top of page

ಹರಿಗೋಲಲ್ಲಿ...!

ಎಡಕ್ಕೆ ನೀನು ಬಲಕ್ಕೆ ನಾನು

ಅಥವ ಅದಲು ಬದಲು

ನಡುವೆ ಬರುವ ಅವನು

ಅಥವ ಅವಳು

ಎಂಬೀ ಯೋಜನೆಯಲಿ

ಬೆರಗಿನ ಕಥೆ ಬರೆಯಲು

ಜೊತೆಯಾದವರು ನಾವು

ಪ್ರೇಮದ ಕಬಂಧ ಬಿಗಿ

ತೆಕ್ಕೆಯಲಿ ಬಂಧಿಯಾದವರು..


ಹೊಸ ಹರುಷದಲಿ ಇಬ್ಬರು

ಮುಗಿಲೆತ್ತರ ತೇಲಾಡಿದೆವು

ಕೈಕೈ ಹಿಡಿದು ನಡೆದೋಡಿದೆವು

ಸೈಕಲ್ ಸವಾರಿ ಹೋಗಿ

ಮಿಂಚಂತೆ ಹರಿದಾಡಿದೆವು...

ನಂತರ ಒಂದು ದಿನ -

ಹರಿಗೋಲೊಳಗೆ

ರಭಸ ಹರಿವ ನದಿಯೊಳಗೆ

ಝಲ್ಲೆನಿಸುವ ಪುಳಕಕ್ಕೆ

ಹತ್ತಿ ತೇಲಾಡುತ್ತಾ...

ಖುಷಿಯಲಿ ಹಗುರಾಗುತ್ತಾ...ಹಾಗೆ

ದಢಕ್ಕನೆ ನೀ ಮಾಯವಾದೆ...!


ಈಜು ಬರದ ನಾನು

ನಿನ್ನ ಈಜಿನ ಬಲವಿಲ್ಲದೆ

ಈಗ ನಡುನದಿಯಲ್ಲಿ

ಒಬ್ಬನೇ ಹರಿಗೋಲಲ್ಲಿ...!


ಡಾ. ಅರಕಲಗೂಡು ನೀಲಕಂಠ ಮೂರ್ತಿ.

2

5 views0 comments

Comments


bottom of page