top of page

n.s.l.bhat a memory

ನನಗೆ 1984ರಿಂದ ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರೊಂದಿಗೆ ಸಂಪರ್ಕ. ನಾನು ಕಂಬಾರರ ಮಾರ್ಗದರ್ಶನದಲ್ಲಿ ಪಿಎಚ್. ಡಿ. ಅಧ್ಯಯನ ಮಾಡುತ್ತಿದ್ದೆ. ಪ್ರತೀ ವಾರ ಬಸವನಗುಡಿಯಿಂದ ಜ್ಞಾನಭಾರತಿ ಕ್ಯಾಂಪಸ್ ಗೆ ಪ್ರಯಾಣ. ಕೆಲವು ಬಾರಿ ಅಧ್ಯಾಪಕರು-ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಚೇರಿ ಬಸ್ಸಲ್ಲೇ ನಾನೂ ಸೇರಿಕೊಳ್ಳುತ್ತಿದ್ದೆ. ಜಿ ಎಸ್ ಎಸ್, ಲಕ್ಷ್ಮೀನಾರಾಯಣ ಭಟ್ಟರು, ಕಿ ರಂ, ಡಿ ಆರ್, ಬರಗೂರು, ದಲಿತಕವಿ ಸಿದ್ದಲಿಂಗಯ್ಯ, ಹಂಪನಾ, ಸುಮತೀಂದ್ರ ನಾಡಿಗ್ ಮೊದಲಾದವರು ನನಗೆ ಆತ್ಮೀಯರಾದದ್ದು ಆಗ. ಅನಂತರ ನೂರಾರು ಕಡೆ ಭಟ್ಟರು ಮತ್ತು ನಾನು ಭೇಟಿಯಾದದ್ದಿದೆ. ಭೇಟಿಯಾದಾಗಲೆಲ್ಲ ಕಾವ್ಯ ಮತ್ತು ಸಮಸಾಮಯಿಕ ವಿಚಾರಗಳ ಬಗ್ಗೆ ನಮ್ಮ ಚರ್ಚೆ. ಅವರು ಪ್ರತಿಭಾವಂತ ಕವಿ, ಒಳ್ಳೆಯ ವಿಮರ್ಶಕರು-ವೈಯಾಕಾರಣಿಗಳು ಎಲ್ಲಕ್ಕಿಂತ ಮೇಲಾಗಿ ಒಳ್ಳೆಯ ಅಧ್ಯಾಪಕರು. ಸಹೃದಯಿ ವ್ಯಕ್ತಿ. ಹಳಗನ್ನಡ ಸಾಹಿತ್ಯದ ಮೇಲೆ ಅವರಿಗೆ ಅಪಾರ ಹಿಡಿತವಿತ್ತು. ಅವರದು ಪುಣ್ಯಜೀವ.


ಈಗ್ಗೆ 7-8 ವರ್ಷಗಳಿಂದ ಭೇಟಿಯಾಗಿರಲಿಲ್ಲ. ಅವರಿಲ್ಲ ಎಂದಾಗ ದುಃಖವಾಯಿತು. ಅವರಿಗೆ ಸದ್ಗತಿ ದೊರೆಯಲಿ.

-ಡಾ. ವಸಂತಕುಮಾರ ಪೆರ್ಲ.

4 views0 comments

Comments


bottom of page