top of page

ಆಲೋಚನೀಯ -೨೦

ಚುನಾವಣೆಯು ಪ್ರಜಾಪ್ರಭುತ್ವದಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.ಕಳೆದ ಶತಮಾನಕ್ಕಿಂತ ಈ ಶತಮಾನದಲ್ಲಿ ಚುನಾವಣೆಗೆ ಇನ್ನಿಲ್ಲದ ಮಹತ್ವ  ಬಂದಿದೆ. ಚುನಾವಣೆಯ ಜ್ವರ ಎಂಬ ಪದವೊಂದು ಚಾಲ್ತಿಯಲ್ಲಿದೆ. ಈ ಜ್ವರ ಬಂದಿರುವುದು ಮತದಾರರಿಗಲ್ಲ. ಉಮೇದುವಾರರಿಗೆ ಮತ್ತು ಅವರ ಅನುಯಾಯಿಗಳಿಗೆ.ಇವರಲ್ಲಿ ಕೆಲವರು ಅನುಯಾಯಿಗಳಾದರೆ ಹಲವರು ಅನುನಾಯಿಗಳು.ಈ ಚುನಾವಣೆ ಜ್ವರ ಚುನಾವಣೆಯ ಬಳಿಕವು ಕೆಲವು ದಿನ ಇರುತ್ತದೆ.ಇದನ್ನು ವಿಷಮಶೀತ ಜ್ವರ ಎಂದು ಕರೆಯ ಬಹುದು." ಜನರು ಅಸಮಾಧಾಅನದಿಂದ ಮತವನ್ನು ಚಲಾಯಿಸುವರೆ ಹೊರತು ಮೆಚ್ಚಕೆಯಿಂದಲ್ಲ.ಜನಸಾಮಾನ್ಯನೊಬ್ಬ ಯಾವುದರ ಪರವಾಗೂ ಮತ ಹಾಕುವುದಿಲ್ಲ,ಯಾವುದಾದರ ಒಂದರ ವಿರೋಧವಾಗೇ ಹಾಕುವನು." ವಿಲಿಯಂ ಬೆನೆಟ್ ಮನ್ರೊ ಎಂಬ ಮಾತು ಉಲ್ಲೇಖನಾರ್ಹ. ಅಮೇರಿಕಾದ ಚುನಾವಣೆ ಜಗತ್ತಿನ ಜನರನ್ನೆಲ್ಲಾ ಕುತೂಹಲಿಗಳನ್ನಾಗಿ ಮಾಡಿದೆ.ಪ್ರಾಮಾಣಿಕತೆ ಮತ್ತು ಬೂಟಾಟಿಕೆಗಳು ಎದುರು ಬದುರು ನಿಂತು ಚುನಾವಣೆಯಲ್ಲಿ ಮಾತುಗಳ ಅಸ್ತ್ರ ಪ್ರತ್ಯಸ್ತ್ರಗಳನ್ನು ಪ್ರಯೋಗಿಸುವ ರೀತಿ ರೋಚಕವಾಗಿರುತ್ತದೆ.ಭಾರತ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.ಜನರು ಬಣಗಳಾಗಿ ಕಾದಾಡುತ್ತಿದ್ದಾರೆ. ಬದುಕಿದಂತೆ  ಬರೆದ,ನುಡಿದಂತೆ ನಡೆದ ಧೀಮಂತ ಜನನಾಯಕ ದಿನಕರ ದೇಸಾಯಿಯವರು ತಮ್ಮ ಚುಟಕಗಳಲ್ಲಿ ಚುನಾವಣೆಯ ವಾಸ್ತವಿಕ ಸತ್ಯಗಳನ್ನು ನಿರೂಪಿಸಿದ್ದಾರೆ.  