top of page

ತೊಟ್ಟು-೧೨೭

ಸಮಪಾತಳಿ

----------------

ಸುರಿದು-ಹರಿದು,

ಜಾರಿ-ತೂರಿ,

ಬಿದ್ದು-ಎದ್ದು

ಹರಿವ

ನೀರು

ತವಕಿಸುತ್ತದೆ

ಒಂದೆಡೆ ನಿಂತು

ಸಮಪಾತಳಿ

ಸಾಧಿಸಿಕೊಳ್ಳಲು;

ಮರ್ಕಟ

ಮನಸ್ಸೇಕೆ

ಅರಿಯುತ್ತಿಲ್ಲ

ತನ್ನಂತರಂಗದಲ್ಲೂ

ಇರುವ

ಈ ಸತ್ಯವ

ಭೇದಿಸಿಕೊಳ್ಳಲು?


ಡಾ. ಬಸವರಾಜ ಸಾದರ

7 views0 comments
bottom of page