top of page

ಗಾಂಧಿತಾತ

ಗಾಂಧಿತಾತ ನಮ್ಮತಾತ ದೇಶಕ್ಕಾಗಿ ಮಡಿದ ಮಹಾತ್ಮಾನಾತ...|| ಪ|| ಬಾಲ ಮೋಹನ ಗಾಂಧಿ ತಾಯಿ-ಗುರುವಿನ ಮಾತಿನಲ್ಲೇ ಜಗವ ಬೆಳಗಲು ಹೊರಟುಬಿಟ್ಟ...|| ೧|| ಶಾಲೆಯಲ್ಲಿ ಜಾಣನಲ್ಲ ನೀತಿಯಲ್ಲಿ ಜಗವಬಲ್ಲ ಅಂತರಾತ್ಮ ಬಂಧದಲ್ಲಿ ನಡೆದುಬಿಟ್ಟ....|| ೨|| ಬಡವ ನನ್ನ ದೇಶ ಕೋಟು ಸೂಟು ಬೇಡ ಪಂಚೆವುಟ್ಟು ಸಾಗಿಬಿಟ್ಟ...|| ೩|| ಅಸ್ತ್ರ ಎಂದು ಹಿಡಿಯಲಿಲ್ಲ ಹನಿ ರಕ್ತ ಚೆಲ್ಲಲಿಲ್ಲ ಯುದ್ಧ ಮಾತ್ರ ಗೆದ್ದುಬಿಟ್ಟ....|| ೪|| ಸತ್ಯಾಗ್ರಹ ಶಸ್ತ್ರದಿಂದ ಅಹಿಂಸೆ ಮಾರ್ಗದಲ್ಲಿ ಬ್ರಿಟಿಷರನ್ನು ನಡುಗಿಸಿಟ್ಟ...|| ೫|| ಮಾಡು ಇಲ್ಲ ಮಡಿ ದೇಶ ಬಿಟ್ಟು ನಡಿ ಎನುತಾ ಬ್ರಿಟಿಷರನ್ನು ತೊಲಗಿಸಿಟ್ಟ...|| ೬|| ಸತ್ಯ ಶಾಂತಿ ನ್ಯಾಯ ಕರ್ಮ ಸಹನೆ ಪ್ರೀತಿ ನನ್ನ ಧರ್ಮ ಎನುತಾ ಅಜ್ಞಾನ ಅಂಧಕಾರವ ಕಳಚಿಬಿಟ್ಟ....|| ೮|| ನನ್ನ ಜೀವನವೇ ನನ್ನ ಸಾರ ಎನ್ನುತಾ ಬದುಕಿಬಿಟ್ಟ....|| ೯|| ಮಲಿಕಜಾನ ಶೇಖ...

ಸಂಖ, ಜತ್ತ (ಮಹಾರಾಷ್ಟ್ರ) 

17 views0 comments
bottom of page