top of page

ದೇವೋವಾಚ...


ಎಷ್ಟು 'ಹೊತ್ತು'

ಮೆರೆಸುತ್ತೀರಿ ನನ್ನ,

ಇಳಿಸಿಬಿಡಿ

ನೆಲಕ್ಕೆ ಇನ್ನ,

ಪ್ರತಿಷ್ಠೆಯಾಗಿದ್ದರೆ

ಪ್ರಾಣ,

ನಡೆದಾಡುವೆ;

ಉತ್ತಿ-ಬಿತ್ತಿ

ಬೆವರಿಳಿಸಿ

ಬೆಳೆದುಣ್ಣಿ,

ನಾನೇ

ಕುಣಿದಾಡುವೆ.


ಡಾ. ಬಸವರಾಜ ಸಾದರ.

--- + ---

23 views0 comments
bottom of page