ಆ ಚುನಾವಣೆಯಲ್ಲಿ ಸರಕಾರಿ ಪಕ್ಷ ವಿಪರೀತ ಹಣ ಚೆಲ್ಲಿ ಪಡೆದಿತ್ತು ಮೋಕ್ಷ ಈ ಚುನಾವಣೆಯಲ್ಲಿ ಆಗಿ ಉಪರಾಟೆ ಮುರಿದು ಹೋಯಿತು ಮಗನೆ,ಸರಕಾರಿ ಕೋಟೆ. ತಮ್ಮ ಅನುಭವವನ್ನು ಇಲ್ಲಿ ದಿನಕರ ದೇಸಾಯಿ ಅವರು ಮುಚ್ಚು ಮರೆ ಇಲ್ಲದೆ ಹೇಳಿದ್ದಾರೆ.ಚುನಾವಣೆ ಮುಗಿದು ಸರಕಾರ ರಚನೆಯಾದರು ಏನು ಪ್ರಯೋಜನ ಇಲ್ಲ‌. ಭ್ರಷ್ಟರು ಮತ್ತು ಭಂಡರು ರಾಜ್ಯ ಆಳುತ್ತಿದ್ದಾರೆ.ತಮ್ಮ ಸ್ವಾರ್ಥವನ್ನು ಬಿಟ್ಟರೆ ಅವರಿಗೆ ಮತ್ತೆ ಯಾವ ಉದ್ದೇಶ  ಮತ್ತು ಆದರ್ಶಗಳಿಲ್ಲ. ಮತದಾರ ಅವರಿಗೆ ನಗಣ್ಯ.ಈ ಲೋಕದ ಪರಿಯನ್ನು ಕಂಡು ಅವರುಬರೆದ ಚುಟಕ ನಿತ್ಯ ಸತ್ಯವಾಗಿದೆ. ' ಈ ಲೋಕವೆನ್ನುವುದು ಕಳ್ಳ ಬಾಜಾರ ರಾಜ್ಯವಾಳುವ ಶಕ್ತಿ ಸುಳ್ಳು ಸರಕಾರ ಕಳ್ಳರಿಗೆ ಸುಳ್ಳರಿಗೆ ವಿಪರೀತ ದೋಸ್ತಿ ಜನಕೋಟಿಗಳ ಸುಲಿದು ಮಾಡಿದರು ಆಸ್ತಿ.                                   ದಿನಕರ ದೇಸಾಯಿ. ಈ ವಿಚಾರ ತ್ರಿಕಾಲ ಸತ್ಯ.ಈ ಲೋಕವನ್ನೆ ಕಳ್ಳ ಬಜಾರ ಮಾಡುವ ಹುನ್ನಾರ ಆಳುವವರದು.ಅವರು ಸುಳ್ಳು ಸರಕಾರವನ್ನೆ ರಾಜ್ಯ ಆಳುವ ಶಕ್ತಿ ಎಂದು ತೋರಿಸುತ್ತಿದ್ದಾರೆ.ಇಲ್ಲಿ ಕಳ್ಳರು ಮತ್ತು ಸುಳ್ಳರ ನಡುವೆ ವಿಪರೀತವಾದ ದೋಸ್ತಿ ಏರ್ಪಟ್ಟಿದೆ. ಈ ದೋಸ್ತಿಯಿಂದ ಅವರು ಜನಕೋಟಿಗಳನ್ನು ಸುಲಿದು ಅವರ ನಾಲ್ಕಾರು ತಲೆಮಾರುಗಳಿಗೆ ಕುಳಿತು ತಿನ್ನಲು ಸಾಕಾಗುವಷ್ಟು ಆಸ್ತಿ, ಬೇಕಾದಷ್ಟು ಹಣ  ಮಾಡಿಟ್ಟಿದ್ದಾರೆ.ಅವರಿಗೆ ಯಾರ ಹಂಗು ಇಲ್ಲ. ಭಯವಂತು ಮೊದಲೆ ಇಲ್ಲ.    ಅಮೇರಿಕಾದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ ಟ್ರಂಪ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್  ಹಿಮ್ಮೆಟ್ಟಿಸಿದ್ದಾರೆ.ಆದರೂ ಚುನಾವಣೆಯ ಫಲಿತಾಂಶ ಪ್ರಕಟವಾಗುವ ವರೆಗೆ ಕಾಯ ಬೇಕಾಗಿದೆ.ಆದರ್ಶ  ಮತ್ತು ಬುದ್ದಿವಂತಿಕೆಗಿಂತ ಮಿಗಿಲಾಗಿ ಯಾವುದೆ ವಿಧದಿಂದಲಾದರೂ ಅಧಿಕಾರದ ಗದ್ದುಗೆ ಹಿಡಿಯಲು ಟ್ರಂಪ್ ಶತಾಯು ಗತಾಯು ಪ್ರಯತ್ನ  ಮಾಡುತ್ತಿದ್ದಾರೆ‌.ಬುದ್ದಿವಂತ ವಕೀಲರನ್ನು ತನ್ನ ಬುಟ್ಟಿಗೆ ಹಾಕಿಕೊಂಡ ಟ್ರಂಪ್ ನ್ಯಾಯಾಧೀಶರನ್ನು ತಮಗೆ ಬೇಕಾದವರನ್ನು ಆಯ್ದು ಆಯಕಟ್ಟಿ ಜಾಗದಲ್ಲಿರುವಂತೆ ನೋಡಿಕೊಂಡಿದ್ದಾರಂತೆ. ಅರಾಜಕತೆಯನ್ನು ಸೃಷ್ಟಿಸುವ ವಾತಾವರಣ ಹುಟ್ಟು ಹಾಕಿ ಅಧಿಕಾರವನ್ನು ಮತ್ತೆ ಪಡೆಯುವ ಹುನ್ನಾರ ನಡೆದಿದೆ. ಇದನ್ನು ಮೀರಿ ಸತ್ಯ ಮತ್ತು ಪ್ರಾಮಾಣಿಕತೆಯನ್ನು ನಂಬಿದ ಅನುಭವಿ ಅಧ್ಯಕ್ಷರು ಅಮೇರಿಕಾದ ಅಧ್ಯಕ್ಷರಾಗಲಿ. ಲೋಕಸತ್ತೆಗೆ ಗೆಲುವಾಗಲಿ.      ಅಮೆರಿಕಾದ ಚುನಾವಣೆಯಲ್ಲಿ ಗೆದ್ದು ಬಂದ ಅಭ್ಯರ್ಥಿ ಅಮೇರಿಕಾದ ಆಶೋತ್ತರ, ಆದರ್ಶ, ತಾತ್ವಿಕತೆಯನ್ನು ನಾಡಿನಾದ್ಯಂತ ಬಿತ್ತರಸಲಿ.ಜಗತ್ತಿನ ದೊಡ್ಡಣ್ಣ ಎಂದು ಹೆಸರಾದ ಅಮೇರಿಕ ನ್ಯಾಯಪಕ್ಷ ಪಾತಿಯಾಗಿ ಜಗತ್ತಿನ ಹಿತದ ಬಗ್ಗೆ ಸದಕಾಲ ಸ್ಪಂದಿಸಲಿ. ಚುನಾವಣೆಗಳಲ್ಲಿ ಹಣ ನೀಡುವ ,ಬಲತ್ಕರಿಸಿ ಮತ ಪಡೆಯವ ಕೆಟ್ಟ ಚಾಳಿಯು ತೊಲಗಲಿ. ಅಮೇರಿಕದ ಚುನಾವಣೆಯ ಫಲಿತಾಂಶ  ಲೋಕಹಿತಕ್ಕೆ   ವಿನಿಯೋಗವಾಲಿ.                            ಡಾ.ಶ್ರೀಪಾದ ಶೆಟ್ಟಿ.





12 views0 comments
bottom of page