top of page

ಈ ದೇಶಕ್ಕಾಗಿ ಮತ್ತೊಮ್ಮೆ ಹುಟ್ಟಿ ಬನ್ನಿ ವೀರಪುತ್ರರೆ..!!

ಮೂಲ ಹಿಂದಿ : ಫೇಸಬುಕ್ ಕೃಪೆ.

ಕನ್ನಡಕ್ಕೆ : ಶ್ರೀರಂಗ ಕಟ್ಟಿ ಯಲ್ಲಾಪುರ.

ಖ್ಯಾತ ನಿರ್ದೇಶಕ ಬಿ.ಆರ್.ಚೋಪ್ರಾ ಅವರ

ಮಹಾಭಾರತ ದಲ್ಲಿನ ಒಂದು ದೃಶ್ಯ..

ರಾತ್ರಿಯ ಸಮಯದಲ್ಲಿ ಗಾಂಧಾರಿ ಮತ್ತು ಕುಂತಿದೇವಿ

ಯುದ್ಧಭೂಮಿಯಲ್ಲಿ ಶರಶಯ್ಯೆಯ ಮೇಲೆ ಮಲಗಿದ್ದ ಆಚಾರ್ಯ ಭೀಷ್ಮ ಪಿತಾಮಹರ ಭೇಟಿಗೆ ಹೋಗುತ್ತಾರೆ. ಆಗ ದಾರಿಯಲ್ಲಿ ಇಬ್ಬರು ಸೈನಿಕರು ಒಬ್ಬ ಸೈನಿಕನ ಶವವನ್ನು ಸಂಸ್ಕಾರ ನಡೆಸಲು ಹೊತ್ತು ನಡೆಯುತ್ತಿದ್ದರು. ಕುಂತಿ ಮತ್ತು ಗಾಂಧಾರಿ ಪಕ್ಕಕ್ಕೆ ಸರಿದು ನಿಂತು ಆ ಶವಕ್ಕೆ ನಮಸ್ಕರಿಸುತ್ತಾರೆ. ಆಗ ಗಾಂಧಾರಿ ಹೇಳುತ್ತಾಳೆ, " ನೀನು ಕೌರವರ ಸಲುವಾಗಿ ಯುದ್ಧ ಮಾಡಿದೆಯೊ ಅಥವಾ ಪಾಂಡವರಿಗಾಗಿಯೊ ನನಗೆ ಗೊತ್ತಿಲ್ಲ. ಆದರೂ ನಾನು ನಿನಗೆ ಗೌರವ ಸಲ್ಲಿಸುತ್ತೇನೆ. ಏಕೆಂದರೆ ನೀನು ಈ ಮಹಾನ್ ರಾಷ್ಟ್ರದ ಸೈನಿಕ..!!

ರಾಷ್ಟ್ರವಾದ ಮತ್ತೆ ಬೇರೇನೂ ಅಲ್ಲ, ಇದೇ ಭಾವನೆಯ ಮತ್ತೊಂದು ಹೆಸರಾಗಿದೆ ಅಷ್ಟೆ..!

ಯೋಧನೊಬ್ಬ ಮಂಚದ ಮೇಲೆ ಮಲಗಿ ಪ್ರಯಾಣ ಮಾಡುವದಿಲ್ಲ, ಆತ ಕಾದಾಡುತ್ತಲೇ ವೀರಗತಿ ಹೊಂದುತ್ತಾನೆ‌

ಜಗತ್ತಿನ ಸರ್ವಶ್ರೇಷ್ಠ ವೀರಾಧಿವೀರರ ನಡುವೆ ಏಕಾಂಗಿಯಾಗಿ ಹೋರಾಡಿದ ಬಾಲಕ ಅಭಿಮನ್ಯು ಆಗಿರಬಹುದು, ಅಥವಾ ಯುದ್ಧಭೂಮಿಯಲ್ಲಿ ಹೋರಾಡುತ್ತಲೇ ಪ್ರಾಣಾರ್ಪಣೆ ಮಾಡಿದ ಝಾಂಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ ಮುಂತಾದ ವೀರಾಂಗನೆಯರಾಗಿರಬಹುದು.‌! ಭಗವಂತ ವೀರರಿಗೆ ವೀರಗತಿ ದಯಪಾಲಿಸುವದರ ಮೂಲಕ ಅವರನ್ನು ಸನ್ಮಾನಿಸುತ್ತಾನೆ. ಇದೇ ಅವರ ಶೌರ್ಯಕ್ಕೆ ಸಲ್ಲುವ ಅರ್ಹ ಗೌರವವೂ ಹೌದು!!

ಭಾರತೀಯ ಸಂಸ್ಕೃತಿಯಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡುವ ಹಿಂದಿನ ಉದ್ದೇಶ ಮತ್ತು ಭಾವನೆ ಗಳೇನೆಂದರೆ, ಮೃತ ವ್ಯಕ್ತಿ ಆತನ ಸ್ವರ್ಗವಾಸಿ ಪಿತೃಗಳ

ಜೊತೆಗೆ ಸ್ವರ್ಗಾರೋಹಣ ಮಾಡಿದ ಎಂದು. ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡುವ ಸೈನಿಕ ಮರಣದ ನಂತರ ನೇರವಾಗಿ ಚಂದ್ರಗುಪ್ತ ಮೌರ್ಯ, ರಾಣಾ ಪ್ರತಾಪ ಸಿಂಹ, ಛತ್ರಪತಿ ಶಿವಾಜಿ ಮುಂತಾದ ವೀರಾಧಿವೀರರ ಸಾಲಿನಲ್ಲಿ ಕಂಗೊಳಿಸುತ್ತಾನೆ..! ರಾಮ ಮತ್ತು ಕೃಷ್ಣರ ಸಂಗಡ ಬೆರೆಯುತ್ತಾನೆ‌‌..!!


