top of page

ಕಾನೂನು ಕುಸುಮ ಅಂಕಣ 4

ಗ್ರಹಕ್ರತ್ಯ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಅಧಿನಿಯಮ 2005------


ಕಾನೂನಿನ ಅಡಿಯಲ್ಲಿ ಮಹಿಳೆಯರ ರಕ್ಷಣೆಗೆ ಎಷ್ಟೇ ಅವಕಾಶ ಕಲ್ಪಿಸಿದರು ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಮಹಿಳಾ ದೌರ್ಜನ್ಯದ ಕೂಗು ಕೇಳಿಬರುತ್ತಿತ್ತು ಇದನ್ನ ಹತ್ತಿಕ್ಕುವ ಸಲುವಾಗಿ ,ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆಯನ್ನು ಗ್ರಹಕ್ರತ್ಯದ ದೌರ್ಜನ್ಯ ಮತ್ತು ಗ್ರಹಕೃತ್ಯದ ಘಟನೆಗೆ ಸಂಬಂಧಸಿದಂತೆ ಒದಗಿಸುವ ನಿಟ್ಟಿನಲ್ಲಿ ಈ ಅಧಿನಿಯಮ ಜಾರಿಯಲ್ಲಿ ಬಂದಿರುತ್ತದೆ.


ಇದರ ಮುಖ್ಯ ಉದ್ದೇಶವೆಂದರೆ,ಮಹಿಳೆಯರ ಮೇಲೆ ಆಗುವ ಗ್ರಹಕ್ರತ್ಯದ ದೌರ್ಜನ್ಯ ಅಂದರೆ,ಬೈಯುವುದು,ದೈಹಿಕ ಕಿರುಕುಳ ಕೊಡುವುದು, ಹಣಕಾಸಿನ ತೊಂದರೆ,ವರದಕ್ಷಿಣೆ ಕಿರುಕುಳ ಗಂಡನ ಅಥವಾ ಆತನ ಸಂಬಂಧಿಕರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ,ಇತ್ಯಾದಿ. .........


ಈ ಅಧಿನಿಯಮವು ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಕೊಡುವುದಾಗಿದೆ. ಈ ಉದ್ದಶದಿಂದಲೇ ರಾಜ್ಯ ಸರ್ಕಾರವು,ಅಧಿಸೂಚನೆಯ ಮೂಲಕ ಪ್ರತಿಯೊಂದು ಜಿಲ್ಲೆಗೆ ಅವಶ್ಯಕ ಎನಿಸುವ ಸಂಖ್ಯೆಯ ರಕ್ಷಣಾ.. ಅಧಿಕಾರಿಗಳನ್ನು ನೇಮಕ ಮಾಡಿವುದು. ಸಾಧ್ಯವಾದಷ್ಟು ಮಟ್ಟಿಗೆ ಮಹಿಳೆಯು ರಕ್ಷಣಾ ಅಧಿಕಾರಿಯಾಗಿರಬೇಕು ಮತ್ತು ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರತಕ್ಕದ್ದು.


. ರಕ್ಷಣಾ ಅಧಿಕಾರಿಯ ಕರ್ತವ್ಯ,ಮತ್ತು ಪರ್ಕಾರ್ಯ ಯಾವುದೆಂದರೆ


1.ಈ ಅಧಿನಿಯಮದ ಅಡಿಯಲ್ಲಿ ದಂಡಾಧಿಕಾರಿಯು ತನ್ನ ಕಾರ್ಯ ನಿರ್ವಹಿಸಲು ಸಹಾಯ ಮಾಡುವುದು.


