top of page

ಡಿ.ಲಕ್ಷ್ಮೀನರಸಿಂಹಾಚಾರ್ಯರು (ಡಿ.ಎಲ್.ಎನ್)

Updated: Nov 2, 2023








ನಾಡಿನ ವಿದ್ವತ್ಪರಂಪರೆಯ ಮುಕುಟ

ಡಿ. ಲಕ್ಷ್ಮೀನರಸಿಂಹಾಚಾರ್ಯರು

*****************"*****************"

"ಡಿ‌ ಎಲ್.ಎನ್." ಎಂಬ ಮೂರಕ್ಷರಗಳಿಂದಲೇ ಕನ್ನಡದ ವಿದ್ವತ್ವಲಯದಲ್ಲಿ ಪ್ರಸಿದ್ಧರಿರುವ ಆಚಾರ್ಯಪುರುಷ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯರು ಚಲಿಸುವ ವಿಶ್ವಕೋಶದಂತಿದ್ದರು. ೧೯೦೬ ಅಕ್ಟೋಬರ್ ೨೭ ರಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಶ್ಯಾಮಯ್ಯಂಗಾರ್- ಲಕ್ಷ್ಮಮ್ಮನವರ ಪುತ್ರನಾಗಿ ಜನಿಸಿದ ಡಿಎಲ್ಎನ್ ಹಳೆಗನ್ನಡ ಸಾಹಿತ್ಯ ಸಂಶೋಧನೆ ಸಂಪಾದನೆಗಳ ಕ್ಷೇತ್ರದಲ್ಲಿ ಅಗಾಧ ಕೆಲಸ ಮಾಡಿದರು. ಎಂಎ ಪಾಸಾಗಿ ಮೈಸೂರು ಓರಿಯಂಟಲ್ ರಿಸರ್ಚ್ ಸಂಸ್ಥೆಯಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ, ಕನ್ನಡ ಪ್ರಾಧ್ಯಾಪಕರಾಗಿ ೧೯೬೨ ರಲ್ಲಿ ನಿವೃತ್ತರಾದರು. ನಿವೃತ್ತಿ ನಂತರವೂ ಯುಜಿಸಿ ಗೌರವ ಪ್ರಾಧ್ಯಾಪಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಂಪಾದಕರಾಗಿ, ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.

ವಡ್ಡಾರಾಧನೆ, ಭೀಷ್ಮಪರ್ವ, ಶಬ್ದಮಣಿದರ್ಪಣ, ಸಿದ್ಧರಾಮ ಚಾರಿತ್ರಸಂಗ್ರಹ, ಪಂಪ ರಾಮಾಯಣ, ಗೋವಿನ ಹಾಡು, ಕನ್ನಡ ಗ್ರಂಥಸಂಪಾದನೆ ಮೊದಲಾದ ೫೦ ಕ್ಕೂ ಹೆಚ್ಚು ಕೃತಿಗಳು ಅವರಿಂದ ಪರಿಷ್ಕೃತವಾಗಿ ಹೊರಬಂದವು. ಅವರ " ಪೀಠಿಕೆಗಳು ಮತ್ತು ಲೇಖನಗಳು" ೧೧೦೦ ಕ್ಕೂ ಹೆಚ್ಚು ಪುಟಗಳುಳ್ಳ ಒಂದು ಮಾರ್ಗದರ್ಶಕ ಆಧಾರ ಗ್ರಂಥವೆನಿಸಿದೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟರೇಟ್, ಬೀದರನಲ್ಲಿ ೧೯೬೦ ರಲ್ಲಿ ಜರುಗಿದ ೪೧ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಗಳನ್ನೆಲ್ಲ ಪಡೆದ ಅವರು ೧೯೭೧ ರ ಮೇ ೭ ರಂದು ನಿಧನರಾದರು. ಆದರೆ ಡಿ.ಎಲ್. ಎನ್. ಎಂಬ ಮೂರಕ್ಷರಗಳು ಕನ್ನಡದ ಮಂತ್ರವಾಗಿ ಶಾಶ್ವತ ಉಳಿದುಕೊಂಡಿವೆ.


‌‌‌ ‌‌ - ಎಲ್. ಎಸ್. ಶಾಸ್ತ್ರಿ


ಕನ್ನಡದ ವಿದ್ವತ್ ಪರಂಪರೆಗೆ ಕಿರೀಟಪ್ರಾಯರಾದ ಡಿ.ಲಕ್ಷ್ಮೀನರಸಿಂಹಾಚಾರ್ಯರ ಬಗ್ಗೆ ಶ್ರೀ ಎಲ್.ಎಸ್.ಶಾಸ್ತ್ರಿಯವರ ಬರಹ ನಿಮ್ಮ ಓದಿಗಾಗಿ

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ






8 views0 comments
bottom of page