top of page

ಆಡುಸೋಗೆಯೆಂಬ ಸಂಜೀವಿನಿ





ಆಡುಸೋಗೆ







ಪರಿಚಯ.. ಇದು ಬೇಲಿಗಿಡ ಇದನ್ನು ಜೀವಂತಬೇಲಿಗಾಗಿ ಉಪಯೋಗಿಸುತ್ತೇವೆ ಇದು ಬೆಳೆಯಲು ಹೆಚ್ಚೇನೂ ಆರೈಕೆ ಬೇಡವೇಬೇಡ ನೀವು ಕಡಿದು ಬೀಸಾಡಿದರೂ ನೀರಿದ್ದರೆ ಅಲ್ಲೇ ಬೇರುಕೊಟ್ಟು ಬೆಳೆಯುತ್ತದೆ.ಇದು ಪೊದೆಯಂತೆ ಬೆಳೆಯುವ ಒಂದು ಗಿಡ ಆದರೆ ಔಷಧೀಯ ಗುಣ ಅಪಾರ . ಕಪನಿವಾರಕ ನೋವುನಿವಾರಕ. ಸಸ್ಯಶಾಸ್ತ್ರೀಯ... ಅಡತೊಡಜೈಲಾನಿಕ ಕುಟುಂಬ.. ಅಕ್ಯಾಂಥೇಸಿಯೆ. ಸಂಸ್ಕೃತದಲ್ಲಿ - ವಾಸಕ ಹಿಂದಿಯಲ್ಲಿ - ಅಡುಲ್ಸ ಇಂಗ್ಲೀಷ್ ನಲ್ಲಿ -.ಮಲಬಾರನಟ್. ಯಾವ ಯಾವ ಕಾಯಿಲೆಗೆ? ೧.ಕೊವೆ ೨.ಸಾಮಾನ್ಯ ಕೆಮ್ಮು.೩. ಬಿಳಿಸೆರಗು ( ಶ್ವೇತಪ್ರದರ).೪ ವಾತದ ನೋವು ಹಾಗೂ ನೋವು ೫. ಮೊಳೆ ಮೂಲವ್ಯಾಧಿ ಇತ್ಯಾದಿ ೧.ಕೋವೆ ಅಂದರೆ ನಮ್ಮದು ಗ್ರಾಮ್ಯ ಭಾಷೆಯಲ್ಲಿ ಕರೆಯುವದು ಅದನ್ನು ಬೇರೆ ಬೇರೆ ರೀತಿಯಲ್ಲಿ ಕರೆಯ ಬಹುದು. ಹೀಗೆಂದರೆ ಸಣ್ಣ ಮಕ್ಕಳಲ್ಲಿ ಕಾಡುವ ರೋಗ ಇದನ್ನು ನೀವು ಪ್ರಾರಂಭಿಕ ಹಂತದಲ್ಲೇ ಪರಿಹರಿಸದಿದ್ದರೆ ಮುಂದೆ ದಮ್ಮಿಗೆ ಕಾರಣವಾಗುತ್ತದೆ ಎಂದು ನಮ್ಮಹಿರಿಯರು ಹೇಳುತ್ತಾರೆ.

