top of page

ತೊಟ್ಟು-೨೭೧

ತಾಯಿ

---------

'ನಿನ್ನ

ನೀರು

ಉಪ್ಪು'-

ಎಂದಿತು,

ಸಮುದ್ರದೆಡೆ

ಹರಿದು ಬಂದ

ಗಟಾರ;

'ಬಾ, ಮಗು,

ನನ್ನಲ್ಲಿ

ನಿನಗೂ ಇದೆ

ಸಾಕಷ್ಟು

ಜಾಗ'-

ಎನ್ನುತ್ತ

ಪ್ರೀತಿಯಿಂದ

ಮಡಿಲ

ಸೇರಿಸಿಕೊಂಡಿತು

ಮಹಾ-ಸಾಗರ.


ಡಾ. ಬಸವರಾಜ ಸಾದರ

1 view0 comments
bottom of page