top of page

ಕಡಿದರೂ ಮಡಿಯಲಾರದ ಜೀವ

ನನ್ನೊಳಗಿದೆ ಜೀವಜಲ

ಗರ್ಭಸ್ಥ ಶಿಶುಗಳನು

ಹೊತ್ತ ತಾಯಿ ನಾನು

ಹೊರಹಾಕದಿರಲಾರೆ ;

ನನ್ನನೆಷ್ಟು ಕಡಿದರೂ

ಬಡಿದರೂ,

ಒಡಲ ಕುಡಿಗಳನಾದರೂ

ಕಂಡು ಬದುಕುವ ಆಸೆ !

ಕಳೆದುಕೊಂಡಿದ್ದು

ಮರಳಿ ಪಡೆಯಲಾರೆ ,

ಉಳಿದದ್ದನಾದರೂ

ಉಳಿಸಿಕೊಳ್ಳುವ

ತವಕ.

ಒಡಲೊಡೆದು ಹೊರಬಂದ

ಜೀವದ ಕುಡಿಗಳನು

ನೋಡಿ ಹಿಗ್ಗುತಿದೆ ಜೀವ.

ಮತ್ತೆ ನಾ

ಚಿಗುರುವೆನೊ,

ಇದ್ದಲ್ಲೆ ಸಾಯುವೆನೊ

ನಾನರಿಯೆ

ಬದುಕು ನನ್ನದಾದರೂ

ಬದುಕು ಸಾವುಗಳು

ನನ್ನ ಕೈಯಲ್ಲಿಲ್ಲ.

ಬಂದವರೊಮ್ಮೆ

ಹೋಗಲೇಬೇಕಲ್ಲವೆ?


- ಎಲ್. ಎಸ್. ಶಾಸ್ತ್ರಿ

6 views0 comments
bottom of page