top of page

ಕಲ್ಪತರು ನೀನು

ಮತ್ತೆ ದಾರಿ ತಪ್ಪಿತು

ನೆಮ್ಮದಿಯ ಹುಡುಕಾಟದಲಿ

ಅಲೆದಲೆದು ಬಳಲಿದೆ

ನಾನು-ನನ್ನದೆಂಬ ತಡಕಾಟದಲಿ

ತಮಸ್ಸಿನ ಪರದೆಯು

ಮನಸ್ಸನ್ನು ಮುಚ್ಚಿದೆ

ಅಸತ್ಯ, ಮೋಹ-ಪಾಶದಲಿ

ಜೀವನ ಬಂಧಿಯಾಗಿದೆ

ಇನ್ನೇನು ಉಳಿದಿದೆ ನನಗೆ

ಕಡು ಕಪ್ಪಿನ ರಾತ್ರಿಯೇ ಗತಿ ಕೊನೆಗೆ

ಎಂಬ ಮೂಕ ರೋಧನೆಯ ನಡುವೆ

ಕೇಳಿ ಬಂತು ಮನ ಸ್ಪರ್ಶಿಸುವ ದನಿಯೊಂದು

ಒಮ್ಮೆ ಇಣುಕಿ ನೋಡು ಒಳಗೆ

ಹೃದಯದ ಕಮಲ ಅರಳುತಿಹುದು

ಬ್ರಹ್ಮಾಂಡವೇ ನಿನ್ನಲ್ಲಿ ಅಡಗಿ ಕೂತಿಹುದು

ಬದುಕನ್ನೇ ಬದಲಿಸಬಲ್ಲ ಕಲ್ಪತರು ನೀನು

ಸುಖ ಸಮೃದ್ಧಿ ಶಾಂತಿಯ ಚಿರಕಾರಂಜಿ ನೀನು

ಬೋಧಿ ವೃಕ್ಷದ ನೆರಳಿನ ತಂಪು ನಿನಗೂ ಸಿಗಲಿ

ನಿನ್ನ ಪರಮಾತ್ಮ ಎಂದೆಂದಿಗೂ ನಗು ಸೂಸಲಿ


ಮಧುಬಾಲಾ ಎಂ.


ಮಧುಬಾಲಾ ಎಂ ಅವರು ಇಂಜಿನಿಯರಿಂಗ್ ಪದವೀಧರರು.ತಾಂತ್ರಿಕ ಬರವಣಿಗೆಯಲ್ಲಿ ತೊಡಗಿಕಂಡಿರುವ ಅವರು ಸಾಹಿತ್ಯ ಮತ್ತು ಸಂಗೀತದ ಗೀಳನ್ನು‌ ಆತ್ಮ ತೃಪ್ತಿಗಾಗಿ ಬೆಳೆಸಿಕೊಂಡು ಬಂದಿದ್ದಾರೆ.ಅವರ ತಾಯಿಯವರು ಮತ್ತು ತಾಯಿಯ ತವರು ಮನೆ ಕಲ್ಬಾಗದ ಗೋವಿಂದ ಹೆಗಡೆ ಯವರ ಮಕ್ಕಳು ಸಂಗೀತದ ಕ್ಷೇತ್ರದಲ್ಲಿ ತಮ್ಮದೆ ಆದ ಕೊಡುಗೆಯನ್ನು ನೀಡಿ ಪ್ರತೀತ ಯಶರಾಗಿದ್ದಾರೆ. ಮಧು ಬಾಲಾ ಎಂ ಅವರ "ಕಲ್ಪತರು ನೀನು" ಎಂಬ ಕವನ ನಿಮ್ಮ ಓದು ಮತ್ತು ಸಹೃದಯ ಸ್ಪಂದನಕ್ಕಾಗಿ.


ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ







110 views0 comments
bottom of page