top of page

ತೊಟ್ಟು-೧೫೬

ಬಟ್ಟೆಯಳಲು

-----------------

ಬತ್ತಲೆ ಇದ್ದಿರಿ

ಹುಟ್ಟುವಾಗ,

ಮಳೆ-ಚಳಿ-ಬಿಸಿಲು

ತಡೆಯಲು,

ಅಬರು

ಮುಚ್ಚಲು

ಹೊಚ್ಚಿದೆ

ನಿಮ್ಮ

ಮೈಯನ್ನ;

ತೊಟ್ಟು

ದೊಡ್ಡವರಾದ

ನೀವೇ

ಈಗ

ಕಳೆಯುತ್ತಿದ್ದೀರಿ

ನನ್ನ ಪೂರ್ತಿ

ಮಾನವನ್ನ.


ಡಾ. ಬಸವರಾಜ ಸಾದರ

6 views0 comments
bottom of page