top of page

ತೊಟ್ಟು-೩೦೯

ಚಿನ್ನದ ಚೂರಿ

-------------------

ಚಿನ್ನದ

ಚೂರಿ

ನಮ್ಮದು

ಎಂದು,

ಎದೆಗೆ

ಚುಚ್ಚಿಕೊಳ್ಳ-

ಬಹುದೆ?

ಸುಣ್ಣದ

ನೀರನೆ,

ನಂಬಿ

ಹಾಲೆಂದು,

ಎತ್ತಿ

ಕುಡಿಯ-

ಬಹುದೆ?


ಡಾ. ಬಸವರಾಜ ಸಾದರ.

3 views0 comments
bottom of page