top of page

ಒಂದು ಬಾರಿ ಬಂದು ಬಿಡು



ಒಂದು ಬಾರಿ ಬಂದುಬಿಡು

ನನ್ನ ಮುಂದೆ ನೀನು

ನಿನ್ನ ರೂಪ ತುಂಬಿಕೊಳುವೆ ಕಣ್ಣಿನೊಳಗೆ ನಾನು

ಹೃದಯ ಕೂಗಿ ಕರೆಯುತಿದೆ

ನಿನ್ನ ಬಾ ಎಂದು

ಮನವು ಕಾತರಿಸುತಿದೆ

ನಿನ್ನ ಕಾಣಲೆಂದು

ಎದೆಯ ತುಂಬ ನೀನೆ ಇರುವೆ

ಕನಸಿನಲ್ಲೂ ಬರುವೆ

ಮನವನೆಲ್ಲ ಆವರಿಸಿ

ಎನಿತು ಮುದವ ತರುವೆ

ನನ್ನ ನೋಟ ಹರಿಯುವಲ್ಲಿ

ನಿನ್ನ ನಾ ಕಾಣುತಿರುವೆ

ನನ್ನ ಜೀವದೊಳಗೆ ನೀನು ಜೀವವಾಗಿ ಇರುವೆ

ಜಗದ ಅಣು ಅಣುವಿನಲ್ಲೂ

ಚೈತನ್ಯ ನೀನೆ ಪ್ರಭುವೆ ಕಾಯುತಿಹುದು ನಮ್ಮನೆಲ್ಲ

ನಿನ್ನಪಾರ ಪ್ರೀತಿಯೊಲುಮೆ


ವೆಂಕಟೇಶ ಬೈಲೂರು


ಕವಿ ಕ್ರಿಯಾಶೀಲ ಬರಹಗಾರ ವೆಂಕಟೇಶ ಬೈಲೂರ ಅವರ "ಒಂದು ಬಾರಿ ಬಂದು ಬಿಡು" ಕವಿತೆ ನಿಮ್ಮ ಓದಿಗಾಗಿ.

ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ

6 views0 comments
bottom of page