top of page

ಕಾಂಕ್ರೀಟು ಬಿರುಕಲ್ಲಿ ಕವಿತೆಯ ಬೀಜ [ಕವನ- ಚಿತ್ರಾಲೋಚನೆ -4]



        ಸತ್ತು ನೆಲಕ್ಕೊರಗಿದ ದೇಹದೊಳಗೊಂದು

        "ಪಿಟಿ,ಪಿಟಿ ನಾಡಿಯ ಮಿಡಿತ.

         ಹೊಯ್ದಾಡುವ ಭೀಕರ ಕಡಲ ಮಧ್ಯೆ

         ಪುಟಾಣಿ ನಾಡ ದೋಣಿ.

         ರಕ್ತ ಸಿಕ್ತ ಇತಿಹಾಸದ ನಡುವೆ ಒಂದು

         ಶಾಂತ,ಸುಂದರ ಅಧ್ಯಾಯದ ಮಂದಹಾಸ.

         ಬಿರುಬಿಸಿಲ ಬೆಂಗಾಡ ಮಧ್ಯೆ ಚಿಮ್ಮುವ

         ಸಣ್ಣ ಸಿಹಿ ನೀರ ಬುಗ್ಗೆ.

         ಘಾಢ ಮೌನದ ನೋವ ನಡುವೆ

         ಅನಿರೀಕಿ಼ತ ನಗೆ ಮಾತಿನ ಕೋಲ್ಮಿಂಚು.

         ಕತ್ತಲ ನಡುವೆ ಒಂದು ಮಿಂಚು ಹುಳ.

         ನಿರಾಶೆಯ ಗಟ್ಟಿ ಕಾಂಕ್ರೀಟು ಬಿರುಕಿನಲ್ಲಿ

         ಆಸೆಯ ಹಸಿರ ಉಸಿರು ಬೀಜ,

         ಮೊಳೆತು,ಗಿಡವಾಗಿ ಚಿಗುರಿ ಪಲ್ಲವಿಸಿ

         ಹೂವಾಗಿ,ಹಣ್ಣಾಗಿ,ಹಸಿದ ಹೊಟ್ಟೆಗಳ

         ತಣ್ಣಗಾಗಿಸಿ,ಧನ್ಯತೆಪಡೆವ ಕನಸು

ಕಾಣುತ್ತಿದೆ,ಎತ್ತಿಟ್ಟು,ನೆಟ್ಟು ನೀರುಣಿಸಿ

ಪೋಷಿಸಿ ಪೊರೆವವರ ಕಾಯುತ್ತಿದೆ...

ನೋವು,ಹತಾಶೆ ತುಂಬಿದ ಜರ್ಝರಿತ

ಮನದ ಬಿರುಕಲ್ಲಿ ಕುಳಿತು ಮೊಳೆತು

ಸಣ್ಣಗೆ ಉಸಿರಾಡುತ್ತ, ಮಿಸುಕಾಡುತ್ತಿದೆ

ಈ...ಕವಿತೆಯ..ಬೀಜ.




--ಅಬ್ಳಿ,ಹೆಗಡೆ.

36 views1 comment
bottom of page