ಲಕ್ಷಣಗಳು ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ ಹಾಗೆ ಶ್ವಾಸ ತೆಗೆದುಕೊಳ್ಳುವಾಗ ಗೊರ ಗೊರ ಸದ್ದು ಬರುತ್ತದೆ ಇದಕ್ಕೆ ನೀವು ಮಾಡಬೇಕಾದದ್ದು ಇಷ್ಟೆ ಆಡುಸೋಗೆ ಎಲೆ ತಂದು ಬಿಸಿ ಬೂದಿಯಲ್ಲಿ ಹುಗಿದು ರಸತೆಗೆದು ಅದಕ್ಕೆ ಜೇನುತುಪ್ಪ ಒಂದೊಂದು ಚಮಚ ಕುಡಿಸಿ ಆದರೆ ಒಂದು ವರ್ಷ ದ ಒಳಗಿನ ಮಕ್ಕಳಿಗೆ ಬೇಡ ಅವರಿಗೆ ಸೊಪ್ಪಿನ ಶಾಖ ಎದೆಗೆ ಮಾಡಿ ಸಾಕು ಅಥವಾ ಹಾಲುಣ್ಣಿಸುವ ತಾಯಿ ಔಷಧ ತೆಗೆದು ಕೊಂಡರೆ ಮಗುವಿಗೆ ಹಾಲಿನ ಮೂಲಕ ಪೂರೈಕೆ ಆಗಬಹುದು. ಆದರೂ ಶರಿರದ ಪರಿಸ್ಥಿತಿ ಗಮನಿಸಿ ಔಷಧ ನೀಡಿರಿ ೨.ಕಪದ ಕೆಮ್ಮಿಗೆ ಬೇರನ್ನು ಲಿಂಬುರಸದಲ್ಲಿ ತೇದು ವಯೋಮಾನಕ್ಕೆ ಅನುಗುಣವಾಗಿ ೧-೨ ಚಮಚ ಗಂಧ ನೆಕ್ಕಿಸಿ ಇದರಿಂದ ಕಪ ವಾಂತಿಯಾಗಿ ಹೋಗುವದು. ೩. ಹಾಗೇ ವಿಚಿತ್ರ ಎಂದರೆ ಯಾಕೆ ವಿಚಿತ್ರ ಅದನ್ನೂ ಹೇಳಿದಿದ್ದರೆ ಹೇಗೆ ಅಲ್ವೇ?ನೋಡಿ ಒಂದೇ ಗಿಡ ಔಷಧ ಬೇರೆ ಬೇರೆ ಖಾಯಿಲೆಗೆ ಬೇರಿನಗುಣ ಒಂದಾದ್ರೆ ಎಲೆಯ ಗುಣವೇ ಬೇರೆ!!  ಈ ಗಿಡದ ಎಲೆರಸ ತೆಗೆದು ೧೫ಮಿಲಿ + ಜೇನುತುಪ್ಪ ಸೇರಿಸಿ ಕುಡಿಸಿದರೆ ರಕ್ತವಾಂತಿ ನಿಲ್ಲುತ್ತದೆ. ೪.ಕಜ್ಜಿ,ತುರಿಕೆ  ಕಜ್ಜಿ ತುರಿಕೆ ಇತ್ಯಾದಿ ಚರ್ಮರೋಗಕ್ಕೆ ಆಡುಸೋಗೆ ಸೊಪ್ಪು ಗೋಮೂತ್ರದಲ್ಲಿ ಅರೆದು ಲೇಪಿಸಿ ೨ ತಾಸು ಬಿಟ್ಟು ಸ್ನಾನಮಾಡಿರಿ ಆದರೆ  ಸೀಗೆಪುಡಿ ಅಥವಾ ಅಂಟುವಾಳದ ಕಾಯಿ ಸ್ನಾನಕ್ಕೆ ರೋಗ ಕಡಿಮೆ ಆಗುವವರೆಗಾದರೂ ಬಳಸಿರಿ ೫. ತೊನ್ನು  ಆಡುಸೋಗೆ ಸೊಪ್ಪಿನರಸ ಸುಮಾರು ೨೦ ಮಿಲಿ+ ೨ ಚಮಚ ಜೇನುತುಪ್ಪ ಬೆರೆಸಿ ಬೆಳಿಗ್ಗೆ ಸಂಜೆ ಸೇವಿಸಿರಿ.ಹಾಗೆಯೇ ಆಡುಸೋಗೆ ಸೊಪ್ಪನ್ನ ನೀವು ಸ್ನಾನ ಮಾಡುವ ಬಿಸಿ ನೀರಿಗೆ ಹಾಕಿ ಸ್ನಾನ ಮಾಡುತ್ತಾಬನ್ನಿ ತೊನ್ನು ನಿವಾರಣೆ ಆಗುತ್ತದೆ.