top of page

ನಗುವುದ ಕಲಿಯೋಣ

ಕತ್ತಲೆ ತುಂಬಿದ ಬಾಳಲಿ ಎಲ್ಲರು

ಬೆಳಕಿನ ಚಿಲುಮೆ ಆಗೋಣ.

ಗಿಡದಲಿ ಅರಳಿದ ಹೂವಿನ ಹಾಗೆ

ನಗುತಲಿ ಸಕಲರ ಗೆಲ್ಲೋಣ.


ಬಾಳಲಿ ಕಷ್ಟ ಬರುವುದು ಸಹಜ

ಎದುರಿಸಿ ಮುಂದೆ ಸಾಗೋಣ.

ನಾಳೆಯ ಚಿಂತೆಯ ಮರೆಯುತ ನಾವು

ಸಂತಸದ ಅಲೆಯಲಿ ತೇಲೋಣ.


ಅಗಳನು ಕಂಡು ಬಳಗವ ಕರೆವ

ಕಾಗೆಯ ನೋಡಿ ಕಲಿಬೇಕು.

ಈದಿನ ಸತ್ಯ ನಾಳೆಯು ಮಿಥ್ಯ

ಸಕಲರು ನಮ್ಮವರೆನಬೇಕು.


ದ್ವೇಷ,ಅಸೂಯೆ, ಮತ್ಸರ ತೊರೆದು

ನಗುವಿನ ತೇರನು ಏಳಿಬೇಕು.

ನಶ್ವರ ಬದುಕಲಿ ಖುಷಿ ಖುಷಿಯಾಗಿ

ಸಮರಸ ಭಾವದಿ ಕಳಿಬೇಕು.


ನಗುತಲಿ ಎಂದು ಇರಲು ಬಾಳಲಿ

ಕ್ಲೇಶವು ದೂರ ಸರಿಯುವುದು.

ಆಯುಷ್ಯ ಆರೋಗ್ಯ ನಮ್ಮಲ್ಲಿ ನೆಲೆಸಿ

ನೆಮ್ಮದಿ ಶಾಂತಿ ದೊರೆಯುವುದು.


ಬನ್ನಿ ಬಂಧುಗಳೇ!ನಲ್ಮೆಯ ಗೆಳೆಯರೇ

ನಗುತಲಿ ಜೊತೆಯಲಿ ಬೆರೆಯೋಣ.

ಮೊಗದಲಿ ನಗುವಿನ ಕಾಂತಿ ಚಿಮ್ಮುತ

ಜೀವನ ಪಾವನ ಎನಿಸೋಣ.


ರಚನೆ: ಸಾತುಗೌಡ ಬಡಗೇರಿ ಶಿಕ್ಷಕರು.

ಕೇಣಿ ,ಅಂಕೋಲಾ.ಉ.ಕ.

76 views0 comments
bottom of page