2. ಗೊತ್ತುಪಡಿಸಿದ ರೀತಿ ಹಾಗೂ ನಮೂನೆಯಲ್ಲಿ ಗ್ರಹಕೃತ್ಯ ಘಟನಾ ವರದಿಯನ್ನು ದಂಡಾಧಿಕಾರಿಗೆ ಸಲ್ಲಿಸಬೇಕು.ಮತ್ತು ಪಿರ್ಯದಿಯನ್ನು ಸ್ವೀಕರಿಸಿದ ನಂತರ ಮತ್ತು, ಗ್ರಹಕ್ರತ್ಯ ದೌರ್ಜನ್ಯ ನಡೆದಿದೆ ಎಂಬ ಸ್ಥಳೀಯ ಅಧಿಕಾರ ವ್ಯಾಪ್ತಿಯ ಪ್ರತಿಗಳನ್ನುಆರಕ್ಷಕ ಠಾಣೆಯ ಪ್ರಭಾರ ಹೊಂದಿದ ಆರಕ್ಷಕ ಅಧಿಕಾರಿಗೆ ಮತ್ತು ಆ ಪ್ರದೇಶದ ಸೇವೆ ಒದಗಿಸುವವರಿಗೆ ಕಳುಹಿಸತಕ್ಕದ್ದು..


3. ಪೀಡಿತ ವ್ಯಕ್ತಿಯು ಇಚ್ಚೇಪಟ್ಟಲ್ಲಿ , ರಕ್ಷಣಾ ಆದೇಶದ ಅವಶ್ಯಕತೆ ಇದ್ದಲ್ಲಿ ದಂಡಾಧಿಕಾರಿಗೆ ಗೊಟ್ಟುಪಡಿಸಲಾದ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸುವುದು.


4.ಪೀಡಿತ ವ್ಯಕ್ತಿಗೆ ಕಾನೂನು ಸೇವಾ ಪ್ರಾಧಿಕಾರದ ಅಡಿಯಲ್ಲಿ ಸೇವೆ ಒದಗಿಸುವುದು.


5.ಪೀಡಿತ ವ್ಯಕ್ತಿಗೆ ಬೇಕಾದಲ್ಲಿ ಸುರಕ್ಷಿತ ಆಶ್ರಯ ಮನೆಯನ್ನು ಲಬ್ಯವಾಗುವಂತೆ ಮಾಡುವುದು.


5.ಒಂದುವೇಳೆ ಪೀಡಿತ ವ್ಯಕ್ತಿಗೆ ದೈಹಿಕ ಗಾಯಗಳಾಗಿದ್ದರೆ , ಅವಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ, ಗೃಹಕ್ರತ್ಯ ದೌರ್ಜನ್ಯ ನಡೆದ ಸ್ಥಳದ ಅಧಿಕಾರ ವ್ಯಾಪ್ತಿ ಹೊಂದಿದ ಆರಕ್ಷಕ ಠಾಣೆ ಮತ್ತು ದಂಡಾಧಿಕಾರಿಗೆ ವರದಿಯನ್ನು ರವಾನಿಸ ತಕ್ಕದ್ದು.


6. ರಕ್ಷಣಾ ಅಧಿಕಾರಿಯು ದಂಡಾಧಿಕಾರಿಗಳು ಮತ್ತು ಸರಕಾರ ಅಥವಾ ಈ ಅಧಿಯಮದ ಅಡಿಯಲ್ಲಿ ಆಜ್ಞಾಪಿಸಲಾದ ಕರ್ತವ್ಯವನ್ನು ಮಾಡುವುದಾಗಿದೆ.


ಈ ಅಧಿನಿಯಮದ ಅಡಿಯಲ್ಲಿ ಒಂದು ಅಥವಾ ಹೆಚ್ಚಿನ ಪರಿಹಾರಕ್ಕಾಗಿ ಪೀಡಿತ ವ್ಯಕ್ತಿ ಅಥವಾ ರಕ್ಷಣಾ ಅಧಿಕಾರಿಯೂ ಅಥವಾ ಪೀಡಿತ ವ್ಯಕ್ತಿಯ ತರ್ಪಿ ಯಾವುದೇ ವ್ಯಕ್ತಿಯು ದಂಡಾಧಿಕಾರಿಗೆ ಅರ್ಜಿಯನ್ನು ಸಲ್ಲಸಬಹುದು ದಾಗಿದೆ .


ರಕ್ಷಣಾ ಆದೇಶ...