ಆದರೆ ದೀರ್ಘಕಾಲದ ಔಷಧ ಮಾಡಬೇಕು. ತೊನ್ನು ಬಲು ಬೇಗ ತೊಲದಗದ ರೋಗ ಎರಡು ಮೂರು ವರ್ಷಗಳಕಾಲ ಔಷಧ ಬೇಕೇ ಬೇಕು ೬. ರಕ್ತ ಮೂಲವ್ಯಾದಿ ಇದಕ್ಕೆ ಸ್ವಲ್ಪ ಆಡುಸೋಗೆ ಸೊಪ್ಪಿನ ರಸ  ಸೇವಿಸಿ  ಮತ್ತು ಮೂಲವ್ಯಾಧಿ ಮೊಳೆಗೆ ಸೊಪ್ಪಿನ ಶಾಖ ನೀಡಿರಿ.( ಪೂರಕ ಔಷಧ ) ೭.ಕೆಮ್ಮು. ಮಕ್ಕಳಿಗೆ ಕಾಡುವಕೆಮ್ಮಿಗೆ ಆಡುಸೋಗೆ ೮/೧೦ ಹೂವು ಹಾಕಿ ಕಷಾಯ ಮಾಡಿ ಕಲ್ಲುಸಕ್ಕರೆ ಬೆರೆಸಿ ಕೊಡಿ ದಿನಕ್ಕೆರಡುಸಲ.ಒಣಗಿಸಿ ಇಟ್ಟ ಹೂವಿನ ಪುಡಿ ಆದರೆ ೧ ರಿಂದ ಒಂದುವರೆ ಗ್ರಾಂ ಸಾಕು.  ಬೇಸಿಗೆಯಲ್ಲಿ ಬಿಳಿಯ ಹೂ ಆಗುತ್ತದೆ ಅದನ್ನು ಕಿತ್ತು ನೆರಳಲ್ಲಿ ಅಥವಾ ಎಳೆಬಿಸಿಲಿಗೆ ಹಾಕಿ ಪುಡಿಮಾಡಿ ಗಾಳಿ ಆಡದಂತೆ ಶೀಷೆಯಲ್ಲಿ ತುಂಬಿಟ್ಟು ಬೇಕಾದಾಗ ಬಳಸಲಿಕ್ಕೆ ಅನುಕೂಲ. ೮.ಬಿಳಿಸೆರಗು ಇದಕ್ಕೆ ದಿನಕ್ಕೆರಡು ಸಲದಂತೆ ೨೦ ಮಿಲಿ ಆಡುಸೋಗೆ ಎಲೆಯರಸಕ್ಕೆ ೫ ಮಿಲಿ ಜೇನುತುಪ್ಪ ಸೇರಿಸಿ ಆಹಾರದ ಅರ್ಧಗಂಟೆ ನಂತರ ಸೇವಿಸಿರಿ . ೯.ಉರಿಮೂತ್ರ/ ಮೂತ್ರತಡೆ ಇಂಥಹ ಸಂಧರ್ಭದಲ್ಲಿ ಆಡುಸೋಗೆ ಹೂವನ್ನು( ೧೦) ಕಷಾಯ ಮಾಡಿ ೨ ಸಲ ಸೇವಿಸಿ. ೧೦. ಸಂದುವಾತದ ನೋವಿಗೆ. ಮೊದಲು ನೋವಿರುವಲ್ಲಿ ತೆಂಗಿನ ಎಣ್ಣೆ ಹಚ್ಚಿ ಆಮೇಲೆ ಒಂದು ಸಣ್ಣ ಬಾಯಿಯ ಪಾತ್ರೆ ತೆಗೆದುಕೊಂಡು ನೀರುಹಾಕಿ ಬಾಯಿಗೆ ತೆಳುವಾದ ಬಟ್ಟೆಕಟ್ಟಿ ಮತ್ತು ಒಲೆಯ ಮೇಲಿಡಿ ಈಗ ಸೊಪ್ಪನ್ನು ೨ ಗಂಟುಗಳನ್ನು ಬಟ್ಟೆಯಲ್ಲಿ ಮೊದಲೇ ಕಟ್ಟಿಡಿ ನೀರಿನಪಾತ್ರೆ ಬಿಸಿ ಆದಮೇಲೆ ಅದರಮೇಲೆ ಒಂದು ಗಂಟನ್ನು ಇಡಿ ಬಿಸಿ ಆದಮೇಲೆ ಶಾಖಮಾಡಿಕ ತೆಗೆದುಕೊಳ್ಳಿ ಇನ್ನೊಂದು ಸೊಪ್ಪಿನ ಗಂಟು ಉಗಿಯ ಮೇಲಿಡಿ ಒಂದಾದನಂತರ ಒಂದರಂತೆ ನೋವಿದ್ದಲ್ಲಿ ಶಾಖ ಮಾಡಿ ಹೀಗೆ ೨೦ ನಿಮಿಷ ಮಾಡಿ ಹಿಗೇ ವಾರದಕಾಲ ಮುಂದುವರಿಸಿ.  