

ಕಾವೇರಿಸಿ ಕಾಣದ ಕೈಗಳು

ತಮ್ಮ ಬೇಳೆ ಬೇಯಿಸಿಕೊಳ್ಳವ

ಬೆರಕೆ ಬುದ್ದಿಯವರು

ಹಸಿವಿನಿಂದ ಬಳಲುವ ಹಸಿಕೂಸು

ಕಂದಮ್ಮಗಳ ಕೂಗು ಕೇಳುವವರಿಲ್ಲದೆ

ಮೂಕವಾಗಿಬಿಟ್ಟಿವೆ

ಕಸದ ತೊಟ್ಟಿ ಯಲ್ಲಿ ಹೆಣ್ಣು ಭ್ರೂಣವನ್ನು

ನುಂಗಲು ಶ್ವಾನಗಳ ಮಧ್ಯೆ ಪೈಪೋಟಿಯ

ಕಾದಾಟ

ಅನ್ನದಾತೋ ಸುಖೀ ಭವೋಃಎಂದು

ತಲೆನೇವರಿಸಿ ಅವನುಬೆಳೆದ ಬೆಳೆಗೆ

ಮೂರು ಕಾಸು ನೀಡಿ ಮಧ್ಯ ವರ್ತಿ

ತನ್ನ ಖಜಾನೆ ತುಂಬಿಸಿ

ಸಾಲಭಾದೆ ತಾಳಲಾರದೆ ಹಾಲಾಹಲ ನುಂಗಿ

ಶವವಾಗುವ ಅನ್ನದಾತ

 

ಅಮಾಯಕರ ಕಿವಿಗೆ ಹೂವನಿಟ್ಟು

ಗಗನ ಚುಂಬಿ ಇಮಾರತುಗಳ ನಿರ್ಮಿಸಿ

ಕೋಟಿ ಕೋಟಿ ದೋಚುವ ಭೂಗಳ್ಳರು

ನಿರುದ್ಯೋಗವನ್ನೆಲ್ಲಾ ನಿರ್ಮೂಲನೆ

ಮಾಡುತ್ತೇವೆ ಎಂದು ಪ್ರಣಾಳಿಕೆ ಯಲ್ಲಿ

ಆಣೆ ಪ್ರಮಾಣ ಮಾಡಿ ಹೇಳಿ

ಪ್ರತಿಮೆ ನಿರ್ಮಿಸುವುದರಲ್ಲೇ

ಮಗ್ನರಾಗಿದ್ದಾರೆ

ಪ್ರತಿಭೆ ಗಳೆಲ್ಲಾ ಪಲಾಯನವಾಗಿ

ಮೋಸ ದಗಲ್ ಬಾಜಿಗಳ ದರಬಾರಾಗಿದೆ

ಅಂದು ತ್ರೇತಾಯುಗದಲ್ಲಿ ವೈದೇಹಿ

ತನ್ನ ಪಾವಿತ್ರ್ಯತೆಯನ್ನು ಸಾಬೀತು ಪಡಿಸಲು

ಅಗ್ನಿ ಪ್ರವೇಶ ಗೈದಂತೆ

ಯತ್ರನಾರ್ಯಸ್ತೋ ಪೂಜ್ಯಂತೆ ರಮಂತೆ

ತತ್ರ ದೇವತಾ ಎಂಬ ದೇಶದಲ್ಲಿ

ಕನ್ಯತ್ವ ಪರೀಕ್ಷೆ ಯೇ ಕಗ್ಗಂಟಾಗಿದೆ

ಕುಲದ ಪ್ರತಿಷ್ಟೆಗಾಗಿ ಮರ್ಯಾದಾ ಹತ್ಯೆಗೆ 

ಮರಣ ಹೋಮವಾಗುತ್ತಿವೆ ಯುವಜೀವಗಳು

ವರದಕ್ಷಿಣೆ ಯ ಕಾಟದ ಕಾವಿಗೆ  ಸುಟ್ಟು ಕರಕಲಾಗಿದೆ

ಮನೆ ಬೆಳಗುವ ಸೊಸೆ

ಇಲ್ಲದ ರೊಗಕ್ಕೆ ಕಲಬೆರಕೆಯ ಔಷಧಿ ಹೀರಿ

ಡ್ರಗ್ ಮಾಫಿಯಾಗೆ ಬಲಿಯಾದ ಶವಾಗಾರದಲ್ಲಿ

ಇಟ್ಟ ಅನಾಥ ಶವ

ಕರುಳು ಸುಡುವ ಕಳಬಟ್ಟಿ ಕುಡಿದು

ಹೊಟ್ಟೆ ಹಿಡಿದು ವಿಲ ವಿಲ ಒದ್ದಾಡಿ

ಉಸಿರು ಬಿಡುವ ಬಡ ಜೀವದ ಮೇಲೆ

 ಮಡದಿ ಮಕ್ಕಳ ಆಕ್ರಂದನ

ಖಾಕಿ ಪರೀಕ್ಷೆ ಯಲ್ಲಿ ಕೋಟಿ ಕೋಟಿ

ನುಂಗಿ ಮರು ಪರೀಕ್ಷೆ ಬರೆಯಿರಿ

ಸಾಂತ್ವನಿಸುವ ನುಂಗಣ್ಣರು

ಸರ್ವಸಂಗ ಪರಿತ್ಯಾಗಿ ಎಂದು

ವೇಷತೊಟ್ಟು ಕಾಮಪುರಾಣ ಬಟಾಬಯಲಾಗಿ

ಜೈಲು ಪಾಲಾದ ಅರ್ಜುನ ಸನ್ಯಾಸಿ..!!


ಅನಿಲ ಕಾಮತ ಸಿದ್ದೇಶ್ವರ

ಕವಿ ಕಲಾವಿದ ವರ್ತಕ ಹನಿಗವನಗಳ ಕರ್ತೃ ಅನಿಲ ಕಾಮತ

ಸಿದ್ದೇಶ್ವರ ಅವರ ಪ್ರಸ್ತುತ ಕವನ ನಿಮ್ಮ ಓದಿಗಾಗಿ. ಸಂಪಾದಕ



____________ _______________________

37 views1 comment
bottom of page