ದಂಡಾಧಿಕಾರಿಯು ಪೀಡಿತ ವ್ಯಕ್ತಿ ಮತ್ತು ಎದುರುದಾರನೀಗೆ ಹೇಳಿಕೆ ಕೊಡಲು ಅವಕಾಶ ಕೊಟ್ಟು ಗ್ರಹಾಕೃತ್ಯ ನಡೆದಿದೆ ಅಥವಾ ನಡೆಯಬಹುದು ಎಂದು ಪೂರ್ವಪಕ್ಷದ ಮೊದಲನೆಯ ಕಣ್ಣರಿಕೆಯಿಂದ ಕಂಡು ಬಂದಲ್ಲಿ ಸಮಾಧಾನ ಪಟ್ಟಲ್ಲಿ ಪೀಡಿತ ವ್ಯಕ್ತಿಗೆ ರಕ್ಷಣಾ ಆದೇಶವನ್ನು ಕೊಡಬಹುದಾಗಿದೆ.ಮತ್ತು ಎದುರುದಾರನನ್ನು


a.ಯಾವುದೇ ಗ್ರಹಕ್ರತ್ಯ ದೌರ್ಜನ್ಯ ಎಸಗದಂತೆ


b. ಗ್ರಹಕೃತ್ಯ ದೌರ್ಜನ್ಯದ ಕೃತ್ಯ ಎಸಗಲು ಸಹಾಯ ಅಥವಾ ದುರ್ಭೋದನೆ ಮಾಡದಂತೆ.


c.ಪೀಡಿತ ವ್ಯಕ್ತಿಯು ನೌಕರಿ ಮಾಡುವ ಸ್ಥಳ ಪ್ರವೇಶಿಸದಂತೆ ,ಅಥವಾ ಪೀಡಿತ ವ್ಯಕ್ತಿ ಮಗುವಾಗಿದ್ದರೆ,ಅದರ ಶಾಲೆ ಅಥವಾ ಪೀಡಿತ ವ್ಯಕ್ತಿಯ ಯಾವುದೇ ಇತರ ಸ್ಥಳ.


d. ಪೀಡಿತ ವ್ಯಕ್ತಿಯೊಂದಿಗೆ ಯಾವುದೇ ನಮೂನೆಯಲ್ಲಿ ವ್ಯವಹರಿಸಲು ಪ್ರಯತ್ನಿಸುವಿಕೆ,ಅದು ವಯಕ್ತಿಕ,ಮೌಖಿಕ ಅಥವಾ ಲಿಖಿತ ಅಥವಾ ದೂರವಾಣಿ ಸಂಪರ್ಕ ಒಳಗೊಂಡಿದೆ.


e.ಗ್ರಹಕ್ರತ್ಯ ದೌರ್ಜನ್ಯದ ಸಲುವಾಗಿ ಸಹಾಯ ಮಾಡುವ ಯಾವುದೇ ಆಶ್ರಿತ ,ಇತರೆ ಸಂಬಂಧಿಕರು ಅಥವಾ ಇತರ ವ್ಯಕ್ತಿಗೆ ದೌರ್ಜನ್ಯ ಮಾಡದಂತೆ,


f.ರಕ್ಷಣಾ ಅಧಿಕಾರಿ ನಮೂದೀಸಿದಂತೆ ಇತರೆ ಕೃತ್ಯ ಎಸಗುವುದಕ್ಕೆ ತಡೆಗಟ್ಟುವುದು.


ಅಲ್ಲದೆ ಸ್ಥಾನಿಕ ಆದೇಶವನ್ನು ಮತ್ತು ಹಣಕಾಸಿನ ಪರಿಹಾರವನ್ನು ಒದಗಿಸುವ ಆದೇಶವನ್ನು ದಂಡಾಧಿಕಾರಿಗಳು ಮಾಡಲು ಈ ಕಾನೂನಿನಲ್ಲಿ ಅವಕಾಶ ವಿದೆ.


ಹೀಗೆ ಎಷ್ಟೋ ಕಾನೂನು ಗಳು ಮಹಿಳೆಯರ ರಕ್ಷಣೆ ಗೆ ಇದ್ದರೂ ಕೂಡ ಮಹಿಳಾ ದೌರ್ಜನ್ಯದ ಕೂಗು ಇನ್ನೂ ಕಡಿಮೆಯಾಗಿಲ್ಲ ಅನ್ನುವುದು ವಿಷಾದನೀಯ ಸಂಗತಿ ಯಾಗಿದೆ.


-ಉಮಾ ಡಿ ನಾಯ್ಕ

16 views0 comments
bottom of page