ಒಬ್ಬ ಯೋಧನ ವೀರ ಗತಿಯ ಪ್ರಸಂಗ ರಾಷ್ಟ್ರದಲ್ಲಿ ಶೋಕದ ಸಂಗಡ ಹೆಮ್ಮೆಯ ಭಾವ ತುಂಬುತ್ತದೆ.

ಹೆಮ್ಮೆಯಿಂದ, ಗರ್ವದಿಂದ ಪ್ರತಿಯೊಬ್ಬನ ತಲೆ ಬಾಗುವದು ದೇಶಕ್ಕಾಗಿ ಬಲಿದಾನ ಮಾಡುವ ನಮ್ಮ ಮಹಾನ್ ಪರಂಪರೆಗಾಗಿ..!! ಗರ್ವ ಮೂಡುವದು ಶೌರ್ಯದಿಂದ ಕೂಡಿದ ಅವರ ಜೀವನ ಯಾತ್ರೆಗಾಗಿ..!! ಗರ್ವ ಮೂಡುವದು ಅವರ ಅಪೂರ್ವ ಪರಾಕ್ರಮಕ್ಕಾಗಿ..!!

ಒಬ್ಬ ಯೋಧ ಪ್ರಯಾಣ ಮಾಡುವಾಗ, ಇಡೀ ರಾಷ್ಟ್ರವನ್ನು ಒಂದಾಗಿ ನಿಲ್ಲುವಂತೆ ಮಾಡುತ್ತಾನೆ..

ಕ್ಯಾಪ್ಟನ್ ರಾವತ್ ಅವರ ಮೃತ್ಯುವಿನ ಬಳಿಕ ಅಪಾರ ಶೋಕದಲ್ಲಿ ಮುಳುಗಿರುವ ರಾಷ್ಡ್ರವನ್ನು ನೋಡಿದಾಗ, ಹಿಂದೆ ಎಷ್ಟೆಲ್ಲ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸಿದ ನಂತರವೂ ಭಾರತ ದೇಶ, ಸಂಪೂರ್ಣ ಪ್ರತಿಷ್ಠೆಯನ್ನು ತಲೆಯಲ್ಲಿ ಹೊತ್ತು ಮತ್ತೆ ಮತ್ತೆ ಎದೆ ಸೆಟಿಸಿ ಪ್ರಫುಲ್ಲಿತವಾಗಿ ನಿಂತಿರುವದಾದರೂ ಏಕೆ..!!?

ಯಾವ ರಾಷ್ಟ್ರ ತನ್ನ ಸೈನಿಕರನ್ನು ಇಷ್ಟು ಭಕ್ತಿಭಾವ- ದಿಂದ ಪೂಜಿಸುತ್ತದೊ ಅದು ಎಂದಿಗೂ ಪರಾಜಿತ -ವಾಗಲು ಖಂಡಿತ ಸಾಧ್ಯವಿಲ್ಲ..!!


ಯೋಧರ ಮೃತ್ಯುವೂ ರಾಷ್ಟ್ರದಲ್ಲಿ ಅಡಗಿ ಕುಳಿತಿರುವ ದ್ರೋಹಿಗಳ ಪರಿಚಯವನ್ನು ನೀಡುತ್ತದೆ. ಕ್ಯಾಪ್ಟನ್ ರ ಮೃತ್ಯುವನ್ನು ನೋಡಿ ನಗುತ್ತಿರುವ ದೇಶದ್ರೋಹಿಗಳ ಸ್ಪಷ್ಟ ಪರಿಚಯವಾಗುತ್ತಿದೆ, ದೇಶ ಅವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲು ಮರೆಯಲಾರದು..!


ಹೋಗಿ ಬನ್ನಿ ಸೇನಾಪತಿಗಳೆ..!!

ಇಡೀ ರಾಷ್ಟ್ರ ಗರ್ವದಿಂದ, ಹೆಮ್ಮೆಯಿಂದ ಉಬ್ಬಿದ ಎದೆ ಮತ್ತು ತಲೆಯೊಂದಿಗೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು‌‌..! ಕ್ಯಾಪ್ಟನ್ ರಾವತ್ ಮತ್ತು ವೀರಗತಿ ಹೊಂದಿದ ಎಲ್ಲ ಯೋಧರಿಗೆ ನಮನಗಳು. ಮಾತೃಭೂಮಿ ಎಂದಿಗೂ ತನ್ನ ವೀರಪುತ್ರರನ್ನು ಎಂದಿಗೂ ಮರೆಯಲಾರದು..!


ವೈರಿಗಳ ಮತ್ತು ದೇಶದ್ರೋಹಿಗಳ ಹುಟ್ಟಡಗಿಸಲು ಮತ್ತೊಮ್ಮೆ ಹುಟ್ಟಿಬನ್ನಿ.. ದೇಶ ನಿಮಗಾಗಿ ಕಾಯುತ್ತಿದೆ..

ಜೈಹಿಂದ್..!!


ಶ್ರೀರಂಗ ಕಟ್ಟಿ ಯಲ್ಲಾಪುರ.

3 views0 comments
bottom of page