ಹೀಗೆ ಮಾಡುವುದರಿಂದ ವಾತದ ನೋವು, ವಾಯು ನೋವು , ಸಾದಾ ನೋವು ಅಂದ್ರೆ ತಕ್ಷಣಕ್ಕೆ ಏಟು ಬಿದ್ದಾಗಿನ ನೋವೂ ಕೂಡ ಕಡಿಮೆ ಆಗುತ್ತೆ ಆದರೆ ವಾತದ ನೋವಿಗೆ ಹಳೆಯ ತುಪ್ಪ ನೋವಿರುವ ಭಾಗಕ್ಕೆ ಹಚ್ಚಿ ಶಾಖ ನೀಡಿರಿ. ೧೧.ಜಂತು ನಿವಾರಣೆ ಆಡುಸೋಗೆ ಬೇರನ್ನು ನೀರಿನಲ್ಲಿ ತೇದು ಸಣ್ಣ ವರಿಗೆ೨, ದೊಡ್ದವರಿಗೆ೪ ಚಮಚ ಸೇವಿಸಲು ಕೊಡಿ ಹಾಗೆ ಆಹಾರದ ಅರ್ಧಗಂಟೆ ನಂತರ ದಿನಕ್ಕೆರಡುಸಲ ಕೊಡಿ ಇದರಿಂದ ಜಂತು ಹುಳ ಮಲದ ಮೂಲಕ ಹೊರಬೀಳುತ್ತದೆ.ಬಿದ್ದಿಲ್ಲ ಅಂತಾದರೆ ೨ ದಿನ ಈ ಔಷಧ ಮುಂದುವರಿಸಿ. ಈಗಿನ ದಿನದಲ್ಲಿ ಚಿಕ್ಕ ಮಕ್ಕಳಿಗೆ ಪದೇ ಪದೇ ಜಂತು ಆಗಲು ಕಾರಣ ಅವರ ಆಹಾರ ಇರಬಹುದು  ಜಂತು ಔಷಧ ನೀಡಿ ಎರಡು ತಿಂಗಳಿಗೆ ಪುನಃ ತೊಂದರೆ ಕಾಡುತ್ತದೆ ಆಗ ಮತ್ತೆ ನೀವು ಇನ್ನೊಮ್ಮೆ ಅಲೊಪಥಿ ಔಷಧ ಇನ್ನೊಮ್ಮೆ ನೀಡುವುದು ಆರುತಿಂಗಳು ಕಾಯಬೇಕು ಆಗ ಇಂತಹ ಮನೆಮದ್ದು ಉತ್ತಮ ಅಲ್ಲವೇ? ೧೧.ಚವಿ ಚವಿದೋಷದಿಂದ ಮಕ್ಕಳಲ್ಲಿ ಶರೀರ ದುರ್ಬಲವಾಗಿ ಮೈ ಅರಿಶಿನ ಬಣ್ಣ ಬರುತ್ತದೆ ಇದಕ್ಕೆ ಬಾಳಂತಿ ಶಿಶು ಇಬ್ಬರೂ ತಾಮ್ರದ ಹಂಡೆಗೆ ೨೧ ಎಲೆ ಹಾಕಿ ನೀರು ಕಾಯಿಸಿ ಸ್ನಾನ ಮಾಡಿಸಿ ೧೨. ಕತ್ತು ನೋವು ಕತ್ತು ನೋವಿಗೆ ಅರ್ಧಕೆಜಿಯಷ್ಟು ಆಡುಸೋಗೆ ಸೊಪ್ಪಾನ್ನು ಕೊಯ್ದು ನೇರವಾಗಿಟ್ಟು ಕಟ್ಟು ಕಟ್ಟಿ ಸರಿ ಮದ್ಯಭಾಗ ಕತ್ತರಿಸಿ ಹಾಗೆ ಇಟ್ಟ್ಂಗಿ ಬೆಂಕಿಗೆ ಹಾಕಿ ಕಾಯಿಸಿ ಅದರ ಮೇಲೆ ಆಡುಸೋಗೆ ಎಲೆಯಕಟ್ಟು ಕತ್ತರಿಸಿದ ಭಾಗ ಬಿಸಿ ಆಗುವಂತೆ ಮಾಡಿ ಅದರಿಂದ ಕುತ್ತಿಗೆಗೆ ಶಾಖ ಮಾಡಿರಿ -----00--



ಪ್ರದೀಪ ಜಿ.ಹೆಗಡೆ ಬರಗದ್ದೆ ಕುಮಟಾ.

75 views0 comments
bottom of page